ಗೋಣಿಕೊಪ್ಪಲು, ಸೆ. 20: ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆದ ತಾಲೂಕು ಮಟ್ಟದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಸ.ಪ.ಪೂ. ಕಾಲೇಜು, ಗೋಣಿಕೊಪ್ಪ ಲಯನ್ಸ್, ಪೊನ್ನಂಪೇಟೆ ಸಂತ ಆಂಥೋನಿ, ವೀರಾಜಪೇಟೆ ಸೆಂಟ್ ಆನ್ಸ್ ತಂಡಗಳು ಹೆಚ್ಚು ಪ್ರಶಸ್ತಿ ಪಡೆದುಕೊಂಡಿವೆ.

ಪ್ರೌಢ ವಿಭಾಗ: ಪ್ರೌಢ ಬಾಲಕಿಯರ ಉದ್ದ ಜಿಗಿತದಲ್ಲಿ ಪೊನ್ನಂಪೇಟೆ ಸಂತ ಆಂಥೋನಿಯ ಎಂ. ಎಸ್. ಪಾಯಲ್, ಕುಟ್ಟಂದಿ ಸರ್ಕಾರಿ ಶಾಲೆಯ ವೈ.ಎಂ. ಕಾವ್ಯ, ಬಾಲಕರಲ್ಲಿ ಹಾತೂರು ಶಾಲೆಯ ಪಿ.ಆರ್. ರಾಜು, ಅಮ್ಮತ್ತಿ ನೇತಾಜಿ ಶಾಲೆಯ ಕೆ.ಸಿ. ಬೋಪಣ್ಣ, 3 ಸಾವಿರ ಮೀಟರ್ ಓಟ ಬಾಲಕಿಯರಲ್ಲಿ ಪೊನ್ನಂಪೇಟೆ ಸರ್ಕಾರಿ ಶಾಲೆಯ ಎಸ್ ಅದಿರಾ, ಶ್ರೀಮಂಗಲ ಸರ್ಕಾರಿ ಶಾಲೆಯ ಕಾರ್ತಿಕಾ, ಬಾಲಕರಲ್ಲಿ ಗೋಣಿಕೊಪ್ಪ ಶಾಲೆಯ ಹೆಚ್.ಎಸ್. ಕಾರ್ತಿಕ್, ಹುದಿಕೇರಿ ಶಾಲೆಯ ಪಿ. ಮುತ್ತ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬಾಲಕಿಯರ ಹಾಕಿಯಲ್ಲಿ ಪೊನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜು, ರೂಟ್ಸ್, ಬಾಲಕರಲ್ಲಿ ಪೊನ್ನಂಪೇಟೆ ಸರ್ಕಾರಿ ಪ.ಪೂ. ಕಾಲೇಜು, ಲಯನ್ಸ್.

ಕಬಡ್ಡಿ ಬಾಲಕಿಯರಲ್ಲಿ ವೀರಾಜಪೇಟೆ ಮೊರಾರ್ಜಿ ಶಾಲೆ, ರೂಟ್ಸ್, ಬಾಲಕರಲ್ಲಿ ಟಿ. ಶೆಟ್ಟಿಗೇರಿ ಸರ್ಕಾರಿ, ಪೊನ್ನಂಪೇಟೆ ಸರ್ಕಾರಿ ತಂಡ. ವಾಲಿಬಾಲ್ ಬಾಲಕರಲ್ಲಿ ಕೊಂಡಂಗೇರಿ ಸರ್ಕಾರಿ, ಪೊನ್ನಂಪೇಟೆ ಸರ್ಕಾರಿ. ಖೋಖೋ ಬಾಲಕಿಯರಲ್ಲಿ ಹೆಗ್ಗಳ ಸರ್ಕಾರಿ, ಶ್ರೀಮಂಗಲ ಪ್ರೌ. ಶಾಲೆ. ಬಾಲಕರಲ್ಲಿ ಹೆಗ್ಗಳ ಸರ್ಕಾರಿ, ಕುಟ್ಟ ಸರ್ಕಾರಿ.

