ಶನಿವಾರಸಂತೆ, ಸೆ. 19: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾಲ-ಸಾಲೇತರ ಒಟ್ಟು ರೂ. 109 ಕೋಟಿ ವ್ಯವಹಾರ ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ ರೂ. 28.54 ಲಕ್ಷ ನಿವ್ವಳ ಲಾಭಗಳಿಸಿ, ‘ಎ’ ಗ್ರೇಡ್ ಪಡೆದಿದೆ ಎಂದು ಸಂಘದ ಅಧ್ಯಕ್ಷ ಎಸ್. ಸಿ. ಶರತ್ ಶೇಖರ್ ಹೇಳಿದರು.

ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರ ಹಿತದೃಷ್ಟಿಯಿಂದ ಹಲವು ಯೋಜನೆಗಳನ್ನು ರೂಪಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಸಂಘದ ಮುಂದಿನ ಎಲ್ಲಾ ವ್ಯವಹಾರಗಳಿಗೂ ನಿರ್ದೇಶಕರ ಹಾಗೂ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಸಂಘದ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುವಂತೆ ಸದಸ್ಯ ಚಂದ್ರೇಗೌಡ ಸಲಹೆ ನೀಡಿದರೆ, ಸದಸ್ಯರಾದ ಮಹಮ್ಮದ್ ಪಾಶ, ಕೊಮಾರಪ್ಪ, ಎಸ್.ಪಿ. ರಾಜ, ಸಿ.ಕೆ. ಕೊಮಾರಪ್ಪ, ಎ.ಎಂ. ಆನಂದ್ ಹಾಗೂ ಜಗನ್ ಪಾಲ್ ಮಾತಾಡಿ ವಸೂಲಾತಿ ಕ್ರಮಬದ್ಧವಾಗಿ ನಡೆದರೆ ಸಂಘ ಅಭಿವೃದ್ಧಿ ಹೊಂದುತ್ತದೆ. ಅಧಿಕ ಲಾಭ ಬಂದಾಗ ಡಿವಿಡೆಂಡ್ ಜಾಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಶೇ. 14 ರಷ್ಟು ಡಿವಿಡೆಂಡ್ ಜಾಸ್ತಿ ಮಾಡಿರುವದಾಗಿ ತಿಳಿಸಿದ ಅಧ್ಯಕ್ಷರು, ಸ್ವಸಹಾಯ ಸಂಘದ ಕಾರ್ಯಚಟುವಟಿಕೆ ಪರಿಶೀಲಿಸಿ ರೂ. 3 ರಿಂದ ರೂ. 5 ಲಕ್ಷಕ್ಕೆ ಸಾಲ ಸೌಲಭ್ಯ ಹೆಚ್ಚಿಸಿರುವದಾಗಿಯೂ ಹೇಳಿದರು.

ಸದಸ್ಯ ರಂಗಸ್ವಾಮಿ ಅವರು ಕಾಫಿತೋಟಗಳಲ್ಲಿ ಶಂಖುಹುಳ ನಿಯಂತ್ರಣಕ್ಕೆ ರೂ. 10 ಸಾವಿರ ಮೌಲ್ಯದ ಕ್ರಿಮಿನಾಶಕ ಔಷಧಿ, ಹಿಂದೂ ರುಧ್ರಭೂಮಿ ಸಮಿತಿ ಅಧ್ಯಕ್ಷ ಕೆ.ಪಿ. ಶಿವಪ್ಪ, ಸದಸ್ಯರಾದ ಚಂದ್ರಶೇಖರ್ ಮತ್ತು ರಂಜನ್ ಅವರ ಕೋರಿಕೆಯಂತೆ ರುದ್ರಭೂಮಿ ಅಭಿವೃದ್ಧಿಗೆ ರೂ. 5 ಸಾವಿರ ವಂತಿಗೆ ನೀಡಲು ಸಂಘದ ಆಡಳಿತ ಮಂಡಳಿ ಸಮ್ಮತಿಸಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಈ. ದೊಡ್ಡಯ್ಯ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಿದರು.

ಸಂಘದ ಉಪಾಧ್ಯಕ್ಷ ಎಸ್.ವಿ. ಜಗದೀಶ್, ನಿರ್ದೇಶಕÀ ಜೆ.ಸಿ. ಲೋಕೇಶ್, ಟಿ.ಆರ್. ಗಿರೀಶ್, ಆರ್.ಎಂ. ಭುವನ್, ಡಿ. ಅರವಿಂದ್, ಎಸ್.ಎನ್. ರಘು ಡಿ.ಈ. ಬಸಪ್ಪ, ಕೆ.ಪಿ. ಪುಷ್ಪ, ಸವಿತಾ ಸತೀಶ್ ಹಾಗೂ ಸಹಕಾರ ಸಂಘಗಳ ಮೇಲ್ವಿಚಾರಕ ಎಸ್.ಡಿ. ಶಶಿಕುಮಾರ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಎಸ್.ವಿ. ಜಗದೀಶ್ ವಂದಿಸಿದರು.