ನಾಪೆÉÇೀಕ್ಲು, ಸೆ. 18: ನಂ. 274 ನೇ ನಾಪೆÉÇೀಕ್ಲು ನಾಡು ಗ್ರಾಹಕರ ಸಂಘವು ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷದ ಎಂಬತ್ತೊಂಬತ್ತು ಸಾವಿರದ ನಾನೂರ ಐವತ್ತ ನಾಲ್ಕು ರೂಪಾಯಿ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ಹೇಳಿದರು.

ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂಘದಲ್ಲಿ 671 ಜನ ಸದಸ್ಯರಿದ್ದಾರೆ.

ಸಂಘವು ಒಟ್ಟು ಎಪ್ಪತ್ತೇಳು ಲಕ್ಷದ ಎಪ್ಪತ್ತೈದು ಸಾವಿರದ ಆರುನೂರ ಐವತ್ತೊಂಬತ್ತು ರೂಪಾಯಿಗಳ ವಾರ್ಷಿಕ ವ್ಯವಹಾರ ನಡೆಸಿದೆ ಎಂದು ತಿಳಿಸಿದರು.

ಸಂಘದಲ್ಲಿ ನಾಪೆÉÇೀಕ್ಲು, ಬೇತು, ಕೊಳಕೇರಿ, ಕೊಕೇರಿ, ಕಡಿಯತ್ತೂರು, ಪಾರಾಣೆ, ಬಲಮುರಿ, ಬಾವಲಿ, ಕೋಣಂಜಗೇರಿ, ಅಯ್ಯಂಗೇರಿ, ನೆಲಜಿ, ಚೆಯ್ಯಂಡಾಣೆ, ಕಕ್ಕಬೆ, ಕುಂಜಿಲ, ನಾಲಾಡಿ, ಯವಕಪಾಡಿ, ಮರಂದೋಡ, ಪೇರೂರು, ಬಲ್ಲಮಾವಟಿ, ಗ್ರಾಮದವರು ಸದಸ್ಯತ್ವ ಹೊಂದಿದ್ದಾರೆ. ಸಂಘವು ಬಟ್ಟೆ ಅಂಗಡಿ, ಸ್ಟೀಲ್ ಪಾತ್ರೆಯ ಅಂಗಡಿ, ಮೂರು ನ್ಯಾಯಬೆಲೆ ಅಂಗಡಿ ಮತ್ತು ಬಾಡಿಗೆಯ ಮಳಿಗೆಯನ್ನು ಹೊಂದಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ನಿರ್ದೇಶಕರಾದ, ನಾಟೋಳಂಡ ಕಸ್ತೂರಿ, ಕೊಂಬಂಡ ಗಣೇಶ್, ನಾಯಕಂಡ ಮುತ್ತಪ್ಪ, ನಾಯಕಂಡ ಸಿ. ಚಂಗಪ್ಪ, ಎಂ.ಎಸ್. ಮಹಮ್ಮದ್ ಆಲಿ, ಬೆಲ್ಲತಂಡ ಸೋಮಯ್ಯ, ಹೆಚ್.ಎ. ಬೊಳ್ಳು. ಸಂಘದ ವ್ಯೆವಸ್ಥಾಪಕ ಕಲ್ಲೇಂಗಡ ತಮ್ಮಿ ತಮ್ಮಯ್ಯ, ಇದ್ದರು.