ಮಡಿಕೇರಿ, ಸೆ. 21: ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ಎನ್.ಎಸ್.ಎಸ್. ಘಟಕ, ತಾಲೂಕು ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಚ್ಛತೆಯ ಚಿಂತನೆ ಕಾರ್ಯಕ್ರಮದಡಿ 3 ವಿಭಾಗದಲ್ಲಿ ಸ್ಪರ್ಧೆಯನ್ನು ಎಫ್.ಎಂ.ಕೆ.ಎಂ.ಸಿ. ಕಾಲೇಜಿನಲ್ಲಿ ನಡೆಸಲಾಯಿತು. ಸ್ಪರ್ಧೆಯಲ್ಲಿ ಕಿರುಚಿತ್ರ ವಿಷಯ “ನನ್ನ ದೇಶವನ್ನು ಸ್ವಚ್ಛಗೊಳಿಸಲು ನನ್ನ ಕೊಡುಗೆ” , ಪ್ರಬಂಧ ಸ್ಪರ್ಧೆ ವಿಷಯ “ ಸ್ವಚ್ಛತೆಗೋಸ್ಕರ ನಾನೇನು ಮಾಡುವೆ’, ಚಿತ್ರಕಲೆ ವಿಷಯ “ಸ್ವಚ್ಛ ಭಾರತ ನನ್ನ ಕನಸು” ಈ ಸ್ಪರ್ಧೆಯಲ್ಲಿ ಜಿಲ್ಲೆಯಿಂದ 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ತಮ್ಮ ಕೌಶಲ್ಯ ಪ್ರದರ್ಶಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ದನಂಜಯ ಅಗೋಳಿಕಜೆ, ಸಲೀಲ ಪಾಟ್ಕರ್, ಮಹೇಶ್ ಕುಮಾರ್.ಕೆ.ಕೆ. ಇವರುಗಳು ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಎಫ್.ಎಂ.ಕೆ.ಎಂ.ಸಿ.ಕಾಲೇಜು ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಂ.ಬಿ. ಜೋಯಪ್ಪ ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಣಿ ಮಾಚಯ್ಯ, ಕಚೇರಿ ಮೇಲ್ವಿಚಾರಕ ಎನ್. ಫ್ರಾನ್ಸಿಸ್, ಸಹಾಯಕ ಲೆಕ್ಕಾಧಿಕಾರಿ ಮಹೇಶ್ ಬಿ.ಬಿ. ಉಪಸ್ಥಿತರಿದ್ದರು.
ವಿಜೇತರಾಗಿ ಎಫ್.ಎಂ.ಕೆ.ಎಂ.ಸಿ. ವಿದ್ಯಾರ್ಥಿಗಳಾದ ಸಲೀದ್, ವಿನಯ್ ಕುಮಾರ್, ಎಂ.ಎಸ್. ಮುತ್ತಕ್ಕ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಹಾಗೂ ಚಿತ್ರಕಲೆಯಲ್ಲಿ ಎನ್.ಹೆಚ್. ಆಯುಷ್, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಮಡಿಕೇರಿ ಬಹುಮಾನ ಪಡೆದುಕೊಂಡರು.