ಮಡಿಕೇರಿ, ಸೆ. 16: ನೆನೆಗುದಿಗೆ ಬಿದ್ದಿರುವ ಮಡಿಕೇರಿಯ ಹೈಟೆಕ್ ಮಾರುಕಟ್ಟೆ ಕಾಮಗಾರಿ ಪುನರಾರಂಭಿ ಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಾರುಕಟ್ಟೆ ಪ್ರಾಂಗಣ ಬಳಿ ಪ್ರತಿಭಟನೆ ನಡೆಸಲಾಯಿತು.

ನಗರದ ಜನತೆಯ ಬಹು ಬೇಡಿಕೆ ಯಾದ ಮಾರುಕಟ್ಟೆ ಕಾಮಗಾರಿ ಪ್ರಾರಂಭಗೊಂಡು 4 ವರ್ಷಗಳು ಕಳೆದಿದ್ದರೂ ಇನ್ನೂ ಪೂರ್ಣಗೊಳ್ಳದ ಬಗ್ಗೆ ‘ಶಕ್ತಿ’ ವರದಿ ಮಾಡಿತ್ತು. ಈ ಬೆನ್ನಲ್ಲೇ ಪ್ರತಿಭಟನೆ ನಡೆಸಿದ ಇದೀಗ ಕಾಮಗಾರಿ ಸ್ಥಗಿತ ಗೊಂಡಿದ್ದು, ಪುನರಾರಂಭಿಸುವಂತೆ ಪ್ರತಿಭಟಿಸಲಾ ಯಿತು. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ, ನಗರಸಭೆ ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲದೆ ನಗರದ ರಸ್ತೆಗಳೆಲ್ಲವೂ ಗುಂಡಿಬಿದ್ದಿದ್ದು, ಇದರ ದುರಸ್ತಿಗೂ ನಗರಸಭೆ ಮುಂದಾಗು ತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ಥಳಕ್ಕಾಗಮಿಸಿದ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತೆ ಶುಭ ಅವರುಗಳಲ್ಲಿ ಪ್ರತಿಭಟನಾಕಾರರು ಕೂಡಲೇ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಸ್ಥಳಕ್ಕೆ ಗುತ್ತಿಗೆದಾರನ್ನು ಕರೆಸಿಕೊಂಡ ಅಧ್ಯಕ್ಷರು, ಗುತ್ತಿಗೆದಾರರಿಗೆ ಪಾವತಿಗೆ ಬಾಕಿ ಇರುವ ಹಣ ಮುಂದಿನ 45 ದಿನಗಳಲ್ಲಿ ಬಿಡುಗಡೆಯಾಗಲಿದೆ. ಕೂಡಲೇ ಕಾಮಗಾರಿ ಆರಂಭಿಸಿ, 2 ತಿಂಗಳೊಳಗಡೆ ಪೂರ್ಣ ಗೊಳಿಸು ವಂತೆ ಗುತ್ತಿಗೆದಾರರಿಗೆ ಸೂಚಿಸಿ ದರಲ್ಲದೆ, ಎರಡು ತಿಂಗಳಲ್ಲಿ ಮಾರುಕಟ್ಟೆ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಭರವಸೆ ನೀಡಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಕುಂಞಮ್ಮ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಎಸ್‍ಡಿಪಿಐ ನಗರಾಧ್ಯಕ್ಷ ಹಾಗೂ ನಗರಸಭಾ ಸದಸ್ಯರೂ ಆಗಿರುವ ಕೆ.ಜೆ. ಪೀಟರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ, ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ಮನ್ಸೂರ್, ನಗರ ಉಪಾಧ್ಯಕ್ಷ ಇದ್ರೀಸ್, ಪ್ರಧಾನ ಕಾರ್ಯದರ್ಶಿ ಮುಸ್ತಫಾ, ಮಾರುಕಟ್ಟೆ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ರಜಾಕ್, ಉಪಾಧ್ಯಕ್ಷ ಅಂಕುಶ್ ಕುಮಾರ್, ವ್ಯಾಪಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.