ಮಡಿಕೇರಿ, ಸೆ. 18: ಎನ್.ಸಿ.ಸಿ. ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ತಲ್ ಸೈನಿಕ್ ಕ್ಯಾಂಪ್(ಟಿ.ಎಸ್.ಸಿ)ಗೆ ಜಿಲ್ಲೆಯ ಯುವತಿಯರಾದ ನಂದೇಟಿರ ಸೋನಿಕಾ ದೇಚಮ್ಮ ಹಾಗೂ ಕಾಳಚಂಡ ಚೋಂದಮ್ಮ ಆಯ್ಕೆಯಾಗಿದ್ದಾರೆÉ. ಕರ್ನಾಟಕ ಹಾಗೂ ಗೋವಾ ಎನ್. ಸಿ.ಸಿ. ಡೈರೆಕ್ಟರೇಟ್ ಅನ್ನು ಇವರುಗಳು ಪ್ರತಿನಿಧಿಸುತ್ತಿದ್ದು ಮಂಗಳೂರು, ಶಿವಮೊಗ್ಗ, ಬೆಳಗಾವಿ ಸೇರಿದಂತೆ ವಿವಿಧೆಡೆ ಈ ತನಕ ನಡೆದ ಆರು ಕ್ಯಾಂಪ್‍ನಲ್ಲಿ ಪಾಲ್ಗೊಂಡು ಆಲ್ ರೌಂಡರ್ ಆಗಿ ದೆಹಲಿಯ ತಲ್ ಸೈನಿಕ್ ಕ್ಯಾಂಪ್‍ಗೆ ಸೋನಿಕಾ ಆಯ್ಕೆಯಾಗಿದ್ದಾಳೆ. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ಈಕೆ ಈ ಹಿಂದೆ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಬೆಸ್ಟ್ ಕೆಡೆಟ್ ಆಗಿದ್ದಳು.

(ಮೊದಲ ಪುಟದಿಂದ) ಸೋನಿಕಾ ಕಟ್ಟೆಮಾಡು ಗ್ರಾಮದ ನಂದೇಟಿರ ರವಿ ಸುಬ್ಬಯ್ಯ ಹಾಗೂ ಕವಿತಾ ದಂಪತಿಯ ಪುತ್ರಿ. ಕಾಳಚಂಡ ಚೋಂದಮ್ಮ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬೆಳಗಾಂನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾಳೆ.

ತಾ. 23 ರಿಂದ 25 ರವರೆಗೆ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದ್ದು, ಚೋಂದಮ್ಮ ಮುಕ್ಕೋಡ್ಲು ನಿವಾಸಿ ಗುಡ್ಡಗಾಡು ಓಟಗಾರ ಕಾಳಚಂಡ ರವಿ ತಮ್ಮಯ್ಯ ಹಾಗೂ ಟೈನಿ ತಮ್ಮಯ್ಯ ದಂಪತಿಯ ಪುತ್ರಿ.