ಮಡಿಕೇರಿ, ಸೆ. 18: ಜಿಲ್ಲಾ ನೆಹರು ಯುವ ಕೇಂದ್ರವು 2017-18 ನೇ ಸಾಲಿಗಾಗಿ ಯುವಕ- ಯುವತಿ, ಮಹಿಳಾ ಸಂಘ ಮಂಡಳಿಗಳಿಂದ ವಿವಿಧ ವೃತ್ತಿ ತರಬೇತಿಗಳಾದ, ಟೈಲರಿಂಗ್, ಎಮ್ರಾಡೆÀರಿ, ಬ್ಯೂಟಿಷಿ ಯನ್, ಸೈಕಲ್ ರಿಪೇರಿ, ಟ್ರ್ಯಾಕ್ಟರ್ ರಿಪೇರಿ, ಕುಸುರಿ ಕೆಲಸ, ಮೊಬೈಲ್ ರಿಪೇರಿ, ಮೋಟಾರ್ ರಿವೈಂಡಿಗ್, ಜೇನುಸಾಕಣಿಕೆ, ಕುರಿ-ಕೋಳಿ-ಹಸು ಸಾಕಣಿಕೆ, ಬಡಗಿ , ಹಂದಿ-ಮೊಲ ಸಾಕಣಿಕೆ, ಅಣಬೆ ಬೇಸಾಯ, ಕೃಷಿ ಬೇಸಾಯ, ಮೊಂಬತ್ತಿ ತಯಾರಿಕೆ, ಮುಂತಾದ ಗ್ರಾಮೀಣ ಯುವಕ-ಯುವತಿಯರು ಮಾಡಲಿಚ್ಚಿಸುವ ವೃತ್ತಿ ತರಬೇತಿಗಳನ್ನು, ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ತಾಲೂಕುಗಳ ನೊಂದಾಯಿತ ಹಾಗೂ ಸಕ್ರೀಯ ಕ್ರೀಡಾ ಕಾರ್ಯ ಚಟುವಟಿಕೆಗಳಿಂದ ಕೂಡಿರುವ, ಯುವಕ-ಯುವತಿ ಸಂಘ ಮಂಡಳಿಗಳಿಂದ ಅರ್ಜಿ ಆಹ್ವಾನಿಸ ಲಾಗಿದೆ ಈಗಾಗಲೇ ಕಳೆದ ಎರಡು ವರ್ಷಗಳು ಈ ಸೌಲಭ್ಯ ಪಡೆದಿರುವ ಸಂಘಗಳು, ಈ ತರಬೇತಿ ಪಡೆಯಲು ಅನರ್ಹವಾಗಿರುತ್ತವೆ, ಹೊಸ ಯುವಕ-ಯುವತಿ ಸಂಘ ಮಂಡಳಿಗಳಿಗೆ, ಹಾಗೂ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವದು.

ಪ್ರತಿ ವರ್ಷ ಸಂಘದ ನವೀಕರಣ, ಲೆಕ್ಕ ಪತ್ರ ವರದಿ , ನೆಹರು ಯುವ ಕೇಂದ್ರದಲ್ಲಿ ನೊಂದಣಿ, ತಾವು ಸಾದಿಸಿರುವ ಸಮಾಜ ಸೇವೆ, ಪರಿಗಣಿಸಲಾಗುವದು 40 ಯುವಜನರು ಫೋಟೋ ಹಾಗೂ ಅರ್ಜಿ, ಕಲಿಯಬಹುದಾದ ತರಬೇತಿ ಆಯ್ಕೆ , ತರಬೇತಿ ನಡೆಹಿಸಲು ಸ್ಥಳ, ಆಯ್ಕೆ ಮಾಡಿದ ತರಬೇತಿ ನಡೆಸಿಕೊಡಲು ತರಬೇತಿ ಪಡೆದ ಉಪ ನ್ಯಾಸಕರ ಸ್ವವಿವರ (ಬಯೋಡಟಾ) ಮುಂತಾದವುಗಳನ್ನು ನೆಹರು ಯುವ ಕೇಂದ್ರಕ್ಕೆ ಸಲ್ಲಿಸಲು ಕೊರಿದೆ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ, ಕೊಡಗಿನ ಕೆ,ಡಿ,ಹೆಚ್, ಬಿ,ಸಿ,ಎಸ್, ಕಟ್ಟಡ, 2ನೇ ಮಹಡಿ ಹೊಸ ಬಡಾವಣೆ ಮಡಿಕೇರಿ. ನೆಹರು ಯುವ ಕೇಂದ್ರ ಕಚೇರಿಯಲ್ಲಿ ಪಡೆದು ಸರಿಯಾಗಿ ಭರ್ತಿ ಮಾಡಿ ಅಗತ್ಯ ವಿರುವ ಎಲ್ಲಾ ದಾಖಲಾತಿಗಳನ್ನು ಲಗತ್ತಿಸಿ ತಾ. 28 ರೊಳಗೆ ನೆಹರು ಯುವ ಕೇಂದ್ರಕ್ಕೆ ಸಲ್ಲಿಸಲು ಕೋರಲಾಗಿದೆ ಹೆಚ್ಚಿನ ವಿವರಗಳಿಗೆ ದೂ.ಸಂ: 08272-225470ನ್ನು ಸಂಪರ್ಕಿಸಬಹುದು.