ಮಡಿಕೇರಿ, ಸೆ. 19: ಕಾಫಿ ಬೆಳೆಗಾರರ ಸಹಕಾರ ಸಂಘದ 52ನೇ ಮಹಾಸಭೆ ಇತ್ತೀಚೆಗೆ ನಗರದ ಕೆಳಗಿನ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಅಭಿವೃದ್ಧಿ ಕುರಿತು ಸಮಾಲೋಚನೆ ಮಾಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಎಂ.ಬಿ. ದೆಸ್ಥಾಪನೆ ಹಾಗೂ ಹೆಬ್ಬಾಲೆಯಲ್ಲಿ ಕಾಫಿ ಕ್ಯೂರಿಂಗ್‍ನಲ್ಲಿ ಹಳೆ ಯಂತ್ರವನ್ನು ಬದಲಿಸಿ ಹೊಸ ಯಂತ್ರವನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಮೃತರಾದ ಸದಸ್ಯರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ತಾಕೇರಿ ಪೊನ್ನಪ್ಪ, ನಿರ್ದೇಶಕರುಗಳಾದ ಹೊಸೂರು ರಮೇಶ್ ಜೋಯಪ್ಪ, ಬಿ.ಡಿ. ಮಂಜುನಾಥ್ ಸೇರಿದಂತೆ ಇನ್ನಿತರರು ಇದ್ದರು.ವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಲದ ಸುಳಿಯಲ್ಲಿದ್ದ ಸಂಘ ತನಗೆ ವ್ಯತಿರಿಕ್ತವಾಗಿ ಬಂದ ತೀರ್ಪಿನ ಹಿನ್ನೆಲೆಯಲ್ಲಿ ರೂ. 1.55 ಕೋಟಿ ಮರುಪಾವತಿಸಿ ಕೇಂದ್ರ ಸರ್ಕಾರಕ್ಕೆ ಬಡ್ಡಿ ಮನ್ನಾಕ್ಕಾಗಿ ಮನವಿ ಮಾಡಿದೆ. ಸಂಘಕ್ಕೆ ಆದಾಯ ಮೂಲದ ಕೊರತೆ ಇರುವದರಿಂದ ಸಂಘದ ಹುಣಸೂರುನಲ್ಲಿರುವ 4 ಎಕರೆ 36 ಗುಂಟೆ ಜಾಗವನ್ನು ಮಾರಾಟಕ್ಕೆ ಯತ್ನಿಸಲಾಗಿದ್ದರೂ, ಇದುವರೆಗೂ ಸಾಧ್ಯವಾಗಿಲ್ಲ. ಜಾಗ ಮಾರಾಟವಾದಲ್ಲಿ ಸಾಲ ಮರುಪಾವತಿಸಿ ಸಂಘವು ಪುನಶ್ಚೇತನಗೊಳ್ಳಲಿದೆ ಎಂದರು.

ಸಭೆಯಲ್ಲಿ ಕಕ್ಕಬೆ ಮತ್ತು ಹುಣಸೂರು ಹಳೆ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ತೆರೆಯುವದು, ಹೆಬ್ಬಾಲೆಯಲ್ಲಿ ಖಾಲಿಯಿರುವ 10 ಎಕರೆ ಜಾಗದಲ್ಲಿ ಕ್ಲಸ್ಟರ್ ಗುಂಪು ಮಾಡಿಕೊಂಡು ಪೆಪ್ಪರ್ ಪಾರ್ಕ್ v