ಮಡಿಕೇರಿ, ಸೆ.18: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್) ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೈನುಗಾರಿಕೆ ಉದ್ಯಮ ಶೀಲತೆ ಅಭಿವೃದ್ಧಿ ಯೋಜನೆ ಸಂಬಂಧ ವಿಚಾರ ಸಂಕಿರಣವು ಇತ್ತೀಚೆಗೆ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ವಿಚಾರ ಸಂಕಿರಣವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ.ಮಂಜುನಾಥ್ ಉದ್ಘಾಟಿಸಿದರು.

ನಂತರ ಮಾತನಾಡಿದ ಬಿ.ಡಿ. ಮಂಜುನಾಥ್ ಅವರು ಹೈನುಗಾರಿಕೆ ಯು ರೈತರಿಗೆ ಉತ್ತಮ ಲಾಭದಾಯಕ ಕೃಷಿ ಚಟುವಟಿಕೆ ಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುವದು ಮೊದಲ ಆದ್ಯತೆ ಆಗಬೇಕಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿಯೊಂದು ಬ್ಯಾಂಕುಗಳು ಕೂಡ ಮುಂದೆ ಬಂದು ರೈತರಿಗೆ ಆರ್ಥಿಕ ಬೆಂಬಲವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಲಾಗಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಯೋಜನೆಯ ಪ್ರಯೋಜನ ಪಡೆಯುವಂತಾಗಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲೆಯ ಬೆಳೆಗಾರರು, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರೂ ಆದ ನಡಿಕೇರಿಯಂಡ ಬೋಸ್‍ಮಂದಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹೈನುಗಾರಿಕೆ ರೈತರ ಪಾಲಿಗೆ ಅತ್ಯುತ್ತಮ ಕೃಷಿ ಸಂಬಂಧಿತ ಚಟುವಟಿಕೆಯಾಗಿದ್ದು, ಇದು ಲಾಭದಾಯಕವಲ್ಲ ಎಂಬ ಕೆಲ ವರ್ಗದವರ ಭಾವನೆಗಳನ್ನು ಹೋಗಲಾಡಿಸಬೇಕಾಗಿದೆ. ಹೈನು ಗಾರಿಕೆ ಎಂಬುದು ಕೇವಲ ಹಾಲಿನ ಉತ್ಪಾದನೆಗೆ ಮಾತ್ರ ಸೀಮಿತವಾಗಿರದೆ ಈ ಚಟುವಟಿಕೆಯಿಂದ ಒದಗುವ ಗೊಬ್ಬರ, ಪರಿವರ್ತಿತಗೊಳ್ಳುವ ಎರೆಹುಳು ಮಿಶ್ರಣ, ಹಾಲಿನಿಂದೊದ ಗುವ ಮೌಲ್ಯ ವರ್ಧಿತ ವಸ್ತುಗಳು, ರೈತರಿಗೆ ಉತ್ತಮ ಆದಾಯವನ್ನು ಭರಿಸುವಂತಿದ್ದು, ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಜಿಲ್ಲೆಯ ರೈತರು ಪಡೆಯುವಂತಾಗ ಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು(ನಬಾರ್ಡ್) ಆಯೋಜಿಸಿ ರುವ ವಿಚಾರ ಸಂಕಿರಣ ಅತ್ಯಂತ ಮಹತ್ವದಾಗಿದ್ದು, ಈ ಯೋಜನೆಯ ಮಹತ್ವ ಹಾಗೂ ಸದ್ಬಳಕೆ ಹಾಗೂ ಅಭಿವೃದ್ಧಿಯ ಬಗ್ಗೆ ಉತ್ತಮ ಸಂದೇಶ ರೈತರಿಗೆ, ಬ್ಯಾಂಕಿನ ಪ್ರತಿನಿಧಿಗಳಿಗೆ, ಇಲಾಖಾ ಮುಖ್ಯಸ್ಥ ರಿಗೆ, ಸಂಘ ಸಂಸ್ಥೆಗಳಿಗೆ ಒದಗಿಸಿದಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾಪ್ರಬಂಧಕ ಮುಂಡಂಡ ಸಿ.