ಗೋಣಿಕೊಪ್ಪಲು, ಸೆ.19: ಗೋಣಿಕೊಪ್ಪಲು ನಗರದ ಮೇಲೆ ಕಳೆದ 48 ಗಂಟೆಗಳಲ್ಲಿ ಸುರಿದ 7-8 ಇಂಚು ಮಳೆಯಿಂದಾಗಿ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ 39ನೇ ವರ್ಷದ ದಸರಾ ಆಚರಣೆಗೆ ಆತಂಕ ಸೃಷ್ಟಿಯಾಗಿದೆ. ಕೆಸರುಗದ್ದೆ ಯಂತಾಗಿರುವ ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಮೇಲೆ ಬೆಳೆದಿರುವ ಹುಲ್ಲನ್ನು ಇಂದು ಕಾರ್ಮಿಕರ ಮೂಲಕ ಸ್ವಚ್ಛಗೊಳಿಸಲಾಯಿತಾದರೂ ಬಿಸಿಲಿನ ವಾತಾವರಣ ಸೃಷ್ಟಿಯಾಗದೆ ಇಲ್ಲಿನ ಮೈದಾನ ಒಣಗುವದು ಅಸಾಧ್ಯ ಎನಿಸಿದೆ.ವಿನೂತನ ರಂಗಮಂದಿರದ ಕೆಲಸ ಮಳೆಯ ನಡುವೆಯೇ ಆರಂಭವಾಗಿದ್ದು, ಸುಮಾರು 1250 ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಪಕ್ಕದಲ್ಲಿಯೇ ಚಾಮುಂಡೇಶ್ವರಿ ದೇವಿ ಮಂಟಪವನ್ನೂ ಈ ಹಿಂದಿಗಿಂತಲೂ ದೊಡ್ಡದಾಗಿಯೇ ನಿರ್ಮಿಸಲಾಗುವದು ಎನ್ನಲಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಅಬ್ಬರದ ಮಳೆ ಸುರಿಯದಿದ್ದಲ್ಲಿ ದಸರಾ ವೈಭವ ವೀಕ್ಷಣೆಗೆ ಅಧಿಕ ಅಭಿಮಾನಿಗಳ ಆಗಮನದ ನಿರೀಕ್ಷೆ ಸಂಘಟಕರದ್ದು. ಮಳೆಯ ಕಾರಣವಾಗಿಯೇ ಸಾಂಸ್ಕೃತಿಕ

(ಮೊದಲ ಪುಟದಿಂದ) ಕಾರ್ಯಕ್ರಮವನ್ನು ತಾ.22 ರಿಂದ ಆರಂಭಿಸಲಾಗುತ್ತಿದೆ. ತಾ.21 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ, ಗೋಣಿಕೊಪ್ಪಲು ದಸರಾ -2017 ದಸರಾ ಆ್ಯಪ್ ಹಾಗೂ ವೆಬ್‍ಸೈಟನ್ನು ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ಉದ್ಘಾಟಿಸಲಿದ್ದಾರೆ. ಅಂದು ಸಂಜೆ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಮಾತ್ರ ಇದೆ ಎಂದು ಕಾರ್ಯಾಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.

ಈ ಬಾರಿ ಗೋಣಿಕೊಪ್ಪಲಿನ ವರ್ತಕರು ತಮ್ಮ ಮಳಿಗೆಯನ್ನು ವಿದ್ಯುತ್ ಅಲಂಕಾರಗೊಳಿಸುವಂತೆಯೂ ಮೂರು ಬಹುಮಾನವನ್ನು ಸುಂದರ ಅಲಂಕೃತ ಮಳಿಗೆಗೆ ನೀಡಲು ಉದ್ದೇಶಿಸಿರುವದಾಗಿ ತಿಳಿಸಿದ್ದಾರೆ.

ತಾ.22 ರಂದು ಸಂಜೆ 6.30 ರಿಂದ 7.30 ರವರೆಗೆ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತಶಾಲೆ ಅಮ್ಮತ್ತಿ. ತಶ್ಮರವರಿಂದ ಸಿತಾರ್ ವಾದನ.

ರಾತ್ರಿ 8.30 ರಿಂದ 11.30ರವರೆಗೆ ಯುವ ದಸರಾ -2017, ಕಾವೇರಿ ಕಲಾಸಿರಿ ತಂಡದ ಸಾಂಸ್ಕೃತಿಕ ಕಾರ್ಯಕ್ರಮ.

