ಶನಿವಾರಸಂತೆ, ಸೆ. 19: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2658 ಸದಸ್ಯರಿದ್ದು ವಷ್ರ್ಯಾಂತಕ್ಕೆ 196.77 ಲಕ್ಷ ಪಾಲು ಹಣ ವಿರುತ್ತದೆ. ಸಂಘದಲ್ಲಿ ಕ್ಷೇಮನಿಧಿ ಮತ್ತು ಇತರ ನಿಧಿಗಳು ಸೇರಿ 89.61 ಲಕ್ಷವಿರುತ್ತದೆ. ವಿವಿಧ ಬ್ಯಾಂಕುಗಳಲ್ಲಿ 831.96 ಲಕ್ಷ ಠೇವಣಿ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ ರೂ. 54,42,220,07 ಲಕ್ಷ ನಿವ್ವಳ ಲಾಭಗಳಿಸಿ ‘ಎ’ ಗ್ರೇಡ್ ಪಡೆದಿದೆ ಎಂದು ಕೊಡ್ಲಿಪೇಟೆ ಸಹಕಾರ ಸಂಘದ ಅಧ್ಯಕ್ಷ ಎಸ್‍ಡಿ. ತಮ್ಮಯ್ಯ ಹೇಳಿದರು. ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2016-17ನೇ ಸಾಲಿನಲ್ಲಿ ರೈತರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದೇವೆ. ಸಂಘದಿಂದ ಕೆಸಿಸಿ ಸಾಲವನ್ನು 1209 ಸದಸ್ಯರಿಗೆ ರೂ. 1730.80 ಲಕ್ಷ ಕೊಟ್ಟಿರುತ್ತೇವೆ. ಕೆ.ಡಿ.ಸಿ.ಸಿ. ಬ್ಯಾಂಕಿನಿಂದ ಪಡೆದ ಸಾಲ ರೂ. 1635.54 ಲಕ್ಷ ಈ ಪೈಕಿ ಸಂಘದಿಂದ ಸ್ವಂತ ಬಂಡವಾಳದಲ್ಲಿ ರೂ. 95.26 ಲಕ್ಷ ಸಾಲ ನೀಡಲಾಗಿದೆ. ಸಂಘವು ಲಾಭದಾಯಕದಿಂದಿರುವದರಿಂದ ಈ ಬಾರಿ ಶೇ. 16 ರಷ್ಟು ಡಿವಿಡೆಂಡ್ ಜಾಸ್ತಿ ಮಾಡಿರುವದಾಗಿ ತಿಳಿಸಿದ ಅಧ್ಯಕ್ಷರು, ಅಭಿವೃದ್ಧಿ ಪಥÀದಲ್ಲಿ ಸಾಗುತ್ತಿರುವ ಸಂಘದ ಮುಂದಿನ ಎಲ್ಲ ವ್ಯವಹಾರಗಳಿಗೂ ನಿದೆರ್Éೀಶಕರ ಹಾಗೂ ಸದಸ್ಯರ ಸಹಕಾರ ಆಗತ್ಯ ಎಂದರು. ಸಭೆಯಲ್ಲಿ ಸಾಲ ಸೌಲಭ್ಯಗಳ ಬಗ್ಗೆ, ಬೆಳೆವಿಮೆ, ರೈತರ ಸಂಪೂರ್ಣ ಸಾಲಮನ್ನ ಮಾಡಬೇಕು ಹೀಗೆ ಹಲವಾರು ವಿಚಾರಗಳ ಬಗ್ಗೆ ಸದಸ್ಯರುಗಳು ಚರ್ಚಿಸಿದರು. ಚರ್ಚೆಯಲ್ಲಿ ಸದಸ್ಯರುಗಳಾದ ಭಗವಾನ್ ತೇಜ, ಶಫಿ, ಶರತ್‍ಚಂದ್ರ, ಲೋಕೇಶ್, ಗಿರೀಶ್, ಧರ್ಮಪ್ಪ, ಜಯರಾಂ, ಸೋಮಣ್ಣ, ಜಯಪ್ಪ, ಮಹಮ್ಮದ್ ಅನೀಫ್ ಇತರರು ಪಾಲ್ಗೊಂಡಿದ್ದರು.

ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಡಿ. ನಾಗರಾಜ ಸಂಘದ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಎ.ಎಸ್. ಭಾನುಮತಿ, ನಿದೆರ್Éೀಶಕರುಗಳಾದ ಬಿ.ಕೆ. ಚಿಣ್ಣಪ್ಪ , ಬಿ.ಕೆ. ಯತೀಶ್ ಕೆ.ಸಿ. ಪ್ರಸನ್ನ ಬಿ.ಎ. ವಸಂತ, ಕೆ.ಬಿ. ಸುಬ್ರಮಣ್ಯಚಾರ್, ಹೆಚ್.ಎನ್. ನಿರ್ಮಲ, ಬಿ.ಇ. ರಾಜು , ಕೆ.ಬಿ. ಯೋಗೇಶ್ ಹಾಗೂ ಸಹಕಾರ ಸಂಘಗಳ ಮೇಲ್ವಿಚಾರಕ ಎಸ್.ಡಿ ಶಶಿಕುಮಾರ್ ಉಪಸ್ಥಿತರಿದ್ದರು ನಿದೆರ್Éೀಶಕ ಸುಬ್ರಮಣ್ಯಚಾರ್ ಸ್ವಾಗತಿಸಿದರು.