*ಗೋಣಿಕೊಪ್ಪಲು, ಸೆ. 19: ಎಲೊಪಿನೋ ಎಂಬ ವಿದೇಶಿ ತಳಿಯ ಹಸಿಮೆಣಸು ಉತ್ಪಾದನೆ ಸೇರಿದಂತೆ ಇತರ ಉತ್ಪಾದನೆ ಹಾಗೂ ಮಾರಾಟ ದಿಂದ 14 ಲಕ್ಷದ 45 ಸಾವಿರದ 904 ರೂ. ಲಾಭ ಗಳಿಸಲಾಗಿದೆ. ಬೆಂಗಳೂರಿನ ಗ್ಲೋಬಲ್ ಗ್ರೀನ್ ಕಂಪನಿಗಳೊಂದಿಗಿನ ಒಪ್ಪಂದದಂತೆ 2 ಲಕ್ಷ ಕೆ.ಜಿ. ಎಲೊಪಿನಾ ಮೆಣಸನ್ನು ಮಾರಾಟ ಮಾಡಿ, ಒಂದು ಕೋಟಿ 2 ಲಕ್ಷದ 95 ಸಾವಿರ ಮೌಲ್ಯದ ವಹಿವಾಟು ನಡೆಸಿ ಲಾಭಗಳಿಸಿರುವ ದಾಗಿ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾಹಿತಿ ನೀಡಿದರು.ಸ್ಕ್ವಾಷ್, ಜಾಮ್, ಸ್ಲೈಸ್, ಟಿಟ್‍ಬಿಟ್ಸ್ ಹಣ್ಣಿನ ಉತ್ಪಾದನೆಗಳಿಂದ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘ 2016-17ನೇ ಸಾಲಿನಲ್ಲಿ 25 ಲಕ್ಷ ಉತ್ಪಾದಿಸಿ ಮಾರಾಟ ಮಾಡಿದೆ ಎಂದು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಕಿತ್ತಳೆ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಎಲೊಪಿನೋ ಉತ್ಪಾದನೆಗೆ ಮೆಣಸು ಖರೀದಿಗೆ 61 ಲಕ್ಷದ 65 ಸಾವಿರದ 320 ರೂ.ಗಳು, ವಿನಿಗರ್ ಖರೀದಿಗಾಗಿ 28 ಲಕ್ಷದ 22 ಸಾವಿರದ 649 ರೂ.ಗಳು, ಉಪ್ಪು, ರಾಸಾಯನಿಕ ಖರೀದಿಗಾಗಿ 2 ಲಕ್ಷದ 70 ಸಾವಿರದ 725 ರೂ. ಹಾಗೂ ಕಾರ್ಖಾನೆಯ ನಿರ್ವಹಣೆಗಾಗಿ 22 ಲಕ್ಷದ 79 ಸಾವಿರದ 145 ರೂ.ಗಳಂತೆ ಸುಮಾರು 1 ಕೋಟಿ 19 ಲಕ್ಷದ 79 ಸಾವಿರ ರೂ.ಗಳನ್ನು ವೆಚ್ಚ ಮಾಡ ಲಾಗಿದ್ದು, ಸಂಘದ ವತಿಯಿಂದಲೇ ಸುಮಾರು 16 ಲಕ್ಷ ಎಲೊಪಿನೋ ಮೆಣಸಿನ ಸಸಿಗಳನ್ನು ರೈತರಿಗೆ ವಿತರಿಸಿ ರೈತರಿಂದ 2 ಲಕ್ಷದ 60 ಸಾವಿರ ಕೆ.ಜಿ. ಮೆಣಸನ್ನು ಸಂಗ್ರಹಿಸಲಾಗಿದೆ.
