ನಾಪೆÇೀಕ್ಲು, ಸೆ. 21: ಸಂಗೀತ, ನಾಟಕ, ನೃತ್ಯ, ಸಾಂಸ್ಕøತಿಕ ಕಾರ್ಯಕ್ರಮ, ಮೆರವಣಿಗೆ, ಕಿಕ್ಕಿರಿದ ಜನಸ್ತೋಮ ನಾಪೆÇೀಕ್ಲು ಕೊಡವ ಸಮಾಜಲ್ಲಿ ಏರ್ಪಡಿಸಲಾಗಿದ್ದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ 150 ನೇ ಹುಟ್ಟು ಹಬ್ಬಕ್ಕೆ ಸಾಕ್ಷಿಯಾಯಿತು. ಸಮಾರಂಭಕ್ಕೆ ಆಗಮಿಸಿದ ಜನರು ಕೂಡ ಕಾರ್ಯಕ್ರಮದಲ್ಲಿ ಮೈಮರೆತು ಆನಂದದ ಸವಿಯುಂಡರು.ಬೆಳಿಗ್ಗೆ 9 ಗಂಟೆಗೆ ಕಡಿಯತ್ತ್‍ನಾಡಿನ ಕಿರುಂದಾಡು ಗ್ರಾಮದ ಅಪ್ಪಚ್ಚ ಕವಿ ಮನೆಯಲ್ಲಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ, ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಮಾಜಿ ಕಾರ್ಯದರ್ಶಿ ಬಾದುಮಂಡ ಮುತ್ತಪ್ಪ, ಅಮ್ಮಣಿಚಂಡ ರಾಜಾ ಮಾದಪ್ಪ, ನಂದೇಟಿರ ರಾಜಾ, ಅಪ್ಪವೆರವಂಡ ಕುಟುಂಬಸ್ಥರು, ಗ್ರಾಮಸ್ಥರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡು ವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ನಾಪೆÇೀಕ್ಲು ಮಾರುಕಟ್ಟೆ ಯಿಂದ ಕೊಡವ ಸಮಾಜದವರೆಗೆ ನಡೆದ ಸಾಂಸ್ಕøತಿಕ ಮೆರವಣಿಗೆಯಲ್ಲಿ ಅಜ್ಜಪ್ಪ, ವಿಷ್ಣುಮೂರ್ತಿ ಕೋಲ, ಕಾಪಳ ಕಳಿಗಳ ಅಣುಕು ಪ್ರದರ್ಶನ, ಶಾಲಾ ಮಕ್ಕಳ ಬ್ಯಾಂಡ್, ಕುಪ್ಯ ಚ್ಯಾಲೆಯೊಂದಿಗೆ ಕೋವಿ ಹಿಡಿದು ಗತ್ತಿನಿಂದ ಸಾಗುತ್ತಿರುವ ಕೊಡವ ಪುರುಷರು, ಸಾಂಪ್ರದಾಯಿಕ ಉಡುಗೆಯಲ್ಲಿ ಮೆರವಣಿಗೆ ಸಾಗಿ ಬಂದ ಮಹಿಳೆಯರು ಮೆರವಣಿಗೆಗೆ ಆಕರ್ಷಪ್ರಾಯರಾಗಿದ್ದರು. ಈ ಸಂದರ್ಭದಲ್ಲಿ ನಾಪೆÇೀಕ್ಲು ಪಟ್ಟಣ ದಲ್ಲಿರುವ ಅಪ್ಪಚ್ಚಕವಿ ಅವರ ನಾಮ ಫಲಕ್ಕೆ ಅಖಿಲಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿದರು.

ನಂತರ ಕೊಡವ ಸಮಾಜದಲ್ಲಿ ಕೋಟೇರ ನೈಲ್ ಕುಟ್ಟಪ್ಪ ಮತ್ತು ಕಲಿಯಂಡ ಬೀನಾ ನವೀನ್ ಅವರ ‘ಅಂಬಿಕೆ ಸುಖ ಮಾಡ್ ಈ ಜಗಕ್’ ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಡಾ|| ಕಾಳಿಮಾಡ ಶಿವಪ್ಪ, ಚೆಕ್ಕೆರ ಪಂಚಮ್ ಬೋಪಣ್ಣ, ಮಂದ್ರಿರ ಸಂಜು,

