ಮಡಿಕೇರಿ, ಸೆ. 20: ಇದೇ ತಾ. 24ರಿಂದ 28ರ ತನಕ ಚೀನಾದ ರುಗೌ ಜೈಂಸೋನಲ್ಲಿ ನಡೆಯಲಿರುವ 20ನೇ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಜಿಲ್ಲೆಯ ಐವರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ರಾಷ್ಟ್ರಮಟ್ಟದ ಸಾಧನೆಯೊಂದಿಗೆ ಏಷ್ಯಾಕೂಟದಲ್ಲಿ ಕೊಡಗಿನವರಾದ ಕೇಚೆಟ್ಟಿರ ರೇಷ್ಮಾ ದೇವಯ್ಯ, ಮಾರಮಡ ಮಾಚಮ್ಮ, ಮುಲ್ಲೇರ ಪೊನ್ನಮ್ಮ, ಪೆಮ್ಮಂಡ ಅಪ್ಪಯ್ಯ ಹಾಗೂ ಕೆ.ಎ. ಈಶ್ವರ ಪಾಲ್ಗೊಳ್ಳಲಿದ್ದಾರೆ. ಈ ತಂಡ ಇಂದು ಜಿಲ್ಲೆಯಿಂದ ಪ್ರಯಾಣ ತೆರಳಲಿದ್ದಾರೆ.