ಗೋಣಿಕೊಪ್ಪಲು, ಸೆ. 15: ಇಲ್ಲಿನ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಸಕ್ತ ಸಾಲಿನಲ್ಲಿ 28.75 ಲಕ್ಷ ನಿವ್ವಳ ಲಾಭ ಪಡೆದಿದ್ದು. ಶೇ15 ಡಿವಿಡೆಂಡ್ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಉತ್ತಮ ಲಾಭಪಡೆಯುವ ಮೂಲಕ ಸಾಧನೆ ಮಾಡಿದೆ. ಪಿಗ್ಮಿ, ಉಳುವರಿ, ನಿರಖು ಹಾಗೂ ಇತರ ಠೇವಣಿಗಳು ಸೇರಿ ಒಟ್ಟು 16,14,65,069 ರೂ ಠೇವಣಿಗಳಿವೆ. ಕೆಡಿಸಿಸಿ ಬ್ಯಾಂಕಿನಲ್ಲಿ ಒಟ್ಟು 3,27,74,203 ರೂಪಾಯಿ ನಿರಖು ಠೇವಣಿ ಇದೆ. 12,83,20,792 ರೂಪಾಯಿ ಸಾಲ ನೀಡಿದ್ದು 9,90,63,883 ಸಾಲ ಮರುಪಾವತಿ ಮಾಡುವ ಮೂಲಕ ಶೇ90 ರಷ್ಟು ಗುರಿ ಮುಟ್ಟಿದೆ ಎಂದು ತಿಳಿಸಿದರು. ವೀರಾಜಪೇಟೆ ಮತ್ತು ಶ್ರೀಮಂಗಲ ಶಾಖೆಗಳು ಕೂಡ ಉತ್ತಮ ಲಾಭ ಪಡೆದಿದ್ದು ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ. ಗೋಣಿಕೊಪ್ಪದಲ್ಲಿ ಸ್ವಂತ ಕಟ್ಟಡದಿಂದ ಮಾಸಿಕ 14 ಸಾವಿರ ರೂ ಹಣ ಬರುತ್ತಿದ್ದು. ಇದನ್ನು ಕರ್ನಾಟಕ ಬ್ಯಾಂಕ್‍ನ ಖಾತೆಯಲ್ಲಿ ಹೂಡಲಾಗಿದ್ದು 12 ಲಕ್ಷ ರೂಪಾಯಿ ಹಣ ಉಳಿತಾಯವಾಗಿದೆ.

ತಾ. 22 ರಂದು ನಗರದ ಜಿಆರ್‍ಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯುವ ಮಹಾಸಭೆಯಲ್ಲಿ ಅತಿ ಹೆಚ್ಚು ಪಿಗ್ಮಿ ಸಂಗ್ರಹ ಮಾಡಿದ ಮೂವರಿಗೆ ಸನ್ಮಾನ ಮಾಡಲಾಗುವದು. 2016-17ನೇ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಿಬ್ಬಂದಿಗಳ ಮಕ್ಕಳನ್ನು ಗುರುತಿಸಿ ಸನ್ಮಾನ ಮಾಡಲಾಗುವದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಸುನಿಲ್ ಮಾದಪ್ಪ, ನಿರ್ದೇಶಕರುಗಳಾದ ಎ.ಜೆ. ಬಾಬು, ಮುರುಗಾ, ಕೆ.ಎನ್. ದೇವಯ್ಯ ಹಾಗೂ ಕಾರ್ಯದರ್ಶಿಗಳಾದ ಶಿಲ್ಪಾ ಇದ್ದರು.