ಥ್ರೋಬಾಲ್ ಬಾಲಕಿಯರಲ್ಲಿ ಸರ್ವದೈವತಾ, ಬಿಳುಗುಂದ ಸರ್ಕಾರಿ, ಬಾಲಕರಲ್ಲಿ ಸರ್ವದೈವತಾ, ಸಂತ ಅನ್ನಮ್ಮ. ಬಾಸ್ಕೆಟ್‍ಬಾಲ್ ಬಾಲಕಿಯರಲ್ಲಿ ಲಯನ್ಸ್, ಸಂತ ಅನ್ನಮ್ಮ, ಬಾಲಕರಲ್ಲಿ ಸಂತ ಅಂಥೋಣಿ, ಲಯನ್ಸ್. ಹ್ಯಾಂಡ್‍ಬಾಲ್ ಬಾಲಕಿಯರಲ್ಲಿ ಸಂತ ಅನ್ನಮ್ಮ, ಸಂತ ಅಂಥೋಣಿ, ಬಾಲಕರಲ್ಲಿ ಸಂತ ಅಂಥೋಣಿ, ಲಯನ್ಸ್. ಶೆಟಲ್ ಬ್ಯಾಡ್‍ಮಿಂಟನ್ ಬಾಲಕಿಯರಲ್ಲಿ ಕಾವೇರಿ ಶಾಲೆ, ಸಾಯಿಶಂಕರ್, ಬಾಲಕರಲ್ಲಿ ಥೋಮಸ್, ಮೌಂಟ್ ವ್ಯೂ.

ಬಾಲ್ ಬ್ಯಾಡ್‍ಮಿಂಟನ್ ಬಾಲಕಿಯರಲ್ಲಿ ಶಾರಾದ ಪ್ರೌ. ಶಾಲೆ, ಸರ್ವದೈವತ, ಬಾಲಕರಲ್ಲಿ ಸಂತ ಅನ್ನಮ್ಮ, ಸರ್ವದೈವತಾ ಶಾಲೆ, ಟೇಬಲ್ ಟೆನ್ನಿಸ್ ಬಾಲಕಿಯರಲ್ಲಿ ಸಂತ ಅಂಥೋಣಿ, ಸರ್ವದೈವತಾ, ಬಾಲಕರಲಿ ಸರ್ವದೈವತಾ, ಲಯನ್ಸ್.

ಫುಟ್‍ಬಾಲ್ ಬಾಲಕಿಯರಲ್ಲಿ ಗೋಣಿಕೊಪ್ಪ ಲಯನ್ಸ್, ಹಾತೂರು ಸರ್ಕಾರಿ, ಬಾಲಕರಲ್ಲಿ ಚೆನ್ನಯ್ಯನ ಕೋಟೆ ಸರ್ಕಾರಿ, ಗೋಣಿಕೊಪ್ಪ ಶಾಲೆ ಪ್ರಶಸ್ತಿ ಪಡೆದುಕೊಂಡಿವÉ.

ಪ್ರಾಥಮಿಕ ವಿಭಾಗ: ಪ್ರಾಥಮಿಕ ಶೆಟಲ್ ಬ್ಯಾಡ್‍ಮಿಂಟನ್ ಬಾಲಕಿಯರಲ್ಲಿ ಸಂತ ಅಂಥೋಣಿ, ಅಮ್ಮತ್ತಿ ಪ್ರಾಥಮಿಕ, ಬಾಲಕರಲ್ಲಿ ಲಯನ್ಸ್, ಶ್ರೀಮಂಗಲ.

ಹ್ಯಾಂಡ್‍ಬಾಲ್ ಬಾಲಕ, ಬಾಲಕಿಯರ ಎರಡು ವಿಭಾಗಗಳಲ್ಲಿ ಗೋಣಿಕೊಪ್ಪ ಲಯನ್ಸ್, ವೀರಾಜಪೇಟೆ ಸಂತ ಆನ್ಸ್.

ಬಾಸ್ಕೆಟ್‍ಬಾಲ್ ಬಾಲಕಿಯರ ಶಾಲೆ ಲಯನ್ಸ್, ಸಂತ ಅನ್ನಮ್ಮ ಶಾಲೆ, ಬಾಲಕರಲ್ಲಿ ಸಂತ ಅಂಥೋಣಿ, ಸಂತ ಅನ್ನಮ್ಮ ಶಾಲೆ. ಭಾರದ ಗುಂಡು ಎಸೆತದಲ್ಲಿ ಲಯನ್ಸ್‍ನ ನಾಟ್ಯ ದೇಚಕ್ಕ, ಜೆಸಿ ಶಾಲೆಯ ಎ.ಎಸ್. ಅಂಚಲ್, ಸಂತ ಆಂಥೋನಿಯ ಚಂಶಿತ.

