ಮಡಿಕೇರಿ, ಸೆ.15: ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಮತ್ತು ಸಂಯುಕ್ತ ಪದವಿ ಪೂರ್ವ ವಿದ್ಯಾಲಯಗಳ ಪ್ರಾಂಶುಪಾಲರ ಸಂಘ ಇವರ ವತಿಯಿಂದ ತಾ. 16 ರಂದು (ಇಂದು) ಬೆಳಗ್ಗೆ 11.30 ಗಂಟೆಗೆ ಶೈಕ್ಷಣಿಕ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆಯು ಎಫ್.ಎಂ.ಸಿ.ಪದವಿ ಕಾಲೇಜು ರಸ್ತೆಯ ಮುಖ್ಯೋಪಾಧ್ಯಾಯರ ಸಂಘದ ಕಟ್ಟಡದಲ್ಲಿ ನಡೆಯಲಿದೆ.