ಗೋಣಿಕೊಪ್ಪಲು, ಸೆ.21: ಶ್ರೀ ಕಾವೇರಿ ದಸರಾ ಸಮಿತಿ ಇವರ 39ನೇ ವರ್ಷದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿನಿಂದ ಚಾಲನೆಗೊಳ್ಳಲಿದೆ.
ತಾ.22 ರಂದು (ಇಂದು) ಸಂಜೆ 6 ಗಂಟೆಯಿಂದ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಶಾಲೆ ಅಮ್ಮತ್ತಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.30 ಗಂಟೆಯಿಂದ ಯುವ ದಸರಾ-2017 ಹಾಗೂ ಕಾವೇರಿ ಕಲಾಸಿರಿ ಗೋಣಿಕೊಪ್ಪಲು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಧ್ಯಕ್ಷತೆಯನ್ನು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮವನ್ನು ತಾ.ಪಂ. ಇಓ ಕಿರಣ್ ಪೆಡ್ನೇಕರ್ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್, ಜಮ್ಮಡ ಕೆ. ಸೋಮಣ್ಣ, ಯುವ ದಸರಾ ಅಧ್ಯಕ್ಷರು, ಜಿ.ಪಂ. ಸದಸ್ಯ ಸಿ.ಕೆ.ಬೋಪಣ್ಣ, ಧ್ಯಾನ್ ಸುಬ್ಬಯ್ಯ, ಕೆ.ಪಿ.ಬೋಪಣ್ಣ, ಸಿ.ಟಿ.ಗಣಪತಿ, ಗ್ರಾ.ಪಂ. ಅಧ್ಯಕ್ಷೆ ಎಂ.ಸೆಲ್ವಿ, ಪೆÇನ್ನಿಮಾಡ ಬೋಜಪ್ಪ, ಬಿ.ಡಿ.ಮುಕುಂದ, ಎಂ.ಕೆ.ಥೋಮಸ್, ಕೊಪ್ಪೀರ ಸನ್ನಿಸೋಮಯ್ಯ, ಕೆ.ಆರ್.ಬಾಲಕೃಷ್ಣ ರೈ, ಕೆ.ರಾಮಾಚಾರ್, ಎಂ.ಪಿ.ಕೇಶವ ಕಾಮತ್, ಸಿ.ಮಹಮ್ಮದ್ ರಫಿ ಮತ್ತು ಪಿ.ಕೆ.ವಿಜಯನ್ ಪಾಲ್ಗೊಳ್ಳಲಿದ್ದಾರೆ.