ಬಾಲಕಿಯರ ಹಾಕಿಯಲ್ಲಿ ರೂಟ್ಸ್ ಶಾಲೆ, ಸಂತ ಅಂಥೋಣಿ ಬಾಲಕರಲ್ಲಿ ಲಯನ್ಸ್ ಶಾಲೆ, ಸಂತ ಅನ್ನಮ್ಮ ಶಾಲೆ.

ಕಬಡ್ಡಿ ಬಾಲಕಿಯರಲ್ಲಿ ಚೂರಿಕಾಡು ಪ್ರಾಥಮಿಕ ಶಾಲೆ, ಏಕಲವ್ಯ ವಸತಿ ಶಾಲೆ, ಬಾಲಕರಲ್ಲಿ ಪೊನ್ನಂಪೇಟೆ ಶಾಲೆ, ಚೂರಿಕಾಡು ಸರ್ಕಾರಿ ಶಾಲೆ.

ವಾಲಿಬಾಲ್ ಬಾಲಕಿಯರಲ್ಲಿ ಬೇಟೊಳಿ ಸರ್ಕಾರಿ ಶಾಲೆ, ಬಾಳೆಲೆ ಪ್ರಾಥಮಿಕ, ಬಾಲಕರಲ್ಲಿ ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ, ಜೆ.ಸಿ. ಪ್ರಾಥಮಿಕ ಶಾಲೆ.

ಖೋ-ಖೊ ಬಾಲಕಿಯರಲ್ಲಿ ಪೊನ್ನಪ್ಪಸಂತೆ ಸರ್ಕಾರಿ ಪ್ರಾಥಮಿಕ, ಮಂಚಳ್ಳಿ ಸರ್ಕಾರಿ ಪ್ರಾಥಮಿಕ, ಬಾಲಕರಲ್ಲಿ ಹೆಗ್ಗಳ ಪ್ರಾಥಮಿಕ ಶಾಲೆ, ಮಂಚಳ್ಳಿ ಪ್ರಾಥಮಿಕ ಶಾಲೆ.

ಥ್ರೋಬಾಲ್ ಬಾಲಕಿಯರಲ್ಲಿ ಸರ್ವದೈವತಾ, ಪೊನ್ನಪ್ಪಸಂತೆ ಸರ್ಕಾರಿ ಶಾಲೆ, ಬಾಲಕರಲ್ಲಿ ಸರ್ವದೈವತಾ, ಕಾನೂರು ಸರ್ಕಾರಿ ಶಾಲೆ.

ಟೇಬಲ್ ಟೆನ್ನಿಸ್ ಬಾಲಕಿಯರಲ್ಲಿ ಸಂತ ಅಂಥೋಣಿ, ಅಮ್ಮತ್ತಿ ಪ್ರಾಥಮಿಕ, ಬಾಲಕರಲ್ಲಿ ಸಂತ ಅಂಥೋಣಿ ಶಾಲೆ, ಸಾಯಿಶಂಕರ್ ಶಾಲೆ. ಫುಟ್‍ಬಾಲ್ ಬಾಲಕರಲ್ಲಿ ಲಿಟ್ಲ್‍ಫ್ಲವರ್ ಶಾಲೆ, ಚೂರಿಕಾಡು ಪ್ರಾಥಮಿಕ ಶಾಲೆ.

ಚೆಸ್ ಬಾಲಕಿಯರಲ್ಲಿ ಸಂತ ಅಂಥೋಣಿಯ ಅಂಚನಾ ದಿನೇಶ್, ತಂಗಮ್ಮ, ಸಿ.ಜೆ. ಅಮೃತ ಎ.ಆರ್. ಅನುಷ, ಸರ್ವದೈವತಾ ಶಾಲೆಯ ಎಮ್.ಆರ್. ನೀಲಮ್ಮ, ಬಾಲಕರಲ್ಲಿ ಲಯನ್ಸ್‍ನ ಗೌರವ್ ಗಣಪತಿ, ಮೊನೀಷ್ ಅಯ್ಯಪ್ಪ, ಪ್ರಣವ್ ಮುತ್ತಪ್ಪ, ಸರ್ವದೈವತಾ ಶಾಲೆಯ ಜೀವನ್, ಸಂತ ಅಂಥೋಣಿಯ ಕವೀರ್ ಬಹುಮಾನ ಪಡೆದು ಕೊಂಡಿದ್ದಾರೆ.