ನಾಣಯ್ಯ ಮಾತನಾಡಿ ದೇಶದ ಕ್ಷೀರ ಉತ್ಪಾದನೆಯು 1951 ರಲ್ಲಿ 17 ಮಿಲಿಯನ್ ಟನ್‍ಗಳಷ್ಟಿದ್ದು, 2011 ರಲ್ಲಿ ಒಟ್ಟು ಉತ್ಪಾದನೆಯು 121 ಮಿಲಿಯನ್ ಟನ್‍ಗಿಂತಲೂ ಹೆಚ್ಚಾಗಿದ್ದು, ಹಾಲಿನ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿದೆ. ಹಾಗಿದ್ದರೂ ಕೂಡ ತ್ವರಿತ ಗತಿಯಲ್ಲಿ ಸಾಗುತ್ತಿರುವ ಜನ ಸಂಖ್ಯೆಯ ಹೆಚ್ಚಳದಿಂದ ಸಂಪೂರ್ಣ ಹಾಲಿನ ಉತ್ಪನ್ನವು ಆಂತರಿಕವಾಗಿ ಬಳಕೆಯಾಗುತ್ತಿದ್ದು, ಹೊರ ದೇಶಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳು gಫ್ತಾಗುತ್ತಿಲ್ಲ. ಆದ್ದರಿಂದ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸದೇ ಇದ್ದರೆ, ಅತೀ ಶೀಘ್ರವೇ ದೇಶವು ಹಾಲನ್ನು ವಿಶ್ವದ ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾದೀತು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಪ್ರತಿನಿತ್ಯ 55 ಸಾವಿರದಿಂದ 60 ಸಾವಿರ ಲೀಟರ್ ಹಾಲಿನ ಬೇಡಿಕೆಯಿದ್ದು, ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಕೇವಲ 15 ಸಾವಿರದಿಂದ 20 ಸಾವಿರದವರೆಗೆ ಮಾತ್ರ ಇದ್ದು, ಉಳಿಕೆ ಹಾಲಿಗಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆಗೆ ವಿಫುಲ ಅವಕಾಶಗಳು ಇದ್ದ ಹೊರತಾಗಿಯೂ ಕೂಡ, ಹಾಲಿನ ಸಂಗ್ರಹಣೆ, ಸರಬರಾಜು, ಶಿಥಿಲೀ ಕರಣ ಹಾಗೂ ಮಾರಾಟದ ವ್ಯವಸ್ಥೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಇಲ್ಲದಿರು ವದರಿಂದ ರೈತರು ಸಂಘಟಿತರಾಗಿ ಗ್ರಾಮ ಮಟ್ಟದಲ್ಲಿ ಸಂಗ್ರಹಣಾ ವ್ಯವಸ್ಥೆ, ಸರಬರಾಜು ವ್ಯವಸ್ಥೆ, ಶಿಥಿಲೀಕರಣ ವ್ಯವಸ್ಥೆ, ಸಂಸ್ಕರಣಾ ವ್ಯವಸ್ಥೆ, ಮಿನಿ ಡೈರಿಯ ಸ್ಥಾಪನೆಯನ್ನು ಮಾಡಿ ಕೊಂಡು ಜಿಲ್ಲೆಯ ಬೇಡಿಕೆಗಳನ್ನು ಪೂರೈಸಿಕೊಂಡು ಇನ್ನಿತರ ಕಡೆಗೂ ಕೂಡ ಮಾರಾಟ ಮಾಡುವ ವ್ಯವಸ್ಥೆಯನ್ನು ಕಂಡುಕೊಳ್ಳಬಹು ದಾಗಿದೆ ಎಂದರು.

ಮುಖ್ಯ ಅತಿಥಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸಾ.ಜು.ಜಾರ್ಜ್ ಮಾvನಾಡಿ ನಬಾರ್ಡ್ ಆಯೋಜಿಸಿರುವ ವಿಚಾರ ಸಂಕಿರಣವು ಅತ್ಯದ್ಭುತವಾಗಿದ್ದು, ಈ ವಿಚಾರ ಸಂಕಿರಣದಿಂದ ಉತ್ತಮ ಆಯಾಮವನ್ನು ಕಂಡುಕೊಳ್ಳುವದರ ಜೊತೆಗೆ ರೈತರ ಅಭಿವೃದ್ಧಿಗೆ, ಹೈನುಗಾರಿಕೆ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚೆಟ್ಟಿಯಪ್ಪ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಬಂಗಾರು ಗುಪ್ತಾಜಿ ಮಾತನಾಡಿ ಹೈನುಗಾರಿಕಾ ಕ್ಷೇತ್ರವನ್ನು ಬಲಪಡಿಸುವದು ತೀರಾ ಅಗತ್ಯ ವಾಗಿದ್ದು, ಇದಕ್ಕಾಗಿ ಸಹಾಯ ಹಸ್ತ ಸದಾ ಇರುತ್ತದೆ. ಈ ಕ್ಷೇತ್ರದ ಅಭಿವೃದ್ಧಿಗೆ ಗಂಭೀರ ಪ್ರಯತ್ನವನ್ನು ಮಾಡುವದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಬ್ಯಾಂಕಿನ ಪ್ರತಿನಿಧಿಗಳು, ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿಗಳು, ಇಲಾಖಾ ಮುಖ್ಯಸ್ಥರು, ಕೆ.ವಿ.ಕೆ. ಹಿರಿಯ ವಿಷಯ ತಜ್ಞರು, ಪ್ರಗತಿಪರ ಕೃಷಿಕರು ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್‍ನ ಪ್ಯಾನ್ಸಿ ಗಣಪತಿ ಮತ್ತು ಸದಸ್ಯರು ಭಾಗವಹಿಸಿ ಚರ್ಚೆ, ವಿಚಾರ ವಿನಿಮಯದಲ್ಲಿ ಪಾಲ್ಗೊಂಡಿದ್ದರು.