(ಮೊದಲ ಪುಟದಿಂದ) ಬಟ್ಟೀರ ಡಯಾನ ಸಂಜು ಅವರ ಇಂಪಾದ ಹಾಡುಗಾರಿಕೆ. ನಾಪೆÇೀಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಅಪ್ಪಚ್ಚ ಕವಿ ರಚಿತ ಗೀತೆಗಳಿಗೆ ನತ್ಯ ಕಾರ್ಯಕ್ರಮಗಳು ಸಮಾರಂಭದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಅಖಿಲ ಕೊಡವ ಸಮಾಜ, ನಾಪೆÇೀಕ್ಲು ಕೊಡವ ಸಮಾಜ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಾಪೆÇೀಕ್ಲು ಕೊಡವ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಕರಾಗಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಇದು ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ 150ನೇ ಜನ್ಮ ದಿನದ ಮೊದಲನೇ ಸಮಾರಂಭ. ಹುಟ್ಟುಹಬ್ಬದ ಪ್ರಯುಕ್ತ ಬರುವ ವರ್ಷದ ಸೆಪ್ಟಂಬರ್ ತಿಂಗಳವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವದು ಎಂದರು. ಅಪ್ಪಚ್ಚಕವಿ ಅವರಿಗೆ ಅವರೇ ಸಾಟಿ. ಅವರು ರಚಿಸಿದ ಗೀತೆಗಳನ್ನು ಹಾಡಿ, ನಂತರ ಅವರನ್ನು ಮರೆಯುವ ಕೆಲಸವಾಗ ಬಾರದು. ಎಲ್ಲರಿಗೂ ಅಪ್ಪಚ್ಚಕವಿ ಬಗ್ಗೆ ಮಾಹಿತಿ, ಜನಜಾಗೃತಿ ಮೂಡಿಸುವ ಕೆಲಸವಾಗಬೇಕು. ಅವರು ಬರೆದ ನಾಟಕಗಳ ಪರಿಚಯ ಮಕ್ಕಳಿಗೆ ಕ್ವಿಜ್, ಪೈಪೆÇೀಟಿ, ಅಂಕಣ ಬರೆಸುವ ಕೆಲಸವಾಗಬೇಕು ಆದರೆ ಮಾತ್ರ 150 ನೇ ಹುಟ್ಟುಹಬ್ಬ ಸಾರ್ಥಕತೆ ಕಾಣಲು ಸಾಧ್ಯ ಎಂದರು.

ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೋ. ಇಟ್ಟೀರ ಬಿದ್ದಪ್ಪ ಅಪ್ಪಚ್ಚಕವಿ ಅವರ ಜೀವನ ಶೈಲಿಯ ಬಗ್ಗೆ ಮಾತನಾಡಿ ಕೊಡವ ಭಾಷೆಗೆ ಸಾಹಿತ್ಯ ಲೋಕದಲ್ಲಿ ಗಟ್ಟಿ ನೆಲೆ ಒದಗಿಸಿಕೊಟ್ಟ ಮಹಾಕವಿ ಅವರು. ಅವರ ಬದುಕು ಬರವಣಿಗೆ ವಿಶಿಷ್ಟವಾಗಿದೆ. ಆಗಿನ ಕಾಲದಲ್ಲಿಯೇ ಕೊಡವರ ಜನ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದರು. ಕೊಡವ ಭಾಷೆಯನ್ನು ಸಾಹಿತ್ಯ ಭಾಷೆ ಮಾಡಿದ ಮಹಾನ್ ಕವಿ. ಹೇಳಿದಂತೆ ನಡೆದ ಅದ್ವಿತೀಯ ಚೇತನ ಎಂದು ಹೇಳಿದರು.

