ಮಡಿಕೇರಿ, ಸೆ. 20: ದಕ್ಷಿಣ ಕೊಡಗಿನ ಕುಟ್ಟದಿಂದ ತಿತಿಮತಿವರೆಗಿನ 9 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿರುವ ಆದೇಶದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಒಂದೇ ವೇದಿಕೆಯಡಿ ಆಕ್ಷೇಪಣೆ ಸಲ್ಲಿಸಲು ಫೆಡರೇಷನ್ ಆಫ್ ಕೊಡವ ಸಮಾಜ, ಕೂರ್ಗ ವೈಲ್ಡ್ ಲೈಫ್ ಸೊಸೈಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ನಿರ್ಧರಿಸಿವೆ. ಗ್ರಾಮೀಣ ಜನರ ಹಿತವನ್ನು ಕಾಯುವ ಮೂಲಕ ಪರಿಸರದ ಸಂರಕ್ಷಣೆಯನ್ನೂ ಮಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಿಂದ ಒಂದೇ ಧ್ವನಿ ಕೇಳಿ ಬರಬೇಕೆನ್ನುವ ಉದ್ದೇಶದ ಹಿನ್ನೆಲೆ ಯಲ್ಲಿ ಎಲ್ಲರು ಒಗ್ಗಟ್ಟಾಗಿರುವದಾಗಿ ಪದಾಧಿಕಾರಿಗಳು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪರಿಷತ್‍ನ ಮಾಜಿ ಅಧ್ಯಕ್ಷ ಹಾಗೂ ಹಿರಿಯರಾದ ಜೆ.ಎ.ಕರುಂಬಯ್ಯ, ಈಗಾಗÀಲೆ ಕೊಡಗಿನ ಮೂರು ಪ್ರದೇಶಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಿ ನೋಟಿಫಿಕೇಷನ್ ಅಂತಿಮಗೊಳಿಸ ಲಾಗಿದೆ. ದಕ್ಷಿಣ ಕೊಡಗಿನ ಕುಟ್ಟದಿಂದ ತಿತಿಮತಿವರೆಗಿನ 9 ಗ್ರಾಮಗಳ ಜನರು ಈ ಆದೇಶದಿಂದ ಸಾಕಷ್ಟು ಕಷ್ಟ ನಷ್ಟ ಅನುಭವಿಸುವ ಸಾಧ್ಯತೆ ಇದ್ದು, ಇದನ್ನು ತಪ್ಪಿಸಲು ಸೆ.19 ರಂದು ಸಭೆ ನಡೆಸಿದ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ, ಕೊಡವ ಸಮಾಜಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲು ಏಕ ನಿರ್ಧಾರ ಕೈಗೊಂಡಿರುವದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಪರಿಸರವಾದಿಗಳು ಮತ್ತು ಬೆಳೆಗಾರರು ಎನ್ನುವ ಘರ್ಷಣೆಗೆ ಅವಕಾಶವಿಲ್ಲದಂತೆ ಎಲ್ಲರು ಒಗ್ಗಟ್ಟಾಗಿ ಗ್ರಾಮೀಣ ಜನರ ಹಿತವನ್ನು ಕಾಯುವದು ಮತ್ತು ಪರಿಸರವನ್ನು ಉಳಿಸುವದಕ್ಕಾಗಿ ಒಂದೇ ವೇದಿಕೆಯಡಿ ಹೋರಾಟ ನಡೆಸುವದು ಇಂದು ಅನಿವಾರ್ಯ ವಾಗಿದೆ ಎಂದರು. ಸೆ.25ರ ಒಳಗೆ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲಾಗುವ ದೆಂದು ತಿಳಿಸಿದ ಕರುಂಬಯ್ಯ, ಸರ್ಕಾರದ ಕ್ರಮವನ್ನು ಪರಿಶೀಲಿಸಿ ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸಲಾಗುವದು ಎಂದರು.
ಮೇಲ್ವಿಚಾರಣಾ ಸಮಿತಿ ಅನುಮತಿ ಅಗತ್ಯ
ವನ್ಯಜೀವಿಗಳ ಸಂರಕ್ಷಣೆÉ ಯೊಂದಿಗೆ ಗ್ರಾಮಗಳು ಕೂಡ ಉಳಿಯಬೇಕಾಗಿದೆ. ಆದರೆ, ಸರ್ಕಾರದ ಅಂತಿಮ ನೋಟಿಫಿಕೇಷನ್ ಪ್ರಕಾರ ಈ 9 ಗ್ರಾಮಗಳ ಸಮೀಪವಿರುವ ಅರಣ್ಯ ಪ್ರದೇಶದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಯಾವದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾದರೂ ಮೇಲ್ವಿಚಾರಣಾ ಸಮಿತಿಯ ಅನುಮತಿ ಪಡೆಯಬೇಕಾಗಿದೆ. ಪ್ರತಿಯೊಂದು ಕಾರ್ಯಕ್ಕೂ ಸಮಿತಿಯ ಅನುಮತಿಯನ್ನೇ ಅವಲಂಬಿಸಿದರೆ ಹಲವು ಅಡಚಣೆÉಗಳು ಎದುರಾಗುವ ಸಂಭವವಿದೆ.