ಮಡಿಕೇರಿ, ಸೆ. 16: ಇತ್ತೀಚೆಗೆ ಬಾಳೆಲೆಯಲ್ಲಿ ಸಾಲ ಹಿಂತಿರುಗಿಸದ ಆರೋಪದೊಂದಿಗೆ ದಲಿತ ಹರೀಶ್ ಎಂಬ ಕಾರ್ಮಿಕನ ಮೇಲೆ ನಾಯಿ ಕಚ್ಚಿಸಿ ಹಿಂಸೆ ನೀಡಿರುವ ಪ್ರಕರಣ ಖಂಡಿಸಿ ಬಹುಜನ ವಿದ್ಯಾರ್ಥಿ ಸಂಘ ಹಾಗೂ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಿದ ಪ್ರಮುಖರು, ಆರೋಪಿ ಕಿಶನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಸಂಘಟನೆ ಪ್ರಮುಖ ಮೋಹನ್ ಮೌರ್ಯ ಘಟನೆಯನ್ನು ಖಂಡಿಸಿ ಮಾತನಾಡಿದರು. ದಲಿತ ಮುಖಂಡ ಮೊಣ್ಣಪ್ಪ ಹಾಗೂ ಇತರರು ಮಾನತಾಡಿ, ಸಮಾಜ ತಲೆ ತಗ್ಗಿಸಬೇಕಾದ ಕೃತ್ಯ ಇದೆಂದು ಖಂಡಿಸಿದರು. ಪ್ರಮುಖರಾದ ವಿರೇಂದ್ರ, ಕೃಷ್ಣ, ಪ್ರೇಮ್‍ಕುಮಾರ್, ದಿಲೀಪ್, ಪ್ರತಾಪ್, ನಾಗಾರ್ಜುನ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.