ಸೋಮವಾರಪೇಟೆ, ಸೆ. 19: ಕಾಫಿ ಮಂಡಳಿಯ ವತಿಯಿಂದ ಶನಿವಾರಸಂತೆಯ ಆರ್‍ವಿ ಕಲ್ಯಾಣ ಮಂಟಪದಲ್ಲಿ ತಾ. 21 ರಂದು (ನಾಳೆ) ಆಫ್ರಿಕನ್ ದೈತ್ಯ ಶಂಕು ಹುಳು, ಎಲೆ ತುಕ್ಕು ರೋಗ, ಬಿಳಿಕಾಂಡ ಕೊರಕ ರೋಗ ನಿರ್ವಹಣೆ ಸೇರಿದಂತೆ ಕಾಫಿ ವಿಚಾರ ಸಂಕಿರಣ ಕುರಿತ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಎಸ್‍ಎಲ್‍ಒ ಮುರುಳೀಧರ್ ತಿಳಿಸಿದ್ದಾರೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಕಾರ್ಯಾಗಾರವನ್ನು ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಫಿ ಮಂಡಳಿ ಸದಸ್ಯ ಎಂ.ಬಿ. ಅಭಿಮನ್ಯು ಕುಮಾರ್ ವಹಿಸಲಿದ್ದು, ಕಾಫಿ ಮಂಡಳಿಯ ಹಾಗೂ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.

ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಆಯೋಜಿಸಿರುವ ಈ ಕಾರ್ಯಾಗಾರದಲ್ಲಿ ಹೆಚ್ಚಿನ ಬೆಳೆಗಾರರು ಪಾಲ್ಗೊಳ್ಳಬೇಕೆಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ಕೋರಿದ್ದಾರೆ.