ಶ್ರೀಯುತರ ಜನ್ಮ ದಿನ ಸರಕಾರಿ ಕಾರ್ಯಕ್ರಮವಾಗಬೇಕು, ಮಂಗಳೂರು ಅಥವಾ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಪ್ಪಚ್ಚಕವಿ ಅಧ್ಯಯನ ಪೀಠ ಆರಂಭಿಸಬೇಕು, ಶಾಲಾ ಕಾಲೇಜು ರಸ್ತೆಗಳಿಗೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ರಂಗಭೂಮಿ ಕಲಾವಿದ ಅಡ್ಡಂಡ ಕಾರ್ಯಪ್ಪ ಅಪ್ಪಚ್ಚಕವಿ ಅವರ ಸಾಹಿತ್ಯ ಬಗ್ಗೆ ಮಾತನಾಡಿ ಏಳನೇ ವಯಸ್ಸಿನಲ್ಲಿಯೇ ಜೈಮಿನಿ ಭಾರತವನ್ನು ಕಲಿತ ಶ್ರೇಷ್ಠ ವ್ಯಕ್ತಿ ಅವರು. 1906ನೇ ಇಸವಿಯಲ್ಲಿಯೇ ಪುಸ್ತಕದ ಮುನ್ನುಡಿಯನ್ನು ಕಾವ್ಯ ರೂಪದಲ್ಲಿ ಬರೆದ ದೈತ್ಯ ಪ್ರತಿಭೆ ಎಂದರು. ಅವರು ಅಪ್ಪಚ್ಚಕವಿ ಅವರು ರಚಿಸಿದ ಗೀತೆಗಳು, ನಾಟಕಗಳನ್ನು ಕಥಾನಾಟಕದ ಮೂಲಕ ಪ್ರದರ್ಶಿಸಿ, ಸಮಗ್ರ ಮಾಹಿತಿ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಲೋಗೋ ಬಿಡುಗಡೆ ಮಾಡಿದ ನಿವೃತ್ತ ಮೇಜರ್ ಜನರಲ್ ಮೂವೆರ ನಂಜಪ್ಪ, ಖ್ಯಾತ ಶಿಲ್ಪಿ ಅಪ್ಪನೆರವಂಡ ಕಿರಣ್ ಸುಬ್ಬಯ್ಯ, ಚಿತ್ರಕಲಾವಿದ ನೆಲ್ಲಮಕ್ಕಡ ಕಾವೇರಪ್ಪ, ಅಧ್ಯಕ್ಷತೆ ವಹಿಸಿದ ನಾಪೆÇೀಕ್ಲು ಕೊಡವ ಸಮಾಜದ ಅಧ್ಯಕ್ಷ ಬಿದ್ದಾಟಂಡ ರಮೆಶ್ ಚಂಗಪ್ಪ ಮಾತನಾಡಿದರು.

ವೇದಿಕೆಯಲ್ಲಿ ಅಪ್ಪನೆರವಂಡ ಕುಟುಂಬದ ಪಟ್ಟೆದಾರ ಅಪ್ಪಣ್ಣ, ಡಾ|| ಕಾಳಿಮಾಡ ಶಿವಪ್ಪ ಇದ್ದರು.

ನೈನಾ ಬೀನಾ ಪ್ರಾರ್ಥನೆ ಕೊಡವ ಸಮಾಜದ ನಿರ್ದೇಶಕಿ ಬಿದ್ದಂಡ ಉಷಾ ದೇವಮ್ಮ ಸ್ವಾಗತ, ಮಣವಟ್ಟಿರ ದಯಾ ಕುಟ್ಟಪ್ಪ, ಬೊಟ್ಟೋಳಂಡ ಮಿಟ್ಟು ಪೂಣಚ್ಚ, ಕುಲ್ಲೇಟಿರ ಅಜಿತ್ ನಾಣಯ್ಯ, ಮುಕ್ಕಾಟಿರ ವಿನಯ್ ನಿರೂಪಿಸಿ, ಕಾರ್ಯದರ್ಶಿ ಮಂಡೀರ ರಾಜಪ್ಪ ವಂದಿಸಿದರು.

ಅಖಿಲ ಕೊಡವ ಸಮಾಜ, ನಾಪೋಕ್ಲು ಕೊಡವ ಸಮಾಜ, ನಾಪೊಕ್ಲು ಕೊಡವ ಸಮಾಜ ರಿಕ್ರಿಯೇಷನ್ ಕ್ಲಬ್, ನಾಲ್ನಾಡ್ ಪ್ಲಾಂಟರ್ಸ್ ಅಸೋಸಿಯೇಷನ್, ಮಾಜಿ ಸೈನಿಕರ ಸಂಘ, ನೆಲಜಿ ಫಾರ್ಮರ್ಸ್ ಕ್ಲಬ್, ಬಲ್ಲತ್ತನಾಡ್ ರಿಕ್ರೆಯೇಷನ್ ಕ್ಲಬ್, ಹೈಲ್ಯಾಂಡರ್ಸ್ ಕಕ್ಕಬ್ಬೆ, ಪೊಮ್ಮಕ್ಕಡ ಪರಿಷತ್ ಸೇರಿದಂತೆ ವಿವಿದ ಸಂಘಸಂಸ್ಥೆಗಳು ಹಾಗೂ ಅಪ್ಪನೆರವಂಡ ಕುಟುಂಬಸ್ಥರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

-ಪಿ.ವಿ.ಪ್ರಭಾಕರ್, ದುಗ್ಗಳ