ಮಡಿಕೇರಿ ಸೆ.16 : ಮಡಿಕೇರಿ ದಸರಾಗೆ ಸರ್ಕಾರ ರೂ. 50 ಲಕ್ಷ ಬಿಡುಗಡೆಗೆ ಅನುಮತಿ ನೀಡಿದ್ದು, ಕಳೆದ ಬಾರಿಯಂತೆ ರೂ. 60 ಲಕ್ಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಸಿದ್ಧತೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದ್ಯ ಸರ್ಕಾರ ರೂ. 50 ಲಕ್ಷ ಬಿಡುಗಡೆಗೆ ಅನುಮತಿ ನೀಡಿದೆ. ಇನ್ನೂ ರೂ. 10 ಲಕ್ಷ ಬಿಡುಗಡೆಗೆ ಪ್ರಯತ್ನಿಸಲಾಗುವದು. ಹೆಚ್ಚುವರಿಯಾಗಿ 10 ರೂ. ಲಕ್ಷ ಬಿಡುಗಡೆ ಮಾಡದಿದ್ದಲ್ಲಿ ವೈಯಕ್ತಿಕವಾಗಿ ರೂ. 5 ಲಕ್ಷ ನೀಡಲಾಗುವದು. ಉಳಿದಂತೆ ತಾವುಗಳು ಸಹ ವೈಯಕ್ತಿಕವಾಗಿ ತಲಾ ರೂ. 25 ಸಾವಿರ ಹಣ ಭರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ನಗರಸಭೆಯ ಸದಸ್ಯರು, ದಸರಾ ಪದಾಧಿಕಾರಿಗಳಿಗೆ ಸಲಹೆ ಮಾಡಿದರು.

ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಗೋಣಿಕೊಪ್ಪ ದಸರಾವನ್ನು ವ್ಯವಸ್ಥಿತವಾಗಿ ನಡೆಸುವಂತೆ ಸೂಚನೆ ನೀಡಿದರು. ಕಳೆದ ಬಾರಿ ಕಲಾವಿದರಿಗೆ ಸಂಭಾವನೆ ಸರಿಯಾಗಿ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಈ ಬಾರಿ ರೂ. 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ರೂ. 15 ಲಕ್ಷ ಬಿಡುಗಡೆಗೆ

(ಮೊದಲ ಪುಟದಿಂದ) ಪ್ರಯತ್ನಿಸಲಾಗುವದು ಎಂದರು. ಸಭೆಯ ಆರಂಭದಲ್ಲಿ ಮಾತನಾಡಿದ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ ಅವರು ಕಳೆದ ವರ್ಷ ಸರ್ಕಾರ ಮಡಿಕೇರಿ ದಸರಾಕ್ಕೆ ರೂ. 60 ಲಕ್ಷ ಬಿಡುಗಡೆ ಮಾಡಿತ್ತು, ಈ ವರ್ಷ ರೂ. 50 ಲಕ್ಷ ಬಿಡುಗಡೆಗೆ ಅನುಮತಿ ದೊರೆತಿದೆ. ಇದು ಸಾಲುವದಿಲ್ಲ ಎಂದು ಸಚಿವರ ಗಮನಕ್ಕೆ ತಂದರು.

ಗಾಂಧಿ ಮೈದಾನದಲ್ಲಿ ವೇದಿಕೆ ನಿರ್ಮಾಣ, ದಸರಾ ದಶ ಮಂಟಪಗಳಿಗೆ ಅನುದಾನ, ಸಾಂಸ್ಕøತಿಕ ಕಾರ್ಯಕ್ರಮಗಳು, ಬಹುಮಾನ ವಿತರಣೆ, ಪದಕಗಳ ವಿತರಣೆ, ನಗರ ಅಲಂಕಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ರೂ. 80 ಲಕ್ಷ ಬಿಡುಗಡೆ ಮಾಡುವಂತೆ ಚುಮ್ಮಿ ದೇವಯ್ಯ ಕೋರಿದರು.

ಇದಕ್ಕೆ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವೀಣಾ ಅಚ್ಚಯ್ಯ ಅವರು ಸಚಿವರು ಹೇಳಿರುವದಕ್ಕೆ ಬದ್ಧರಾಗಿರುತ್ತಾರೆ. ಅದಕ್ಕೆ ದಸರಾ ಸಮಿತಿಯವರು ನಡೆದುಕೊಳ್ಳುವಂತೆ ಸಲಹೆ ಮಾಡಿದರು. ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಶಾಸಕರುಗಳ ನಿಧಿ ಪಡೆಯಲು ಸಲಹೆ ನೀಡಿದರು.

ಮಡಿಕೇರಿ ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಅವರು ತಾ. 21 ರ ನಂತರ ನಗರದಲ್ಲಿ ಮಹಿಳಾ ದಸರಾ, ಮಕ್ಕಳ ದಸರಾ, ಮಕ್ಕಳ ಸಂತೆ ಹೀಗೆ ವಿವಿಧÀ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೈಸೂರು ಮಾದರಿಯಲ್ಲಿ ದಸರಾ ರಜೆ ನೀಡುವಂತಾಗಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಸಂಬಂಧ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ದೇವಯ್ಯ ಅವರು ನಗರದ ಎಲ್ಲಾ ರಸ್ತೆಗಳು ಗುಂಡಿಯಾಗಿದ್ದು, ಶೀಘ್ರ ರಸ್ತೆ ಸರಿಪಡಿಸಬೇಕು ಎಂದು ಹೇಳಿದರು. ಅನಿತಾ ಪೂವಯ್ಯ ದಸರಾ ಸಂದರ್ಭದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾರ್ಗ ಬದಿ ವಿದ್ಯುತ್ ಕಂಬಗಳ ತೆರವಿಗೆ ಕೋರಿದರು. ಜಿ.ಪಂ.ಅಧ್ಯಕ್ಷÀ ಬಿ.ಎ. ಹರೀಶ್, ಬೈ.ಶ್ರೀ ಪ್ರಕಾಶ್, ಉಮೇಶ್ ಸುಬ್ರಮಣಿ, ದಸರಾ ಸಮಿತಿ ಪದಾಧಿಕಾರಿಗಳು ಇತರರು ಇದ್ದರು. ಪೌರಾಯುಕ್ತೆ ಶುಭ ಸ್ವಾಗತಿಸಿ, ವಂದಿಸಿದರು.