ಮಡಿಕೇರಿ, ಸೆ. 19: ವೀರಾಜಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವನ್ಯಧಾಮ ಮತ್ತು ಪ್ರವಾಸೋದ್ಯಮ ನಡೆಸುತ್ತಿರುವದಾಗಿ ಪ್ರತಿಬಿಂಬಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುನಾಣಿ ಗ್ರಾಮದ ಪರಕಟಗೇರಿಯ ಹಿರಿಯರಾದ ಎ.ಬಿ. ಅಪ್ಪಣ್ಣ, ತೆರಾಲು ಗ್ರಾಮದಲ್ಲಿ ಖಾಸಗಿ ಭೂಮಿ ಖರೀದಿಸಿದ ಉತ್ತರ ಪ್ರದೇಶದ ವ್ಯಕ್ತಿ ಮತ್ತು ಆತನ ಪತ್ನಿ ನಂತರದ ದಿನಗಳಲ್ಲಿ ಅಕ್ಕಪಕ್ಕದ ಸರ್ಕಾರಿ ಮಡಿಕೇರಿ, ಸೆ. 19: ವೀರಾಜಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ವನ್ಯಧಾಮ ಮತ್ತು ಪ್ರವಾಸೋದ್ಯಮ ನಡೆಸುತ್ತಿರುವದಾಗಿ ಪ್ರತಿಬಿಂಬಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುನಾಣಿ ಗ್ರಾಮದ ಪರಕಟಗೇರಿಯ ಹಿರಿಯರಾದ ಎ.ಬಿ. ಅಪ್ಪಣ್ಣ, ತೆರಾಲು ಗ್ರಾಮದಲ್ಲಿ ಖಾಸಗಿ ಭೂಮಿ ಖರೀದಿಸಿದ ಉತ್ತರ ಪ್ರದೇಶದ ವ್ಯಕ್ತಿ ಮತ್ತು ಆತನ ಪತ್ನಿ ನಂತರದ ದಿನಗಳಲ್ಲಿ ಅಕ್ಕಪಕ್ಕದ ಸರ್ಕಾರಿ ನಿರ್ಧರಿಸಿರುವದಾಗಿ ತಿಳಿಸಿದರು.

ಬಿರುನಾಣಿ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಪೆಮ್ಮಯ್ಯ ಮಾತನಾಡಿ, ಕಳೆದ 15 ವರ್ಷಗಳಿಂದ ನಿಯಮ ಬಾಹಿರವಾಗಿ ಅನೇಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ದು, ದಬ್ಬಾಳಿಕೆ ಮುಂದುವರೆದಿದೆ ಎಂದು ಆರೋಪಿಸಿದರು. ಬೆಟ್ಟ ಕುರುಬ, ಜೇನು ಕುರುಬ, ಎರವ ಸೇರಿದಂತೆ ವಿವಿಧ ಗಿರಿಜನರನ್ನು ಈ ಪ್ರದೇಶದಿಂದ ಕಿರುಕುಳದ ಮೂಲಕ ಹೊರ ಕಳುಹಿಸಿದ್ದು, ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅನೆÉೀಕ ನಿಯಮ ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ಆರೋಪಿಸಿದ ಗಿರೀಶ್ ಪೆಮ್ಮಯ್ಯ, ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಈ ವ್ಯಕ್ತಿಯಿಂದ ಕೊಡಗಿನ ಸಂಸ್ಕøತಿಗೆ ಧಕ್ಕೆಯಾಗುತ್ತಿದ್ದು, ಅಕ್ರಮ ಚಟುವಟಿಕೆಗಳು ನಡೆಯುತ್ತಿರುವದಕ್ಕೆ ಸೂಕ್ತ ಸಾಕ್ಷಿಗಳಿವೆ ಎಂದು ಸಮರ್ಥಿಸಿ ಕೊಂಡರು. ಗ್ರಾಮದಲ್ಲಿಉತ್ತಮ ಕಾರ್ಯವನ್ನು ಮಾಡಿದರೆ ಅದಕ್ಕೆ ಗ್ರಾಮಸ್ಥರ ಬೆಂಬಲವಿದೆ. ಆದರೆ, ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಅದಕ್ಕೆ ಸಹಮತವಿಲ್ಲವೆಂದರು. ಖಾಸಗಿ ವನ್ಯಧಾಮ ಮತ್ತು ಪರಿಸರ ಪ್ರವಾಸೋದ್ಯಮವೆಂದು ಹೇಳಿಕೊಂಡು ಸರ್ಕಾರವನ್ನು ವಂಚಿಸಿ ದುರ್ಬಲರಿಗೆ ಕಿರುಕುಳ ನೀಡುತ್ತಿರುವದನ್ನು ಮತ್ತು ಅಕ್ರಮವಾಗಿ ಭೂ ಪ್ರದೇಶ ಹೊಂದಿರುವದನ್ನು ಖಂಡಿಸುವದಾಗಿ ತಿಳಿಸಿದರು.