2 ಲಕ್ಷದ ಹಸಿಮೆಣಸನ್ನು ಸೆಸ್‍ಲಾಂಗ್ ಟ್ರೇಡರ್ಸ್ ಕಂಪನಿಗೆ ಯಾವದೇ ಖರ್ಚು ವೆಚ್ಚವಿಲ್ಲದೆ 50 ಲಕ್ಷದ 19 ಸಾವಿರದ 300 ರೂ.ಗಳಿಗೆ ನೇರವಾಗಿ ವಹಿವಾಟು ನಡೆಸಿ, 7 ಲಕ್ಷ ಲಾಭ ಪಡೆದುಕೊಂಡಿದೆ ಎಂದು ಹೇಳಿದರು.
ಸುಮಾರು 60 ಕೆ.ಜಿ. ಎಲೊಪಿನೋ ಹಸಿಮೆಣಸನ್ನು ಸಂಘದ ಘಟಕದಲ್ಲೆ ವಿನಿಗರ್ ಮತ್ತು ಉಪ್ಪಿನ ಮಿಡಿಗೆ ಬಳಕೆ ಮಾಡಿದ್ದು,
(ಮೊದಲ ಪುಟದಿಂದ) ಇದನ್ನು ಸ್ಲೈಸ್‍ಗಾಗಿ ಪರಿವರ್ತಿಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಮುಂಬೈ ಹಾಗೂ ತಮಿಳುನಾಡಿನ ಗ್ಲೋಬಲ್ ಗ್ರೀನ್ ಕಂಪನಿ ಬೇಡಿಕೆ ಸಲ್ಲಿಸಿದ್ದು, ಒಡಂಬಡಿಕೆ ಪಡೆದುಕೊಂಡಿದೆ. ಇದರ ಒಟ್ಟು ಬೆಳೆ 63 ಲಕ್ಷಗಳಾಗಿರುತ್ತದೆ. ಈ ವಹಿವಾಟಿನಿಂದ 2017-18ನೇ ಸಾಲಿಗೆ ಸಂಘಕ್ಕೆ 20 ಲಕ್ಷ ಲಾಭ ಗಳಿಸುವ ನಿರೀಕ್ಷೆ ಇದೆ.
ಈ ನಿಟ್ಟಿನಲ್ಲಿ ಎಲೊಪಿನೋ ಮೆಣಸು ಉತ್ಪಾದನೆ ಮತ್ತು ಮಾರಾಟದಿಂದ 2 ವರ್ಷಗಳಲ್ಲಿ 27 ಲಕ್ಷ ಲಾಭ ಸಂಘಕ್ಕೆ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಯಾವದೇ ಖರ್ಚು, ವೆಚ್ಚವಿಲ್ಲದೆ ಬೆಂಗಳೂರಿನ ಕೆ. ಆರ್. ಮಾರ್ಕೆಟ್ ಹಣ್ಣಿನ ಮಂಡಿಯಿಂದ 10 ಲಕ್ಷದ 20 ಸಾವಿರ ಆದಾಯ ಮತ್ತು ಬೆಂಗಳೂರಿನ ಸಿಂಗನ ಅಗ್ರಹಾರ ಎ.ಪಿ.ಎಂ.ಸಿ ಯಾರ್ಡ್‍ನಿಂದ 6 ಲಕ್ಷ ಆದಾಯ ಗಳಿಕೆಯಾಗಿದೆ ಎಂದು ತಿಳಿಸಿದರು.
ಸಂಘದ ಚಟುವಟಿಕೆಗಳ ಏಳಿಗೆ ಎಂಬಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಹಕಾರ ಇಲಾಖೆ ನೂತನ ಕಟ್ಟಡದಲ್ಲಿ 15x20 ಅಡಿಯ ಮಳಿಗೆಯನ್ನು ಸಂಘ ಪಡೆದುಕೊಂಡಿದ್ದು, ಇದರ ಕಾಮಗಾರಿಯೂ ಪೂರ್ಣಗೊಂಡಿದೆ. ಅಲ್ಲದೆ ಮಡಿಕೇರಿ ಕಾಫಿ ಬೆಳೆಗಾರರ ಸಹಕಾರ ಸಂಘದ ಕಾಫಿ ಕೃಪಾ ಕಟ್ಟಡದಲ್ಲಿ ಒಂದು ಮಳಿಗೆಯನ್ನು ಬಾಡಿಗೆಗೆ ಪಡೆದುಕೊಂಡು ಸಂಘದ ವ್ಯಾಪಾರ ವಹಿವಾಟು ನಡೆಸಲಾಗುವದು ಎಂದು ತಿಳಿಸಿದರು.
