ಮಡಿಕೇರಿ, ಸೆ. 20: ಬಿಳಿಗೇರಿ, ಹಾಕತ್ತೂರು, ಕಗ್ಗೋಡ್ಲು ಮತ್ತು ಮೇಕೇರಿ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2016-17ನೇ ಸಾಲಿನಲ್ಲಿ ಸಂಘ ರೂ. 2.38 ಕೋಟಿ ವ್ಯಾಪಾರ ವಹಿವಾಟು ನಡೆಸಿ ರೂ. 34.85 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಉಳುವಾರನ ಎನ್. ಪಳಂಗಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ವಾರ್ಷಿಕ ಒಟ್ಟು ರೂ. 62.96 ಕೋಟಿ ವಹಿವಾಟು ನಡೆಸಿ ಮುನ್ನಡೆಯುತ್ತಿದೆ. 2016-17ನೇ ಸಾಲಿಗೆ ಶೇ. 12 ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ.

ಸಂಘದಲ್ಲಿ 1219 ಜನ ಸದಸ್ಯರಿದ್ದು ರೂ. 1.33 ಕೋಟಿ ಪಾಲು ಬಂಡವಾಳ ಸ್ವೀಕರಿಸಲಾಗಿದೆ. ಪ್ರಸ್ತುತ ಸಂಘವು ರೂ. 7.41 ಕೋಟಿ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಿದೆ.

ಈ ಸಾಲಿನಲ್ಲಿ ಒಟ್ಟು ರೂ. 12.25 ಕೋಟಿ ಸಾಲವನ್ನು ನೀಡಲಾಗಿದ್ದು, ಈ ಪೈಕಿ ರೂ. 9.24 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ರೂ. 1.06 ಕೋಟಿ ಮೊತ್ತದ ಮಧ್ಯಮಾವಧಿ ಸಾಲ, 29.65 ಲಕ್ಷದಷ್ಟು ಚಿನ್ನಾಭರಣ ಸಾಲ, ರೂ. 28.17 ಲಕ್ಷ ವಾಹನ ಸಾಲ, ರೂ. 24.64 ಲಕ್ಷ, ಇತರೆ ಸಾಲ ಹಾಗೂ ರೂ. 50 ಲಕ್ಷ ಜಾಮೀನು ಸಾಲ ನೀಡಲಾಗಿದೆ. ಸಂಘ ಸದಸ್ಯರಿಗೆ ನೀಡಿದ ಸಾಲದಲ್ಲಿ ಶೇ. 99 ರಷ್ಟು ವಸೂಲಾತಿ ಮಾಡಲಾಗಿದೆ ಎಂದು ಪಳಂಗಪ್ಪ ತಿಳಿಸಿದರು.

ಸಂಘವು 57 ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು, ಪ್ರಸ್ತುತ ವರ್ಷ ರೂ. 33.65 ಲಕ್ಷದಷ್ಟು ಸಾಲ ನೀಡಲಾಗಿದೆ. ಅವುಗಳ ವಸೂಲಾತಿ ಶೇ. 98 ರಷ್ಟು ಆಗಿದ್ದು, ವರದಿ ಸಾಲಿಗೆ 1191 ಸದಸ್ಯರು ಆರೋಗ್ಯ ವಿಮಾ ಕಾರ್ಡನ್ನು ಹೊಂದಿಕೊಂಡಿರುತ್ತಾರೆ. ಸಂಘದ ಶಾಖೆಯು ಮೇಕೇರಿಯಲ್ಲಿ ಗೋದಾಮು ಮತ್ತು ಅಂಗಡಿ ಮಳಿಗೆ ನಿರ್ಮಾಣ ಮಾಡಿ ಬಾಡಿಗೆಗೆ ನೀಡಲಾಗಿದೆ ಎಂದರು.

ಇಂದು ಸಭೆ

2016-17ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ತಾ. 21 ರಂದು (ಇಂದು) ಪೂರ್ವಾಹ್ನ 10.30 ಗಂಟೆಗೆ ಸಂಘದ ಸಭಾಂಗಣದಲ್ಲಿ ನಡೆಸಲಾಗುವದು ಎಂದು ಉಳುವಾರನ ಎನ್. ಪಳಂಗಪ್ಪ ಇದೇ ಸಂದರ್ಭ ತಿಳಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಸಿ. ಪೆÀÇನ್ನಪ್ಪ, ನಿರ್ದೇಶಕರುಗಳಾದ ಎಂ.ಡಿ. ಸಾಬು ತಿಮ್ಮಯ್ಯ, ಟಿ.ಎನ್. ಅಯ್ಯಪ್ಪ, ಪೈಕೇರ ಮನೋಹರ್ ಮಾದಪ್ಪ ಹಾಗೂ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಸಂಜೀವ್ ಕುಮಾರ್ ಉಪಸ್ಥಿತರಿದ್ದರು.