ಮಡಿಕೇರಿ, ಸೆ. 19: ಹೊಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ವಾರ್ಡ್ 1 ರ ಸಭೆ ತಾ. 25 ರಂದು ಬೆಳಿಗ್ಗೆ 10.30 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ವಾರ್ಡ್ ಅಧ್ಯಕ್ಷೆ ವಿಶಾಲಕ್ಷಿ ಅಧ್ಯಕ್ಷತೆಯಲ್ಲಿ ನಡಯಲಿದೆ.

ವಾರ್ಡ್ 2 ರ ಸಭೆ ತಾ. 26 ರಂದು ಅಪರಾಹ್ನ 4.30 ಗಂಟೆಗೆ ಮಟ್ಟಪರಂಬು ಅಂಗನವಾಡಿಯಲ್ಲಿ ವಾರ್ಡ್ ಅಧ್ಯP ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ, ವಾರ್ಡ್ 3 ರ ಸಭೆ ತಾ. 27 ರಂದು ಅಪರಾಹ್ನ 4.30 ಗಂಟೆಗೆ ದುಬಾರೆ ತಮಿಳು ಶಾಲೆಯಲ್ಲಿ ವಾರ್ಡ್ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆಯಲ್ಲಿ ಹಾಗೂ ವಾರ್ಡ್ 4 ರ ಸಭೆ ತಾ. 25 ರಂದು ಅಪರಾಹ್ನ 4 ಗಂಟೆಗೆ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಡ್ ಅಧ್ಯಕ್ಷ ಕೆ.ಎಂ. ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯಲಿದೆ

ಗ್ರಾಮ ಸಭೆ

ಹೊಸೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ತಾ. 28 ರಂದು ಪೂರ್ವಾಹ್ನ 11 ಗಂಟೆಗೆ ಶ್ರೀ ಮಹಾದೇಶ್ವರ ದೇವಸ್ಥಾನದ ಪಕ್ಕದ ಸುವರ್ಣ ಗ್ರಾಮ ಸಮುದಾಯ ಭವನದಲ್ಲಿ ಅಧ್ಯಕ್ಷ ಕೆ.ಎಂ. ಗೋಪಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಸಹಾಯಕ ನಿರ್ದೇಶಕರು ಮೀನುಗಾರಿಕೆ ಇಲಾಖೆ ಪೊನ್ನಂಪೇಟೆ ಇವರ ಸಮ್ಮುಖದಲ್ಲಿ ನಡೆಯಲಿದೆ.