ಕೂರ್ಗ್ ಕನ್‍ಸೋಲಿಡೇಟ್ ಕಾಮೋಡಿಟಿ ಐನ್ ಮನೆ ಹಾಗೂ ಪತಾಯ ಕೂರ್ಗ್ ಸ್ಟೋರ್ ಎಂಬ ಬ್ರಾಂಡ್‍ನಲ್ಲಿ ವಿವಿಧ ರೀತಿಯ ಜೇನಿನ ಉತ್ಪನ್ನಗಳು, ಉಪ್ಪಿನಕಾಯಿ, ನೆಲ್ಲಿಕಾಯಿ, ಬಿಟ್ಟರ್, ಕಿತ್ತಳೆ, ಹಿರಳೆಕಾಯಿ, ಬಿದಿರಿನ ಉಪ್ಪಿನಕಾಯಿಗಳನ್ನು ತಯಾರಿಸಿ 4 ಲಕ್ಷ ರೂ.ಗಳ ಉತ್ಪನ್ನಗಳನ್ನು ನೀಡಿ ಲಾಭ ಗಳಿಸಿದೆ ಎಂದು ಹೇಳಿದರು.
ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಮುಂದಾಗಲಾಗು ವದು. ಸಂಘವು ನಿರಂತರವಾಗಿ ಉಳಿದುಕೊಂಡು ಅಭಿವೃದ್ಧಿ ಹೊಂದಲು ಯುವ ಸಮುದಾಯದ ಅಗತ್ಯತೆ ಹೆಚ್ಚು ಇರುವದರಿಂದ ಆಸಕ್ತ ಯುವಕರನ್ನೆ ಸದಸ್ಯತ್ವ ನವೀಕರಣಕ್ಕೆ ಪ್ರೇರೇಪಿಸಬೇಕು ಎಂದು ಈ ಸಂದÀರ್ಭ ತಿಳಿಸಿದರು.
ಸಭೆಗೆ ಮೊದಲು ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಎಂ.ಕೆ. ಅರವಿಂದ್ ಕುಟ್ಟಪ್ಪ ಸ್ವಾಗತಿಸಿದರು. ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಎಸ್. ಎಂ. ವಿಶ್ವನಾಥ್ ವಂದಿಸಿ, ಕಳೆದ ಸಾಲಿನ ವರದಿಯನ್ನು ವ್ಯವಸ್ಥಾಪಕ ಜೆ.ವಿ. ಹೇಮಂತ್ ಕುಮಾರ್ ಮಂಡಿಸಿದರು.
ನಿರ್ದೇಶಕರುಗಳಾದ ಕಡೇಮಾಡ ಸುನಿಲ್ ಮಾದಪ್ಪ, ಕೆ.ಯು. ಪೂಣಚ್ಚ, ಎಸ್.ಎಸ್. ಸುರೇಶ್, ಸಿ.ಎಂ. ಸೋಮಣ್ಣ, ಕೆ.ಕೆ. ದಿನೇಶ್, ಎ.ಆರ್. ಕೃಷ್ಣಕುಮಾರ್, ಉಪಸ್ಥಿತರಿದ್ದರು.
ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಸೇರಿದಂತೆ ಸಂಘದ ಸದಸ್ಯರುಗಳು ಹಾಜರಿದ್ದರು.
ಚಿತ್ರ ವರದಿ-ಎನ್.ಎನ್. ದಿನೇಶ್