ಗೋಣಿಕೊಪ್ಪಲು, ಸೆ. 21: ತಿತಿಮತಿ ಸಮೀಪದ ನೊಕ್ಯಾ ಗ್ರಾಮದ ಕಾಫಿ ತೋಟದಲ್ಲಿ ಸೇರಿಕೊಂಡು ಬೆಳೆನಾಶದಲ್ಲಿ ತೊಡಗಿಕೊಂಡಿದ್ದ 13 ಆನೆಗಳನ್ನು ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ತಂಡವು ಕಾರ್ಯಾಚರಣೆ ನಡೆಸುವ ಮೂಲಕ ಕಾಡಿಗಟ್ಟಿದೆ.
ನೊಕ್ಯಾ ಗ್ರಾಮದ ಬೆಳೆಗಾರ ಚೆಪ್ಪುಡಿರ ಕಾರ್ಯಪ್ಪ ಹಾಗೂ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಆನೆಗಳು ಬೀಡು ಬಿಟ್ಟಿದ್ದವು. ತಿತಿಮತಿ ಆರ್ಆರ್ಟಿ ತಂಡವು ಕಾರ್ಯಾಚರಣೆ ನಡೆಸಿ ಆನೆಗಳನ್ನು ಮತ್ತಿಗೋಡು ವಲಯ ಅರಣ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೋಟದಲ್ಲಿನ ಬಾಳೆ, ಕಾಫಿ ಬೆಳೆಗಳನ್ನು ನಾಶ ಪಡಿಸಿದ್ದು, ಆನೆಗಳು ಕಾಡು ಸೇರಿರುವದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.