ಮಡಿಕೇರಿ, ಸೆ. 21 - ಮಡಿಕೇರಿ ದಸರಾ ಅಂಗವಾಗಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಇಂದು ಸಂಜೆ 6.30 ಗಂಟೆಗೆ ಚಾಲನೆ ದೊರೆಯಲಿದೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಗರಸಭಾಧ್ಯಕ್ಷೆ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಮೂಡಾ ಅಧ್ಯಕ್ಷ ಎ.ಸಿ. ದೇವಯ್ಯ, ನಗರಸಭೆಯ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ದಸರಾ ಸಮಿತಿ ಖಚಾಂಜಿ ಸಂಗೀತಾ ಪ್ರಸನ್ನ, ದಸರಾ ಸಮಿತಿ ಗೌರವ ಕಾರ್ಯದರ್ಶಿ, ಪೌರಾಯುಕ್ತೆ ಬಿ.ಶುಭಾ ಪಾಲ್ಗೊಳ್ಳಲಿದ್ದಾರೆ ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮೊದಲ ದಿನ ಕೊಪ್ಪದ ಸತೀಶ್ ಎಂ.ಎಸ್. ಅವರಿಂದ 10 ನಿಮಿಷಗಳ ಸ್ಯಾಕ್ಸೋಫೆÇೀನ್ ವಾದನ, ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ವಿದ್ಯಾರ್ಥಿನಿಯರಿಂದ ಕೊಡವ ಸಾಂಸ್ಕೃತಿಕ ವೈವಿಧ್ಯ, ಕುಶಾಲನಗರದ ಏಂಜಲ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ತಂಡದಿಂದ ಡಾನ್ಸ್ ಸ್ಪೆಷಲ್, ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯ ತಂಡದಿಂದ ನೃತ್ಯ ವೈವಿಧ್ಯ, ಚೆಟ್ಟಿಮಾನಿ ಸಾಂದಿಪಿನಿ ನೃತ್ಯಶಾಲಾ ತಂಡದಿಂದ ನೃತ್ಯ, ಮಡಿಕೇರಿಯ ವಿಕಾಸ ಜನಸೇವಾ ಟ್ರಸ್ಟ್ ವತಿಯಿಂದ ರಸಮಂಜರಿ, ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಶಿಕ್ಷಕಿಯರ ಲಾಸ್ಯ ದಶ್ರ್ವಾನ ತಂಡದಿಂದ ನೃತ್ಯ, ಕುಶಾಲನಗರದ ಕುಂದನ್ ನೃತ್ಯಾಲಯದಿಂದ ಪ್ಯೂಷನ್ ಡಾನ್ಸ್, ಕುಶಾಲನಗರದ ಕಾವೇರಿ ಆಟ್ರ್ಸ್ ಸ್ಕೂಲ್ ತಂಡದಿಂದ ನೃತ್ಯ ವೈವಿಧ್ಯ, ಪ್ರಣವಂ ನಾಟ್ಯಾಲಯದಿಂದ ಜನಪದ ನೃತ್ಯ ಕಾರ್ಯಕ್ರಮಗಳು, ಸೇಲಂನ ಅಲ್ಫನ್ಸ್ ತಂಡದಿಂದ ಸೂಪರ್‍ಹಿಟ್ ಡ್ಯಾನ್ಸ್ ಶೋ ನಡೆಯಲಿದೆ ಎಂದು ಸಾಂಸ್ಕøತಿಕ ಸಮಿತಿ ಪ್ರಕಟಣೆ ತಿಳಿಸಿದೆ.
24ರಂದು ಸಿರಿಧಾನ್ಯ ಸ್ಪರ್ಧೆ
ತಾ.24 ರಂದು ಮಹಿಳಾ ದಸರಾದಲ್ಲಿ ಎರಡನೇ ವರ್ಷದ ಸಿರಿಧಾನ್ಯ ಮೇಳ ಸ್ಪಧೆರ್sಯಲ್ಲಿ ಜಿಲ್ಲೆಯ ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ.
ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಸಿರಿಧಾನ್ಯಗಳಿಂದಲೇ ಮಾಡಿದ ಆಹಾರಗಳ ಪ್ರಚಾರ ಹೆಚ್ಚಬೇಕೆಂಬ ಉದ್ದೇಶದಿಂದ ಮಹಿಳಾ ದಸರಾದಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ.
ಸಿರಿಧಾನ್ಯ ಮೇಳ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಕೊರಲೆ, ಬರಗು, ಸಾಮೆ, ಅರ್ಕ, ನವಣೆ, ಊದಲು, ಸಚ್ಬೆ, ಜೋಳ, ರಾಗಿ ಇತ್ಯಾದಿ ಸಿರಿಧಾನ್ಯಗಳನ್ನು ಬಳಸಿ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು , ಸಲಾಡ್ ಗಳನ್ನು ಅಥವಾ ಹೊಸರುಚಿಯನ್ನು ತಯಾರಿಸಿ ಸ್ಪರ್ಧೆ ಅಥವಾ ಪ್ರದರ್ಶನಕ್ಕಿಡಬಹುದು.
ಸಿರಿಧಾನ್ಯ ಮೇಳ ಸೇರಿದಂತೆ ಮಹಿಳಾ ದಸರಾ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಹೆಸರನ್ನು ಸ್ಪರ್ಧಾ ಸ್ಥಳದಲ್ಲಿಯೇ ನೋಂದಾಯಿಸಲು ಅವಕಾಶವಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ತಾ. 24ರಿಂದ ಪುಸ್ತಕ ಸಂತೆ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಡಿಕೇರಿಯಲ್ಲಿ ನಡೆಯುವ ದಸರಾ ಹಬ್ಬದ ಪ್ರಯುಕ್ತ ಮಡಿಕೇರಿಯ ಗಾಂಧೀ ಮೈದಾನದಲ್ಲಿ ದ್ವಿತೀಯ ವರ್ಷದ ಪುಸ್ತಕ ಸಂತೆಯನ್ನು ಏರ್ಪಡಿಸಿದ್ದು, ತಾ.24ರಂದು ಚಾಲನೆ ನೀಡಲಾಗುತ್ತಿದೆ.
ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಪುಸ್ತಕ ಸಂತೆಯನ್ನು ಉದ್ಘಾಟಿಸಲಿದ್ದು, ಪ್ರ್ರೆಸ್ ಕ್ಲಬ್ ಅಧ್ಯಕ್ಷÀ ಅಜ್ಜಮಾಡ ರಮೇಶ್ ಕುಟ್ಟಪ್ಪ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಸಾಹಿತಿಗಳಾದ ಶೋಭಾ ಸುಬ್ಬಯ್ಯ, ಕಸ್ತೂರಿ ಗೋವಿಂದಮ್ಮಯ ಹಾಗೂ ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪುಸ್ತಕ ಸಂತೆಯಲ್ಲಿ ಜಿಲ್ಲೆಯ ಬರಹಗಾರರ ಕೃತಿಗಳು, ರಾಜ್ಯದ ಹೆಸರಾಂತ ಸಾಹಿತಿಗಳ ಕನ್ನಡ ಪುಸ್ತಕಗಳಿರುತ್ತವೆ. ಜಿಲ್ಲೆಯ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೋಕೇಶ್‍ಸಾಗರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9742632283 ಸಂಪರ್ಕಿಸಬಹುದು.