ಶನಿವಾರಸಂತೆ, ಸೆ. 15: ಆಲೂರು ಸಿದ್ದಾಪುರ ಗ್ರಾಮದ ಮೀಸಲು ಅರಣ್ಯದಲ್ಲಿ ಗುರುವಾರ ಬೆಳಗ್ಗಿನ ಜಾವ ನಾಲ್ವರು ಆರೋಪಿಗಳು ಶ್ರೀಗಂಧದ ಮರವೊಂದನ್ನು ಕಡಿದು (ಮೌಲ್ಯ ರೂ. 1 ಲಕ್ಷ) ಗೋಣಿಚೀಲ ದಲ್ಲಿ ತುಂಬಿಸಿಕೊಂಡು ಸಾಗಿಸುತ್ತಿರು ವಾಗ ಅರಣ್ಯ ಇಲಾಖೆಯವರು ಪತ್ತೆ ಹಚ್ಚಿದ ಪ್ರಕರಣ ಅರಣ್ಯ ಇಲಾಖೆಯಲ್ಲಿ ದಾಖಲಾಗಿದೆ.

ಆಲೂರು ಸಿದ್ದಾಪುರ ಗ್ರಾಮದ ಜಾನಕಿ ಕಾಳಪ್ಪ ಕಾನ್ವೆಂಟ್ ಪಕ್ಕದ ಮೀಸಲು ಅರಣ್ಯದ ಅಂಚಿನಲ್ಲಿ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ಹಾಗೂ ಸಿಬ್ಬಂದಿ ಗಸ್ತಿನಲ್ಲಿರುವಾಗ ದೊರೆತ ಮಾಹಿತಿಯ ಮೇರೆ, ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರ ವೊಂದನ್ನು ಕಡಿದು ಗೋಣಿಚೀಲದಲ್ಲಿ 4 ತುಂಡುಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಸ್ಥಳಕ್ಕೆ ಧಾವಿಸಿ ಆರೋಪಿ ಕಡ್ಲೆಮಕ್ಕಿ ಹಾಡಿಯ ಅಣ್ಣಯ್ಯನನ್ನು ಶ್ರೀಗಂಧ ತುಂಬಿದ ಚೀಲ ಸಹಿತ ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳಾದ ಆಲೂರು ಸಿದ್ದಾಪುರ ಗ್ರಾಮದ ಎಸ್.ಆರ್. ಸೋಮಪ್ಪ, ಮಾಲಂಬಿ ಗ್ರಾಮದ ಕುಮಾರ ಹಾಗೂ ಹಾರೇ ಹೊಸೂರು ಗ್ರಾಮದ ರವಿ ಕಾಡಿನೊಳಗಡೆ ಓಡಿ ಪರಾರಿ ಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆಯವರು ಆರೋಪಿ ಅಣ್ಣಯ್ಯನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಅರಣ್ಯ ವಲಯಾಧಿಕಾರಿ ಯೊಂದಿಗೆ ಸಿಬ್ಬಂದಿ ಎಸ್.ಎ. ನಾಗರಾಜ್, ಬಿ. ರುಕ್ಮಯ್ಯ, ಶ್ರೀನಿವಾಸ್, ಲೋಹಿತ್, ನವೀನ್, ದೇವಿಕಾಂರ್, ವೆಂಕಟೇಶ್, ಚಾಲಕರುಗಳಾದ ಹರೀಶ್ ಕುಮಾರ್ ಮತ್ತು ಭರತ್ ಪಾಲ್ಗೊಂಡಿದ್ದರು.