ವೀರಾಜಪೇಟೆ, ಸೆ. 18: ವ್ಯವಹಾರ ಹಾಗೂ ನಿರ್ವಹಣಾ ಶಾಸ್ತ್ರವು ಅಂತರರಾಷ್ಟೀಯ ಮಟ್ಟದಲ್ಲೂ ಜನಪ್ರಿಯವಾಗಿರುವ ಅಧ್ಯಯನ ವಿಷಯಗಳಾಗಿವೆ ಎಂದು ಕಾವೇರಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥ ರಾಘವೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ sಸಂತ ಅನ್ನಮ್ಮ ಪದವಿ ಕಾಲೇಜಿನ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಎರಡು ರಾಷ್ಟ್ರಗಳ ಹಣಕಾಸಿನ ಅಂಕಿಅಂಶಗಳನ್ನು ರೂಪಿಸುವಾಗ ಐಎಫ್‍ಆರ್‍ಎಸ್‍ನ ಬಳಕೆ ಹೇರಳವಾಗಿದೆ. ವ್ಯವಹಾರ ಹಾಗೂ ನಿರ್ವಹಣಾಶಾಸ್ತ್ರವು ವ್ಯಾಪಾರ, ಹಣಕಾಸು ಮುಂತಾದ ಅಂಶಗಳನ್ನು ಒಳಗೊಂಡಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್ ಮಾತನಾಡಿ ವ್ಯವಹಾರ ಹಾಗೂ ನಿರ್ವಹಣಾ ಶಾಸ್ತ್ರವು ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂದರು.

ವೇದಿಕೆಯಲ್ಲಿ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ಬಿ.ಡಿ. ಹೇಮ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗೌರಮ್ಮ ಹಾಗೂ ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕ ಸಂಕೇತ್ ಸ್ವಾಗತಿಸಿದರು. ವಿದ್ಯಾರ್ಥಿನಿ ಹುದಾ ನಿರೂಪಿಸಿದರು. ಉಪನ್ಯಾಸಕ ಜೋಯ್ಸನ್ ಲೋಬೋ ವಂದಿಸಿದರು.