ಮಡಿಕೇರಿ, ಸೆ. 19: ಜನೋತ್ಸವ ಮಡಿಕೇರಿ ದಸರಾ ಪ್ರಯುಕ್ತ ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿಯಿಂದ ಆಯೋಜಿಸಿದ್ದ ಪತ್ರಕರ್ತರ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟದಲ್ಲಿ ಕೊಳಂಬೆ ಉದಯ್ ಮೊಣ್ಣಪ್ಪ (ಟಿವಿ 5) ಟೇಬಲ್ ಟೆನ್ನಿಸ್ ಡಬಲ್ ಚಾಂಪಿಯನ್ ಆಗಿದ್ದಾರೆ.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಿಕಾ ಭವನದಲ್ಲಿ ಇತ್ತೀಚೆಗೆ ಕ್ರೀಡಾಕೂಟ ನಡೆಯಿತು. ಟೇಬಲ್ ಟೆನ್ನಿಸ್ ಸಿಂಗಲ್ ವಿಭಾಗದಲ್ಲಿ ಕೊಳಂಬೆ ಉದಯ್ ಮೊಣ್ಣಪ್ಪ (ಟಿವಿ 5) ಪ್ರಥಮ, ಕುಪ್ಪಂಡ ದತ್ತಾತ್ರಿ (ಹೊಸದಿಗಂತ) ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ (ವಿಜಯವಾಣಿ), ಕೊಳಂಬೆ ಉದಯ್ ಮೊಣ್ಣಪ್ಪ (ಟಿವಿ 5) ಜೋಡಿ ಪ್ರಥಮ, ಕೆ.ಬಿ. ಮಂಜುನಾಥ್ (ಟಿವಿ 9), ಸತ್ಯ ಮಂಜು (ಸುವರ್ಣ) ಜೋಡಿ ದ್ವಿತೀಯ ಸ್ಥಾನ ಪಡೆದರು.
ಕೇರಂ ಸಿಂಗಲ್ ವಿಭಾಗದಲ್ಲಿ ಆರ್. ಸುಬ್ರಮಣಿ (ಕನ್ನಡಪ್ರಭ) ಪ್ರಥಮ, ಎಸ್.ಎ. ಮುರಳೀಧರ್ (ವಿಶ್ವವಾಣಿ) ದ್ವಿತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದಲ್ಲಿ ಎಸ್.ಎ. ಮುರಳೀಧರ್ (ವಿಶ್ವವಾಣಿ), ಡಿ.ಪಿ. ಲೋಕೇಶ್ (ಪ್ರಜಾವಾಣಿ) ಜೋಡಿ ಪ್ರಥಮ, ಕುಪ್ಪಂಡ ದತ್ತಾತ್ರಿ (ಹೊಸದಿಗಂತ), ಜಿ.ವಿ. ರವಿಕುಮಾರ್ (ಕೊಡಗು ಚಾನಲ್) ಜೋಡಿ ದ್ವಿತೀಯ ಸ್ಥಾನ ಪಡೆದರು. ಚೆಸ್ ಸ್ಪರ್ಧೆಯಲ್ಲಿ ದುರ್ಗಾಪ್ರಸಾದ್ (ಪ್ರಜಾಸತ್ಯ) ಪ್ರಥಮ, ಡಿ.ಪಿ. ಲೋಕೇಶ್ (ಪ್ರಜಾವಾಣಿ) ದ್ವಿತೀಯ ಸ್ಥಾನ ಪಡೆದರು. ಮೈಂಡ್ ಗೇಮ್ನಲ್ಲಿ ಕಾಯಪಂಡ ಶಶಿ ಸೋಮಯ್ಯ (ಶಕ್ತಿ) ಪ್ರಥಮ, ಆರ್. ಸುಬ್ರಮಣಿ (ಕನ್ನಡಪ್ರಭ) ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ಆಯುಧ ಪೂಜಾ ದಿನ ಗಾಂಧಿ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವದೆಂದು ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ಸಂಚಾಲಕ ಬಿ.ಕೆ. ಜಗದೀಶ್ ಮಾಹಿತಿ ನೀಡಿದ್ದಾರೆ.