ಗೋಣಿಕೊಪ್ಪಲು, ಸೆ.21: ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತುಲಾ ಲಗ್ನದಲ್ಲಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಭಕ್ತಿ ಭಾವದೊಂದಿಗೆ ಪ್ರತಿಷ್ಠಾಪಿಸ ಲಾಯಿತು. ಇದಕ್ಕೂ ಮುನ್ನ ವಿಘ್ನ ವಿನಾಯಕನಿಗೆ ಮಹಾ ಗಣಪತಿ ಹೋಮ ಮೂಲಕ ಪೂಜಾ ಕಾರ್ಯಕ್ರಮ ನೆರವೇರಿತು. ಪ್ರಧಾನ ಅರ್ಚಕರಾಗಿ ಸತ್ಯಮೂರ್ತಿ ಹಾಗೂ ಸತ್ಯಶಂಕರ್ ಅವರು ನವರಾತ್ರಿಯೂ ದೇವಿಗೆ ಪೂಜಾ ವಿಧಿ ವಿಧಾನದ ನೇತೃತ್ವ ವಹಿಸಿಕೊಳ್ಳಲಿದ್ದಾರೆ.ಶ್ರೀ ಚಾಮುಂಡೇಶ್ವರಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಮುಖ್ಯಸ್ಥರಾದ ಸ್ವಾಮಿ ಬೋಧ ಸ್ವರೂಪಾನಂದ ಮಹರಾಜ್ ಅವರು ಪಾಲ್ಗೊಂಡು ಆಶೀರ್ವಚನ ನೀಡಿದರು.

ಇಂದು ಜಗತ್ತು ಸಂದಿಗ್ಧತೆಯಲ್ಲಿ ಇದ್ದು, ನಾವೆಲ್ಲರೂ ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡೋಣ. ದೇವರ ಅನುಗ್ರಹಕ್ಕಾಗಿ ಬೇರೆ ಬೇರೆ ಅಧಿದೇವತೆಗಳನ್ನು ಪೂಜೆ ಮಾಡುವ ಸಮಯವಾಗಿದ್ದು,

(ಮೊದಲ ಪುಟದಿಂದ) ಮನೆ ಮನೆಯಲ್ಲಿಯೂ ದೇವರ ಕೃಪೆಗಾಗಿ ಪೂಜೆ ಮಾಡುವದು ಅಗತ್ಯವಾಗಿದೆ. ಎಲ್ಲೆಡೆಯೂ ಉತ್ತಮ ಮಳೆಯಾಗಿದ್ದು ದಸರಾ ಆಚರಣೆಗೆ ವರುಣನೂ ಕೃಪೆ ತೋರಲಿದ್ದಾನೆ ಎಂದು ಸ್ವಾಮೀಜಿ ನುಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್‍ಮಾಚಯ್ಯ ಮಾತನಾಡಿದರು.

ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್‍ಗಣಪತಿ, ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್,ಸಮಿತಿಯ ಹಿರಿಯರಾದ ರಾಮಾಚಾರ್, ಡಾ.ಚಂದ್ರಶೇಖರ್, ಭಜನಾ ಮಂಡಳಿಯ ಸುಮಿಸುಬ್ಬಯ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಪ್ರವಿಮೊಣ್ಣಪ್ಪ, ಮಾಜಿ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ, ಕಾರ್ಯದರ್ಶಿ ಲೋಕೇಶ್, ವಿಗ್ರಹದಾನಿ ಕೇಶವ್ ಕಾಮತ್ ದಂಪತಿಗಳು, ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ತಾ.ಪಂ.ಸದಸ್ಯ ಜಯಾಪೂವಯ್ಯ, ಮಾಜಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್, ಮಾಜಿ ತಾ.ಪಂ.ಸದಸ್ಯೆ ಹಬೀಬುನ್ನೀಸಾ, ಮಾಜಿ ಗ್ರಾ.ಪಂ.ಅಧ್ಯಕ್ಷ ಕೆ.ರಾಜೇಶ್, ರಮಾವತಿ, ಎಂ.ಜಿ.ಮೋಹನ್, ರೇಖಾ ಶ್ರೀಧರ್, ಕೃಷ್ಣಪ್ಪ, ಗಾಂಧಿ ದೇವಯ್ಯ, ರತಿ ಅಚ್ಚಪ್ಪ, ಲಕ್ಷ್ಮಣ್, ಮಂಜುಳಾ, ಪ್ರಭಾವತಿ, ಗ್ರಾ.ಪಂ.ಸದಸ್ಯ ಮಂಜು, ರಾಮಕೃಷ್ಣ, ವೇದಿಕೆ ಸಮಿತಿಯ ಮುರುಘ, ಜಮ್ಮಡ ಸೋಮಣ್ಣ, ಪ್ರವೀಣ್ ಪೂಜಾರಿ, ಮಡಿವಾಳರ ಚಂದ್ರ ಮುಂತಾದವರು ಉಪಸ್ಥಿತರಿದ್ದರು. ಇಂದು ಸಂಜೆ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಿತು.

-ವರದಿ: ಟಿ.ಎಲ್.ಶ್ರೀನಿವಾಸ್