ಗೋಣಿಕೊಪ್ಪಲು, ಸೆ. 19: ಇಲ್ಲಿನ ಇಗ್ಗುತ್ತಪ್ಪ ಕೊಡವ ಸಂಘದಿಂದ ಪರಿಮಳ ಮಂಗಳ ವಿಹಾರದಲ್ಲಿ ನಡೆದ ಕೈಲ್‍ಪೊಳ್ದ್ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಸದಸ್ಯರು ಪಾಲ್ಗೊಂಡು ಸಂಭ್ರಮಿಸಿದರು. ಸಾಧಕರಿಗೆ ಸನ್ಮಾನ, ಶೈಕ್ಷಣಿಕವಾಗಿ ಮುಂದಿರುವ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ವಿವಿಧ ಕ್ರೀಡಾಕೂಟಗಳು ನಡೆದವು. ಹಿರಿಯ ಕಾಫಿ ಬೆಳೆಗಾರ ಕೊಡಂದೇರ ತಿಮ್ಮಯ್ಯ ಕೋವಿ ಪೂಜೆ ಮಾಡುವ ಮೂಲಕ ಆಯುಧ ಪೂಜೆಗೆ ಚಾಲನೆ ನೀಡಿದರು.

ತೆಂಗಿನಕಾಯಿಗೆ ಗುಂಡು ಹೊಡೆಯುವದರಲ್ಲಿ ಡಾ. ಆಶಿಕ್ ಚೆಂಗಪ್ಪ (ಪ್ರ), ಕಂಜಿತಂಡ ಪ್ರವೀಣ್ (ದ್ವಿ), ವಾಲಗತ್ತಾಟ್ ಪುರುಷರಲ್ಲಿ ಕಾಳಿಮಾಡ ಪೊನ್ನಪ್ಪ (ಪ್ರ), ಕೊಡಂದೇರ ಲವ (ದ್ವಿ), ಮಹಿಳೆಯರಲ್ಲಿ ಮಚ್ಚಮಾಡ ರೀಟಾ (ಪ್ರ), ಚೊನೀರ ಪ್ರಿಯಾ ಪೊನ್ನಪ್ಪ (ದ್ವಿ), ಮಕ್ಕಳ ವಿಭಾಗದಲ್ಲಿ ಹರ್ಷಿಕಾ (ಪ್ರ), ಮಾಚಂಗಡ ರಾಹುಲ್ (ದ್ವಿ), ಚಿಮ್ಮಣೀರ ಲಿಖಿತಾ (ತೃ), ಬಕೆಟ್‍ಗೆ ಚೆಂಡು ವಿಭಾಗದಲ್ಲಿ ಚೊಟ್ಟೆಯಂಡ ಮಾಡ ರೀಟಾ ಮಾದಪ್ಪ (ಪ್ರ), ಚೆರಿಯಂಡ ಪವಿತ್ರಾ (ದ್ವಿ), ವಿಷದ ಚೆಂಡಿನಲ್ಲಿ ಕೋಳೇರ ಸರಳಾ (ಪ್ರ), ಚೋನೀರ ಪ್ರಿಯಾ ಪೊನ್ನಪ್ಪ (ದ್ವಿ), ಬಾಂಬ್ ಇನ್‍ದ ಸಿಟಿಯಲ್ಲಿ ಮಲ್ಲೇಂಗಡ ರಾಣಿ (ಪ್ರ), ಮಕ್ಕಳ ಕಪ್ಪೆಯಾಟದಲ್ಲಿ ಮೋತಿ ಬಿದ್ದಪ್ಪ (ಪ್ರ), ಮೇಘನಾ (ದ್ವಿ), ಯಶ್ಮಿತಾ (ತೃ), ಪುರುಷರ ಭಾರದ ಗುಂಡು ಎಸೆತದಲ್ಲಿ ಚೆರಿಯಂಡ ರೋಶನ್ (ಪ್ರ), ಕಂಜಿತಂಡ ಪ್ರವೀಣ್ (ದ್ವಿ) ಸ್ಥಾನ ಪಡೆದುಕೊಂಡರು.

ಪಿಯುಸಿ ವಿಭಾಗದಲ್ಲಿ ಚೆಟ್ಟುಮಾಡ ವಚನಾ ಮೊಣ್ಣಪ್ಪ, ತನ್ಯಾ ದೇಚಮ್ಮ, ಎಸ್‍ಎಸ್‍ಎಲ್‍ಸಿಯಲ್ಲಿ ಎನ್.ಎನ್. ಪ್ರಕೃತಿ, ಎಂ.ಆರ್ .ಬೋಜಮ್ಮ ಅವರುಗಳಿಗೆ ಸಣ್ಣುವಂಡ ಯಶಿಕ್ ಸೋಮಯ್ಯ ಪ್ರೋತ್ಸಾಹ ಧನ ವಿತರಿಸಲಾಯಿತು. ಡಾ. ಬಿ.ಸಿ. ರಾಯ್ ಪ್ರಶಸ್ತಿ ವಿಜೇತ ಡಾ. ಕಾಳಿಮಾಡ ಶಿವಪ್ಪ, ರಾಜ್ಯ ಶಿಕ್ಷಕರ ಪ್ರಶಸ್ತಿ ಪಡೆದ ಕೊಡಂದೇರ ಸ್ವಾತಿ ಲವ, ಜಿಲ್ಲಾ ಮಟ್ಟದ ಶಿಕ್ಷಕರ ಪ್ರಶಸ್ತಿ ಪಡೆದ ಚೋನೀರ ಆರತಿ ಸತ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಅಂತರ್ಜಾತಿ ವಿವಾಹದಿಂದ ಕೊಡವ ಜನಾಂಗದ ಸಂಖ್ಯೆ ಹೆಚ್ಚಳ ವಾಗುವದನ್ನು ಮನಗಾಣಬೇಕಿದೆ. ಇಂದಿನ ಯುವ ಜನತೆ ಅಂತರ್ಜಾತಿ ವಿವಾಹವಾಗುತ್ತಿರುವ ಬಗ್ಗೆ ಆಕ್ಷೇಪಗಳು ಹೆಚ್ಚಾಗುತ್ತಿದ್ದರೂ ಅಂತರ್ಜಾತಿ ವಿವಾಹದಿಂದ ಕೊಡವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದನ್ನು ನಾವು ಅರಿಯಬೇಕಿದೆ. ಜನಸಂಖ್ಯೆ ಹೆಚ್ಚಿಸಿ ಕೊಳ್ಳಲು ನಾವು ಮುಂದಾಗಬೇಕಿದೆ ಎಂದರು. ಈ ಸಂದರ್ಭ ವಿಜೇತರು ಗಳಿಗೆ ಬಹುಮಾನ ವಿತರಿಸಲಾಯಿತು. ಇಗ್ಗುತ್ತಪ್ಪ ಕೊಡವ ಸಂಘದ ಅಧ್ಯಕ್ಷೆ ಕೊಣಿಯಂಡ ಬೋಜಮ್ಮ ಉತ್ತಪ್ಪ, ಉಪಾಧ್ಯಕ್ಷ ಮಲ್ಚೀರ ಗಾಂಧಿ ದೇವಯ್ಯ, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ದೇವಯ್ಯ, ಸಾಹಿತಿ ರಾಣು ಅಪ್ಪಣ್ಣ ಉಪಸ್ಥಿತರಿದ್ದರು. ಬಿಂದು ಸುರೇಶ್ ಪ್ರಾರ್ಥಿಸಿದರು. ಮುಕ್ಕಾಟಿರ ರಾಯ್ ವಂದಿಸಿದರು.