ಪೊನ್ನಂಪೇಟೆ, ಸೆ. 15: ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ 1928ರ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಆರ್‍ಬಿಐ ಲೈಸನ್ಸ್ ಪಡೆದು ಪ್ರಸ್ತುತ ಬ್ಯಾಂಕಿನಲ್ಲಿ 2381 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ 3.31 ಕೋಟಿಗಳಷ್ಟಿದ್ದು, ದುಡಿಯುವ ಬಂಡವಾಳ 46.20 ಕೋಟಿಯಿದ್ದು, ಬ್ಯಾಂಕಿನ ಒಟ್ಟು ವ್ಯವಹಾರ 163.46 ಕೋಟಿಯಾಗಿರುತ್ತದೆ. 2016-17ನೇ ಸಾಲಿನ 75.75 ಲಕ್ಷ ಒಟ್ಟು ಲಾಭಗಳಿಸಿದೆ. ಇದರಲ್ಲಿ ಶೇ. 33 ಆದಾಯ ತೆರಿಗೆಯಾಗಿ 20.45 ಲಕ್ಷ ಕಾದಿರಿಸಿದ್ದು, ವರದಿ ಸಾಲಿನಲ್ಲಿ ತನ್ನ ಸದಸ್ಯರಿಗೆ ಪಾಲು ಹಣದ ಮೇಲೆ ಶೇ. 13ರ ಡಿವಿಡೆಂಡ್‍ನ್ನು ಪಾವತಿಸಲಾಗುವದೆಂದು ಆಡಳಿತ ಮಂಡಳಿಯ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಚಿರಿಯಪಂಡ ಕೆ. ಉತ್ತಪ್ಪ ಮಾಹಿತಿ ನೀಡಿದರು.

ಬ್ಯಾಂಕ್ ತನ್ನ ಸದಸ್ಯರಿಗೆ ಮರಣನಿಧಿ ಸ್ಥಾಪಿಸಿದ್ದು, ವಯೋಮಿತಿಯನ್ನು 75 ವರ್ಷಕ್ಕೆ ಏರಿಸಿ ಮರಣಪಟ್ಟ ಸದಸ್ಯರ ವಾರಿಸುದಾರರಿಗೆ ರೂ. 1 ಲಕ್ಷ ಹಣವನ್ನು ನೀಡಲಾಗುತ್ತಿದೆ ಎಂದರು. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು, ಸದ್ಯದಲ್ಲೇ ಖಾತೆದಾರರಿಗೆ ಹೆಚ್ಚಿನ ಸೇವೆ ನೀಡಲಾಗುವದೆಂದು ತಿಳಿಸಿದರು.

ಮಹಾಸಭೆ: ತಾ. 18 ರಂದು ಪೂರ್ವಾಹ್ನ 10.30 ಗಂಟೆಗೆ ಸಹಕಾರ ಭವನದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಎಂ.ಪಿ. ಅಪ್ಪಚ್ಚು, ನಿರ್ದೇಶಕರುಗಳಾದ ಸಿ.ಎಂ. ಪೊನ್ನಪ್ಪ, ಸಿ.ಕೆ. ದೇವಯ್ಯ, ಐ.ಕೆ. ಬೋಪಣ್ಣ, ಸಿ.ಎಸ್. ಉತ್ತಪ್ಪ, ಕೆ. ದಯಾ ಚಂಗಪ್ಪ, ಎಂ.ಎಸ್. ದೇವಕ್ಕಿ, ಎಂ. ಬೀಟಾಲಕ್ಷ್ಮಣ, ಎಂ.ಬಿ. ನಂಜಪ್ಪ, ಹೆಚ್.ಎ. ಪ್ರಭು, ಪಿ.ಬಿ. ಪೂಣಚ್ಚ, ಬ್ಯಾಂಕಿನ ವ್ಯವಸ್ಥಾಪಕ ಎಸ್.ಎಂ. ಗಂಗಮ್ಮ ಉಪಸ್ಥಿತರಿದ್ದರು.