ಗೋಣಿಕೊಪ್ಪಲು, ಸೆ. 18: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್) ಈ ಸಾಲಿನಲ್ಲಿ ರೂ. 61 ಲಕ್ಷ ನಿವ್ವಳ ಲಾಭವನ್ನುಗಳಿಸಿದೆ ಹಾಗೂ 19.65 ಕೋಟಿ ವಹಿವಾಟನ್ನು ನಡೆಸಿದ್ದು, ಸದಸ್ಯರಿಗೆ ಶೇ. 25 ರಷ್ಟನ್ನು ಡಿವಿಡೆಂಡ್‍ನ್ನು ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಅಳಮೇಂಗಡ ಎ. ವಿವೇಕ್ ಮಾಹಿತಿಯನ್ನು ನೀಡಿದರು.

ಸಂಘದ 74 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾನೂರು-ಕೋತುರು ಗ್ರಾಮಕ್ಕೆ ಒಳಪಟ್ಟು ಸಂಘವು 1937 ರಲ್ಲಿ ಸ್ಥಾಪನೆಯಾಗಿದ್ದು, ಅಮೃತ ಮಹೋತ್ಸವನ್ನು ಆಚರಿಸಿಕೊಂಡಿದೆ. ಸಂಘದಲ್ಲಿ ಒಟ್ಟು 1490 ಸದಸ್ಯರಿದ್ದಾರೆ. ಇವರ ಪಾಲು ಹಣ ರೂ. 1.26 ಲಕ್ಷಗಳಿದ್ದು, ವರ್ಷದಲ್ಲಿ ರೂ. 870 ಲಕ್ಷ ಸಾಲವನ್ನು ನೀಡಲಾಗಿದ್ದು, ಶೇ. 100 ರಷ್ಟು ಮರುಪಾವತಿಯಾಗಿದೆ ಎಂದು ತಿಳಿಸಿದರು.

ಸಂಘವು ಬಟ್ಟೆ, ಹತ್ಯಾರು, ರಸ ಗೊಬ್ಬರ, ನಿಯಂತ್ರಿತಾ ಅಹಾರ ಧಾನ್ಯ ಘಟಕಗಳನ್ನು ಹೊಂದಿದ್ದು ಇದರೊಂದಿಗೆ ನೂತನವಾಗಿ ಕಟ್ಟದದಲ್ಲಿ ವಿಜಯ ಬ್ಯಾಂಕ್ ಶಾಖೆಯನ್ನು ತೆರೆಯಲು ಸ್ಥಳವಕಾಶವನ್ನು ಮಾಡಲಾಗಿದೆ. 900 ಕ್ವೀಟಾಲï ಸಾಮಥ್ರ್ಯದ ದವಸ ಭಂಡಾರವನ್ನು ಹೊಂದ್ದಿದೆ. ಸಂಘವು 50 ಏಕರೆ ಕಾಫಿ ತೋಟವನ್ನು ಹೊಂದಿರುವ ಜಿಲ್ಲೆಯ ಏಕೈಕ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಏ ಶ್ರೇಣಿಯಲ್ಲಿ ಕಾಪಾಡಿಕೊಂಡಿದ್ದು, ಮರಣ ನಿಧಿಯಲ್ಲಿ ರೂ. 50 ಸಾವಿರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ರೂ. 50 ಸಾವಿರಗಳ ರೈತರ ಸಾಲ ಮನ್ನಾ ಯೋಜನೆಯನ್ನು ತಂದಿದ್ದು, ಇದರ ಪೂರ್ಣ ಮಾಹಿತಿ ಇದುವರೆಗೆ ಬಂದಿಲ್ಲ.

ರೈತರು ಸಾಲ ಪಡೆದ 365 ದಿನಗಳ ಒಳಗೆ ಸಾಲ ಮರು ಪಾವತಿ ಮಾಡಿ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ದವಸ ಭಂಡಾರ ನಷ್ಟದಲ್ಲಿದ್ದು, ಕಳೆದ ಸಾಲಿನಲ್ಲಿ ಬರಗಾಲದಿಂದ ಭತ್ತದ ಇಳುವರಿ ಕುಂಠಿತವಾಗಿದೆ, ಇದರಿಂದ ಸಾಲ ಪಡೆದ ರೈತರು ಮರು ಪಾವತಿ ಮಾಡಲು ಸಾಧ್ಯವಾಗಿಲ್ಲ ಆದರಿಂದ ಮುಂದಿನ ಸಾಲಿನಲ್ಲಿ ಅಸಲು ಮತ್ತು 2 ವರ್ಷದ ಬಡ್ಡಿ ಸೇರಿ ಕಟ್ಟುವಂತೆ ತೀರ್ಮಾನವನ್ನು ತೆಗೆದು ಕೊಳ್ಳಲಾಯಿತು.

