ಮಡಿಕೇರಿ, ಸೆ. 18: ಸಿದ್ದಾಪುರದಲ್ಲಿ ಇತ್ತೀಚೆಗೆ ಕೋಮು ಪ್ರಚೋದಕ ಭಾಷಣ ಮಾಡುವ ಮೂಲಕ ಸಮಾಜದ ಶಾಂತಿಗೆ ಧಕ್ಕೆಯನ್ನುಂಟು ಮಾಡಿರುವ ಆರೋಪ ಎದುರಿಸುತ್ತಿರುವ ಜನಪ್ರತಿನಿಧಿಯೊಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್‍ವೈಎಸ್ ಪ್ರಮುಖರು ಒತ್ತಾಯಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಶಾಂತಿ ಸಹಬಾಳ್ವೆಗೆ ಅಡ್ಡಿಯಾಗುತ್ತಿರುವ ವ್ಯಕ್ತಿಗಳನ್ನು ಮಟ್ಟ ಹಾಕಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳ ದಿದ್ದಲ್ಲಿ ಮುಂದಿನ ದಿನಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣ ವಾಗಬಹುದೆಂದು ಅಭಿಪ್ರಾಯ ಪಟ್ಟರು.

ಹೊಸತೋಟ ಮಸೀದಿ ಹಾಗೂ ಕಕ್ಕಬ್ಬೆ ಶ್ರೀ ಭಗವತಿ ದೇವಾಲಯವನ್ನು ಅಪವಿತ್ರಗೊಳಿಸಿರುವ ಕೃತ್ಯಗಳನ್ನು ಸಂಘಟನೆ ಕಟುವಾಗಿ ಖಂಡಿಸುತ್ತದೆ. ಆದರೆ, ಈ ರೀತಿಯ ಘಟನೆಗಳು ನಡೆದಾಗ ಒಂದು ಸಮುದಾಯವನ್ನು ಗುರಿ ಮಾಡುವದು ಸರಿಯಾದ ಕ್ರಮವಲ್ಲವೆಂದರು. ಎಸ್‍ವೈಎಸ್ ಸಂಘÀಟನೆಯಲ್ಲಿ ಸುಮಾರು 2 ಸಾವಿರ ಮಂದಿ ಸದಸ್ಯರುಗಳಿದ್ದು, ಯಾರ ವಿರುದ್ಧವೂ ಯಾವುದೇ ದೂರುಗಳಿಲ್ಲ. ಸಂಘಟನೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನಷ್ಟೆ ಬಯಸುತ್ತದೆ ಎಂದು ಹಮೀದ್ ಮೌಲವಿ ತಿಳಿಸಿದರು.

ಖಂಡನೆ

ಪತ್ರಕರ್ತೆ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಎಸ್‍ವೈಎಸ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ, ಮೌಲವಿ, ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಹ ಕೃತ್ಯ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಗಳ ಭಿನ್ನತೆಯನ್ನು ವೈಚಾರಿಕವಾಗಿ ಎದುರಿಸಬೇಕೆ ಹೊರತು ಬಂದೂಕಿನಿಂದ ಅಲ್ಲ. ದುಷ್ಕøತ್ಯ ವೆಸಗಿದವರು ಯಾರೇ ಆಗಿರಲಿ ಅವರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಆಗ್ರಹಿಸಿದರು.