ಮಡಿಕೇರಿ*, ಸೆ.21 : ಪ್ರಸಿದ್ಧ ಗೋಣಿಕೊಪ್ಪಲು ದಸರಾ ನಾಡಹಬ್ಬ ಕುರಿತು “ಗೋಣಿಕೊಪ್ಪ ದಸರಾ ಆ್ಯಪ್‍ನ್ನು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿ, ಅವರ ಸಹಕಾರದೊಂದಿಗೆ “ಸರ್ಚ್ ಕೂರ್ಗ್ ಮೀಡಿಯಾ” ದ ವೀವೇಕ್‍ನರೇನ್ ಅವರು ಈ ಆ್ಯಪ್‍ನ್ನು ಅಭಿವೃದ್ಧಿ ಪಡಿಸಿದ್ದಾರೆ. “ಗೋಣಿಕೊಪ್ಪಲು ದಸರಾ-2017” ಆ್ಯಪ್‍ನಲ್ಲಿ ಗೋಣಿಕೊಪ್ಪಲು ದಸರಾ ಪ್ರಾರಂಭದ ಹಿನ್ನಲೆ ಒಳಗೊಂಡ ಮಾಹಿತಿ, ದಶ ಮಂಟಪಗಳ ಸಮಿತಿಗಳ ಮಾಹಿತಿ, ದೇವಾಲಯಗಳ ಮಾಹಿತಿ, ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳ ಮಾಹಿತಿ, ಗೋಣಿಕೊಪ್ಪಲನ್ನು ತಲುಪುವ ಗೂಗಲ್ ನೇವಿಗೇಶನ್ ಮ್ಯಾಪ್, ಗೋಣಿಕೊಪ್ಪಲು ಸುತ್ತಮುತ್ತಲಿರುವ ಪ್ರೇಕ್ಷಣಿಯ ಸ್ಥಳಗಳ ಮಾಹಿತಿ, ತುರ್ತು ಸಂಪರ್ಕಗಳ ಮಾಹಿತಿ, ಕೊಡಗಿನ ಪ್ರವಾಸೋಧ್ಯಮಕ್ಕೆ ಸಂಬಂಧಪಟ್ಟ ಮಾಹಿತಿ ಮುಂತಾದ ಹತ್ತು ಹಲವು ಮಾಹಿತಿಗಳು ಈ ಆ್ಯಪ್‍ಲ್ಲಿ ಲಭ್ಯವಿದೆ.
“ಗೋಣಿಕೊಪ್ಪಲು ದಸರಾ-2017” ಆ್ಯಪ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ವೀಕ್ಷಿಸಬಹುದಾಗಿದೆ. ಅದೇ ರೀತಿ ತಿತಿತಿ.goಟಿiಞoಠಿಠಿಚಿಜಚಿsಚಿಡಿಚಿ.ಛಿom ವೆಬ್ ಸೈಟನ್ನು ಗೋಣಿಕೊಪ್ಪಲುವಿನ ವರ್ಗೀಶ್ ರವರು ವಿನ್ಯಾಸಗೊಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಕಾರ್ಯಾಧ್ಯಕ್ಷರಾದ ಬಿ.ಎನ್. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಭಾವತಿ ಹಾಗೂ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳಾದ ಕೇಶವ ಕಾಮತ್, ಅಪ್ಪಣ್ಣ, ಯಾಸಮೀನ್, ಧನಲಕ್ಷ್ಮಿ, ಸುಲೇಖ, ಸಿ.ದೀಪಕ್ ಸದಸ್ಯರು ಇದ್ದರು.