ಮಡಿಕೇರಿ, ಸೆ. 22 : ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ನಗರಸಭೆಗೆ ದಿಢೀರ್ ಭೇಟಿ ನೀಡಿ, ಪೌರಾಯುಕ್ತರು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಕಂದಾಯಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲನೆ ಮಾಡಿದರು.
ತೆರಿಗೆ ಸಂಗ್ರಹದಲ್ಲಿ ಕ್ರೀಯಾ ಶೀಲವಾಗಿ ಕಾರ್ಯನಿರ್ವಹಿಸಬೇಕು. ಕಂದಾಯ ವಸೂಲಾತಿಯಲ್ಲಿ ಹಿಂದೆ ಬೀಳಬಾರದು. ಕಂದಾಯ ಸಂಗ್ರಹಣೆ ಜೊತೆಗೆ ನಗರದ ಅಭಿವೃದ್ಧಿ ಕಡೆ ಹೆಚ್ಚಿನ ಗಮನಹರಿಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಗರಸಭೆ ಸಿಬ್ಬಂಧಿಗಳು ಗುರುತಿನ ಚೀಟಿ ಅಳವಡಿಸಿಕೊಳ್ಳದಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಧಿಕಾರಿ ನಗರಸಭೆಯ ಪ್ರತಿಯೊಬ್ಬ ಸಿಬ್ಬಂದಿ ಕಚೇರಿ ಕೆಲಸ ಸಂದರ್ಭದಲ್ಲಿ ಸಿಬಂದಿಗಳು ಗುರುತಿನ ಚೀಟಿ ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ನಗರಸಭೆಯ ಲೆಕ್ಕಶಾಖೆ, ಕಂದಾಯ, ಇಂಜಿನಿಯರಿಂಗ್ ವಿಭಾಗಗಳಿಗೆ ಭೇಟಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಪೌರಾಯುಕ್ತೆ ಬಿ.ಶುಭಾ, ಸುಜಾತ, ರಮೇಶ್, ತಾಹಿರ್, ರಾಜು ಇತರರು ಇದ್ದರು.