ಕಳೆದ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮೆ ಮೊಬಲಗನ್ನು ಕಟ್ಟಿದರು ಇದುವರೆಗೆ ಯಾವದೇ ಪರಿಹಾರ ಬಂದಿಲ್ಲ.

ಇದನ್ನು ಗಂಭಿರವಾಗಿ ಪರಿಗಣಿಸಿ ಈ ಸಾಲಿನಲ್ಲಿ ಯಾವದೇ ಫಸಲ್ ಭೀಮಾ ವಿಮೆಯನ್ನು ಮಾಡಲಾಗಿಲ್ಲ ಎಂದು ವಿವರಿಸಿದರು.

ಯಶಸ್ವಿನಿ ಯೋಜನೆಯಡಿಯಲ್ಲಿ ಸದಸ್ಯರು ರೂ. 500 ಪಾವತಿಸಿದರೆ ಸಂಘವು 150 ರೂ.ಗಳನ್ನು ಪಾವತಿ ಮಾಡುತ್ತಿದೆ. ಕಳೆದ ಸಾಲಿನಲ್ಲಿ ವಿವಿಧ ಆರೋಗ್ಯ ಚಿಕಿತ್ಸೆಗಾಗಿ ಈ ಯೋಜನೆಯಿಂದ 10 ಲಕ್ಷದಷ್ಟು ಪರಿಹಾರವನ್ನು ಸದಸ್ಯರು ಪಡೆದುಕೊಂಡಿದ್ದಾರೆ. ಇದರ ಮತ್ತಷ್ಟು ಉಪಯೋಗವನ್ನು ಪಡೆದುಕೊಳ್ಳಲೂ ತಿಳಿಸಿದರು.

ಕಳೆದ ಸಾಲಿನಿಂದ ಶೇ. 8 ರಂತೆ ಸಂಘದಲ್ಲಿ ಅಭರಣ ಸಾಲವನ್ನು ನೀಡಲಾಗುತ್ತಿದ್ದು ಇದುವರೆಗೆ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಇದರ ಲಾಭವನ್ನು ಪಡೆದು ಕೊಂಡಿದ್ದಾರೆ. ಇದರ ಸದುಪಯೋಗ ವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ವೈದ್ಯನಾಥನ್ ವರದಿಯಂತೆ ಸಂಘದಲ್ಲಿ ಚುನಾವಣೆಯಲ್ಲಿ ಭಾಗವಹಿಸಲೂ ಇಲ್ಲವೇ ಮತದಾನವನ್ನು ಮಾಡಲು 3 ಮಹಾಸಭೆ ಹಾಜರಿ ಇಲ್ಲವೇ ಕನಿಷ್ಟ ರೂ. 2 ಸಾವಿರಗಳ ವ್ಯಾಪಾರವನ್ನು ಮಾಡಬೇಕು ಇದರಲ್ಲಿ ಯಾವದೇ ಬದಲಾವಣೆಯನ್ನು ಮಾಡಲಾಗುವದಿಲ್ಲ ಎಂದು ಸ್ಪಷ್ಟಪಡಿಸಲಾಯಿತು.

ಮಹಾ ಸಭೆಯಲ್ಲಿ ಉಪಾಧ್ಯಾಕ್ಷ ಕೆ.ಪಿ. ನಂಜಪ್ಪ ಹಾಗೂ ನಿರ್ದೇಶಕರಾದ ಕೆ.ಜಿ. ಸದಾಶಿವ, ಎಂ.ಎನ್. ಸತೀಶ್, ಕೆ.ಎಸ್. ಬೋಪಣ್ಣ, ಕೆ.ಅರ್. ಸುರೇಶ್, ಸಿ.ಬಿ. ಬೆಳ್ಯಪ್ಪ, ಹೆಚ್.ಕೆ. ಬೊಗ್ಗು, ಸಿ. ರೇಖಾ ಬೋಪಣ್ಣ, ಎಂ.ಎನ್. ಅಶ್ವಿನಿ, ಪಿ. ಲೀನಾ ಬೋಪಣ್ಣ, ಕಾರ್ಯ ನಿರ್ವಹಣಾಧಿಕಾರಿ ವಿ.ಅರ್. ಉಮೇಶ್, ಉಪಸ್ಥಿತರಿದ್ದರು.