ನಾಪೆÇೀಕ್ಲು, ಸೆ. 18: ದೇವಟ್‍ಪರಂಬು ನರಮೇಧÀ ದುರಂತದಲ್ಲಿ ಟಿಪ್ಪುವಿನ ಕುತಂತ್ರಕ್ಕೆ ಬಲಿಯಾಗಿ ಮರಣ ಹೊಂದಿದ ದಿವ್ಯಾತ್ಮಗಳ ಮೋಕ್ಷಕ್ಕಾಗಿ ತ್ರಿವೇಣಿ ಸಂಗಮದಲ್ಲಿರುವ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಶಾಂತಿ ಪೂಜೆ ಮತ್ತು ಗೌರವ ಸಲ್ಲಿಸಲಾಯಿತು. ನಂತರ ದೇವಟ್‍ಪರಂಬುವಿನಲ್ಲಿ ಪುಷ್ಪಗುಚ್ಛವಿರಿಸಿ ಶೃದ್ಧಾಂಜಲಿ, ಸಂಜೆ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಶಾಂತಿ ಪೂಜೆ ನೆರವೇರಿಸುವದರ ಮೂಲಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಈ ಸಂದರ್ಭ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ದೇವಟ್‍ಪರಂಬುವಿನಲ್ಲಿ ದುರಂತ ನಡೆದು 232 ವರ್ಷಗಳು ಸಂದಿವೆ. ಇಲ್ಲಿ ಮಡಿದ ದಿವ್ಯಾತ್ಮಗಳಿಗೆ ಮೋಕ್ಷ ನೀಡುವ ನಿಟ್ಟಿನಲ್ಲಿ ಸಿ.ಎನ್.ಸಿ. ವತಿಯಿಂದ ಶ್ರೀ ಭಗಂಡೇಶ್ವರ ಸನ್ನಿದಿ ಮತ್ತು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಪಿತೃ ಪಕ್ಷ ಮತ್ತು ಪುಷ್ಕರ ದಿನದ ಪ್ರಯುಕ್ತ ಶ್ರಾದ್ಧಾ ಮತ್ತು ಶಾಂತಿ ಪೂಜೆ ಸಲ್ಲಿಸಿದ್ದೇವೆ ಎಂದರು.

ಅಯ್ಯಂಗೇರಿಯಿಂದ ಭಾಗಮಂಡಲದ ತ್ರಿವೇಣಿ ಸಂಗಮದ ವರೆಗೆ ದೇವಟ್‍ಪರಂಬುವಿಗೆ ಸಂಬಂಧಿಸಿದ ಜಾಗವಾಗಿದ್ದು ಈ ಹಿಂದೆ ಕೊಡವರು ಕಾವೇರಿ ಯಾತ್ರೆ ಮಾಡುತ್ತಿದ್ದ ಸಂದರ್ಭ ದೇವಟ್‍ಪರಂಬುವಿನಲ್ಲಿ ಮಡಿದ ತಮ್ಮ ಪೂರ್ವಜರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಸಲುವಾಗಿ ಮರದ ಸೊಪ್ಪಿನ ಗೊನೆಯನ್ನು ಇಟ್ಟು ಪ್ರಾರ್ಥಿಸುತ್ತಿದ್ದರು. ಇದಕ್ಕೆ ನಿಯಮಿತ ಜಾಗವಿಲ್ಲ. ದೇವಟ್‍ಪರಂಬುವಿಗೆ ಸಂಬಂಧಿಸಿದ ಯಾವದೇ ಜಾಗದಲ್ಲೂ ಇದನ್ನು ನೆರವೇರಿಸಬಹುದು. ಅಂತೆಯೇ ಸಿ.ಎನ್.ಸಿ ವತಿಯಿಂದಲೂ ದೇವಟ್ ಪರಂಬುವಿನಲ್ಲಿ ಮಡಿದ ದಿವ್ಯಾತ್ಮಗಳ ಮೋಕ್ಷಕ್ಕಾಗಿ ಪುಷ್ಪಗುಚ್ಚವಿರಿಸಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಪುಲ್ಲೇರ ಸ್ವಾತಿ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾ ಪ್ರಕಾಶ್, ಅಪ್ಪಾರಂಡ ಪ್ರಕಾಶ್, ಅಪ್ಪಚ್ಚಿರ ರೀನಾ ರೆಮ್ಮಿ, ಮೊಣ್ಣಂಡ ಕಾರ್ಯಪ್ಪ, ಕಿರಿಯಮಾಡ ಶರೀನ್ ಇದ್ದರು.

-ಪಿ.ವಿ.ಪ್ರಭಾಕರ್