ಮಡಿಕೇರಿ, ಸೆ. 16: ಜಿಲ್ಲಾ ನೆಹರು ಯುವ ಕೇಂದ್ರವು 2016-17 ನೇ ಸಾಲಿಗಾಗಿ ಯುವ ಜನತೆಯಿಂದ “ಸಂಘ-ಮಂಡಳಿ” ಪ್ರಶಸ್ತಿ ವಿಭಾಗಕ್ಕೆ ಅರ್ಜಿ ಆಹ್ವಾನಿಸಿದೆ. ನಿಗದಿತ ಅರ್ಜಿ ನವiೂನೆಯನ್ನು ಪಡೆದು ತಾ. 22 ರೊಳಗೆ ಸಲ್ಲಿಸಲು ಕೋರಲಾಗಿದೆ.

ಜಿಲ್ಲೆಯಲ್ಲಿ ಸಮುದಾಯದ ಅಭ್ಯುದಯಕ್ಕಾಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಯುವಕ-ಯುವತಿ/ಮಹಿಳಾ ಮಂಡಳಿಗಳಿಗೆ “ಸಂಘ-ಮಂಡಳಿ” ಪ್ರಶಸ್ತಿ ನೀಡಿ ಗೌರವಿಸಲಾಗುವದು. ಅತ್ಯುತ್ತಮ ಸಂಘ-ಮಂಡಳಿ ಎಂದು ಆಯ್ಕೆಯಾಗುವ ಒಂದು ಸಂಘ ಅಥವ ಮಂಡಳಿಗೆ ಪ್ರಶಸ್ತಿ ಪತ್ರ ಹಾಗೂ ಇಪ್ಪತೈದು ಸಾವಿರ (25,000) ನಗದು ನೀಡಲಾಗುವದು.

ಅರ್ಜಿ ಸಲ್ಲಿಸುವ ಸಂಘ/ಮಂಡಳಿಯು ಜಿಲ್ಲಾ ನೋಂದಾವಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತವಾಗಿರಬೇಕು. ಜಿಲ್ಲಾ ನೆಹರು ಯುವ ಕೆಂದ್ರಕ್ಕೆ ಸಂಯೋಜನೆಗೊಂಡಿರಬೇಕು. ತಾ. 1.4.2016 ರಿಂದ 31.3.2017 ವರಗೆ ಸಂಘ ಮಂಡಳಿಗಳು ನಡೆಸಿರುವ ಸಾಮಾಜಿಕ, ಶೈಕ್ಷಣಿಕ, ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಪರಿಸರ ಸಂರಕ್ಷಣೆ, ಗ್ರಾಮ ನೈರ್ಮಲ್ಯ, ಕುಟುಂಬ ಕಲ್ಯಾಣ, ಪಲ್ಸ್ ಪೆÇೀಲಿಯೋ, ಏಡ್ಸ್, ಇತರೆ ಜನಪರ ಕಾರ್ಯಕ್ರಮಗಳ ಮೂಲಕ ಸಮುದಾಯದ ಅಭ್ಯುದಯಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಘ/ಮಂಡಳಿಗಳು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ಕೊಡಗಿನ ಕೆ.ಡಿ.ಹೆಚ್.ಬಿ.ಸಿ.ಎಸ್ ಕಟ್ಟಡ, 2ನೇ ಮಹಡಿ ಹೊಸ ಬಡಾವಣೆ ಮಡಿಕೇರಿ. ನೆಹರು ಯುವ ಕೇಂದ್ರದ ಕಚೇರಿಯಲ್ಲಿ ಪಡೆದು ಸರಿಯಾಗಿ ಭರ್ತಿ ಮಾಡಿ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿ ತಾ. 22 ರೊಳಗೆ ನೆಹರು ಯುವ ಕೇಂದ್ರಕ್ಕೆ ಸಲ್ಲಿಸಲು ಕೋರಲಾಗಿದೆ. ವಿವರಗಳಿಗೆ08272-225470 ಸಂಪರ್ಕಿಸಬಹುದು.