ತಾ.23 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಕ್ಕಳ ದಸರಾ. ಮಕ್ಕಳ ಸಂತೆ, ವಿಜ್ಞಾನ ಮೇಳ, ಚಿತ್ರಕಲಾ ಸ್ಪರ್ಧೆ, 2 ರಿಂದ 4 ಗಂಟೆಯವರೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಮಿಮಿಕ್ರಿ, ಜಾನಪದ ಗೀತೆ ಹಾಗೂ ಸಾಮೂಹಿಕ ನೃತ್ಯ. ಸಂಜೆ ದೇವರಪುರ ಅಮೃತವಾಣಿ ವಿಕಲಚೇತನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ ವೀರಾಜಪೇಟೆ ತಾಲೂಕು ಶಾಲಾ ವಿದ್ಯಾರ್ಥಿಗಳಿಂದ ಮಕ್ಕಳ ದಸರಾ ಅಂಗವಾಗಿ ಛದ್ಮವೇಷ, ನೃತ್ಯಸ್ಪರ್ಧೆ, ಜಾನಪದ ಹಾಗೂ ಪಾಶ್ಚಿಮಾತ್ಯ ನೃತ್ಯ ಇತ್ಯಾದಿ.

ತಾ.24 ರಂದು ಮಹಿಳಾ ದಸರಾ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮ. ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. ಸಂಜೆ 6.30 ರಿಂದ 11.30 ರವರೆಗೆ ವೇದಿಕೆಯಲ್ಲಿ ಮಿಸೆಸ್ ಗೋಣಿಕೊಪ್ಪಲು ಸ್ಪರ್ಧೆ.

ತಾ.25 ರಂದು ಸಂಜೆ ಕಾವೇರಿ ಕಲಾ ಬಳಗ ಪೆÇನ್ನಂಪೇಟೆ ಇವರಿಂದ ರಸಮಂಜರಿ 8.30 ರಿಂದ ಕುದ್ರೋಳಿ ಗಣೇಶ್ ಜಾದೂ ಕಾರ್ಯಕ್ರಮ ಮತ್ತು ಜಗನ್ಮೋಹನ ನಾಟ್ಯಾಲಯ ವೀರಾಜಪೇಟೆ ಇವರ ನೃತ್ಯ ಪ್ರದರ್ಶನ.

ತಾ.26 ರಂದು ಸಂಜೆ ಬಿ.ಎಸ್.ಲವಕುಮಾರ್ ಅವರ ಸುಗಮ ಸಂಗೀತ ಮತ್ತು ಚಲನಚಿತ್ರ ಗೀತೆ ಗಾಯನ.

8 ಗಂಟೆಗೆ ಕುಂದಾಪುರ ರೂಪಕಲಾ ಕುಳ್ಳಪ್ಪು ನಾಟಕ ಮಂಡಳಿ, ಮೂರು ಮುತ್ತು ತಂಡದ ಪಾಪ ಪಾಂಡು ನಾಟಕ.

ತಾ.27 ರಂದು ಬೆಳಿಗ್ಗೆ ಕವಿಗೋಷ್ಠಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ಗಂಟೆ ನಂತರ ಕೊಡವ ನೈಟ್ಸ್ ಸಿಂಪೆÇೀನಿ ತಂಡದಿಂದ.

ತಾ.28 ರಂದು ಸಂಜೆ ನಿಸರ್ಗ ಯುವತಿ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ.

ರಾತ್ರಿ 8 ಗಂಟೆ ನಂತರ ಕೆ. ಚಂದ್ರಶೇಖರ್ ಗಾನಸುಧೆ ಕಾರ್ಯುಕ್ರಮ.

ತಾ.29 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ 8.30 ಗಂಟೆಯಿಂದ ಕೈಲಾಶ್ ಮೆಲೋಡೀಸ್ ತಂಡದ ರಸಮಂಜರಿ ಕಾರ್ಯಕ್ರಮ.

ತಾ.30 ರಂದು ಖ್ಯಾತ ಕಲಾವಿದರ ತಂಡದಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಏರ್ಪಡಿಸಿರುವದಾಗಿ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್‍ಗಣಪತಿ ತಿಳಿಸಿದ್ದಾರೆ. -ಟಿ.ಎಲ್.ಶ್ರೀನಿವಾಸ್