ಮಡಿಕೇರಿ, ಸೆ. 20: ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೆÉೀರಿ ಜಿಲ್ಲಾ ಹಾಗೂ ಸ್ತ್ರೀಶಕ್ತಿ ಒಕ್ಕೂಟದ ಸಹಯೋಗದಲ್ಲಿ ನಡೆದ ಮಾತೃಪೂರ್ಣ ಯೋಜನೆ ಮತ್ತು ಬಾಲ್ಯ ವಿವಾಹ ಕುರಿತು. ಮಹಿಳೆಯರು ಕಿಶೋರಿಯರು ಹಾಗೂ ಗರ್ಭಿಣಿ ಬಾಣಂತಿಯರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ರೋಜ್ ಮೇರಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಮಮ್ತಾಜ್, ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೆರವೇರಿಸಿದರು. ಮಾತೃಪೂರ್ಣ ಯೋಜನೆಯನ್ನು ರಾಜ್ಯಾದಾದ್ಯಂತ ಅಕ್ಟೋಬರ್ 2ರಂದು ಜಾರಿಗೆ ತರುತ್ತಿದ್ದು, ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು. ಒಬ್ಬ ಗರ್ಬಿಣಿ/ಬಾಣಂತಿಯರಿಗೆ ದಿನನಿತ್ಯ 21 ರೂಪಾಯಿ ವೆಚ್ಚದಲ್ಲಿ ಉತ್ತಮ ಆಹಾರ, ಹಾಲು, ಮೊಟ್ಟೆ, ತರಕಾರಿ ಹಾಗೂ ಕಡ್ಲೆ ಮಿಠಾಯಿ (ಚಿಕ್ಕಿ)ಯನ್ನು ನೀಡಲಾಗುತ್ತದೆ. ಅಲ್ಲದೆ ಕಬ್ಬಿಣಾಂಶದ ಮಾತ್ರೆಯನ್ನು ನೀಡಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಜೊತೆಗೆ ಒಳ್ಳೆಯ ವಿಶ್ರಾಂತಿ ಒಡನಾಟ ಬೆಳೆಯುತ್ತದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದು ಈ ಯೋಜನೆಯ ಅನುಷ್ಠಾನದಲ್ಲಿ ತಮ್ಮ ಪಾತ್ರ ಅತ್ಯಮೂಲ್ಯವಾದದ್ದು ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಸಹಕರಿಸಬೇಕೆಂದು ತಿಳಿಸಿದರು. ಡಾ. ಪ್ರಾಣೇಶ್ ಮಕ್ಕಳ ಸಂರಕ್ಷಣೆ, ಪೋಷಣೆ, ಆರೋಗ್ಯ; ಮಹಿಳೆಯರಿಗೆ ಪೌಷ್ಠಿಕ ಆಹಾರದ ಬಗ್ಗೆ ತಿಳಿಸಿದರು. ಸರಳಾಮಣಿ ಮಹಿಳಾ ಮೇಲ್ವೀಚಾರಕಿ ಬಾಲ್ಯ ವಿವಾಹ ನಿಷೇಧ ಹಾಗೂ ಹದಿಹರೆಯದವರ ಬಗ್ಗೆ ಮಾಹಿತಿ ನೀಡಿದರು. ಪ್ರಭಾವತಿ ರಕ್ಷಣಾಧಿಕಾರಿ ಮಹಿಳೆಯರಿಗೆ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕೆÀ್ಷ ಮೇರಿ ಅಂಬುದಾಸ್ ಇಲಾಖೆಯ ಯೋಜನೆಗಳ ಸದುಪಯೋಗ; ಮಹಿಳಾ ದಸರಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಬಗ್ಗೆ ಮಾಹಿತಿ ನೀಡಿದರು. ರೆಹನಾ ಫಿರೋಜ್ ಕಾರ್ಯಕ್ರಮ ನಿರೂಪಿಸಿದರು. ಲೀಲಾವತಿ ಹಿರಿಯ ಮಹಿಳಾ ಮೇಲ್ವಿಚಾರಕಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ವಂದಿಸಿದರು.