ಒತ್ತುವರಿದಾರ ಯಾವದೇ ಅಧಿಕಾರಿಗಳ ಮಾತನ್ನು ಕೇಳದೆ ಇರುವದರಿಂದ ಕಾನೂನಿನ ಹೋರಾಟಕ್ಕೆ ಮುಂದಾಗಿರುವದಾಗಿ ಗಿರೀಶ್ ಪೆಮ್ಮಯ್ಯ ತಿಳಿಸಿದರು. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರಿಗೆ ದೂರು ನೀಡಲಾಗಿತ್ತು. ಸಚಿವರು ನೀಡಿದ ಸೂಚನೆಗೂ ಪೊಲೀಸ್ ಇಲಾಖೆಯಲ್ಲಿ ಯಾವದೇ ಬೆಂಬಲ ಸಿಕ್ಕಿಲ್ಲ. ಆದ್ದರಿಂದ ಗ್ರಾಮಸ್ಥರು ಸಂಘಟಿತರಾಗಿ ಹೋರಾಟ ನಡೆಸಲು ಸಿದ್ಧರಾಗಿರುವದಾಗಿ ಹೇಳಿದರು.

ಜಾಗ ಅತಿಕ್ರಮಣ ಮಾಡಿಕೊಂಡಿರುವ ವ್ಯಕ್ತಿ ನೀಡುವ ಸುಳ್ಳು ದೂರುಗಳನ್ನು ಆಧರಿಸಿ ಇಲಾಖೆಗಳು ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಿಕೊಂಡು ಕಿರುಕುಳ ನೀಡಿದರೆ ಪ್ರತಿಭಟನೆ ನಡೆಸ ಲಾಗುವದು. ಪುಲಿಯಾತ್ ಕೊಲ್ಲಿ ಮತ್ತು ಬಕ್ಕರೆ ಪೈಸಾರಿಯಲ್ಲಿನ ಆದಿವಾಸಿಗಳನ್ನು ಗುರುತಿಸಿ ಮರಳಿ ಭೂಮಿಯನ್ನು ನೀಡಬೇಕು. ದೌರ್ಜನ್ಯ ನಡೆಸಿದ ವ್ಯಕ್ತಿ ಹಾಗೂ ಆತನ ಪತ್ನಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು. ಇವರ ವಶದಲ್ಲಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಬೇಕು, ಕಿರುಕುಳ ನೀಡಿ ತಮ್ಮ ವಶಕ್ಕೆ ಪಡೆದಿರುವ ದುರ್ಬಲರ ಭೂಮಿಯನ್ನು ಕೂಡ ಅಧಿಕಾರಿಗಳು ತೆರವುಗೊಳಿಸಿ ಸಂಬಂಧಿಸಿದವರಿಗೆ ಮರಳಿ ನೀಡಬೇಕು ಮತ್ತು ಹೊಳೆ ಬದಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥ ಪಿ.ಪಿ. ರವೀಂದ್ರ, ಬೊಟ್ಟಂಗಡ ಮಹೇಶ್ ಹಾಗೂ ಪರಿವಾರನ ಅಪ್ಪಣ್ಣ ಒತ್ತಾಯಿಸಿದರು.