*ಗೋಣಿಕೊಪ್ಪಲು, ಸೆ. 22: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಆಶ್ರಯದಲ್ಲಿ ಬಹುಭಾಷಾ ಕವಿಗೋಷ್ಠಿ ತಾ. 27ರಂದು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ಬೆಳಿಗ್ಗೆ 10:30ಕ್ಕೆ ನಡೆಯಲಿದೆ.
ಕಾವೇರಿ ಕಲಾವೇದಿಕೆಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಕ.ಸಾ.ಪ. ಅಧ್ಯಕ್ಷ ಮದೋಶ್ ಪೂವಯ್ಯ ಕವಿಗೋಷ್ಠಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಭಾರದ್ವಜ್ ಆನಂದ ತೀರ್ಥ, ವೃತ್ತ ನಿರೀಕ್ಷಕ ಪಿ.ಕೆ. ರಾಜು, ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಗ್ರಾ.ಪಂ ಸೆಲ್ವಿ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಬಾರಿ 150ಕ್ಕೂ ಹೆಚ್ಚು ಕವನಗಳು ಆಯ್ಕೆಗೆ ಬಂದಿದ್ದು, 50 ಕವನಗಳನ್ನು ಆಯ್ಕೆ ಮಾಡಿ ಕವನ ವಾಚನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಕ.ಸಾ.ಪ. ಪ್ರದಾನ ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಕಾರ್ಯದರ್ಶಿ ರೇಖಾ ಶ್ರೀಧರ್, ಮಾದ್ಯಮ ಕಾರ್ಯದರ್ಶಿ ಜಗದೀಶ್ ಉಪಸ್ಥಿತರಿದ್ದರು.
ಭಾಗವಹಿಸುವ ಕವಿಗಳು: ಕೃತಜ್ಞಾ, ಬೆಸೂರು, ಸುಕುಮಾರ್, ಚೆರಿಯ ಪರಂಬು, ಎಸ್.ಕೆ. ಈಶ್ವರಿ, ಮಡಿಕೇರಿ, ಲಾವಣ್ಯ ಮೋಹನ್, ಶನಿವಾರಸಂತೆ, ಕಸ್ತೂರಿ ಗೋವಿಂದಮ್ಮಯ್ಯ, ಮಡಿಕೇರಿ, ವೈಲೇಶ ಪಿ.ಎಸ್., ಕೆ. ಬೋಯಿಕೇರಿ, ಕಾಯಪಂಡ ಟಾಟಾ ಚಂಗಪ್ಪ, ವಿರಾಜಪೇಟೆ, ಎ.ಎನ್. ರಂಜಿತಾ ಕಾರ್ಯಪ್ಪ, ಕಲ್ಲುಬಾಣೆ, ಎ.ವಿ. ಮಂಜುನಾಥ್, ವಿರಾಜಪೇಟೆ, ಎ.ಎಂ. ನಿವೇದಿತಾ, ಮಡಿಕೇರಿ, ಎ.ಎಂ. ನಿರೂಪಮ, ವಿರಾಜಪೇಟೆ, ಸುಶೀಲ ಹಾನಗಲ್, ಸೋಮವಾರಪೇಟೆ, ಮಳುವಂಡ ನಳಿನಿ ಬಿಂದು, ಅರಮೇರಿ, ಬಿ.ವಿ. ಸುಗುಣ, ಮದೆಗ್ರಾಮ, ರಂಜಿತ್ ಕುದುಪಜೆ, ಭಾಗಮಂಡಲ , ಕೆ.ಟಿ. ಕೌಶಲ್ಯ, ಗೋಣಿಕೊಪ್ಪ, ಕೆ.ಟಿ. ವಾತ್ಸಲ್ಯ, ಗೋಣಿಕೊಪ್ಪ, ಅಲ್‍ಫಿಯಾ ಮೆಹರ್, ಗೋಣಿಕೊಪ್ಪಲು, ಎಂ.ಕೆ. ನಳಿನಾಕ್ಷಿ, ವಿರಾಜಪೇಟೆ, ಸಹನಾ ಕಾಂತಬೈಲು, ಮಡಿಕೇರಿ, ಟೋಮಿ ಥೋಮಸ್, ಸಿದ್ದಾಪುರ, ಮುಲ್ಲೇಂಗಡ ರೇವತಿ ಪೂವಯ್ಯ, ವಿರಾಜಪೇಟೆ, ಮುಲ್ಲೇಂಗಡ ಸುಬ್ಬಯ್ಯ, ವಿರಾಜಪೇಟೆ, ಮುಲ್ಲೇಂಗಡ ಮಮತ, ವಿರಾಜಪೇಟೆ, ಮುಲ್ಲೇಂಗಡ ಮಧೋಶ್ ಪೂವಯ್ಯ, ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಜಗದೀಶ್ ಜೋಡುಬೀಟಿ, ಚಾಲ್ರ್ಸ್ ಡಿಸೋಜ, ವಿರಾಜಪೇಟೆ, ಹೆಚ್.ವಿ. ಸುನೀತ ವಿಶ್ವನಾಥ್, ಬೆಟ್ಟಗೇರಿ, ಕರವಟ್ಟೀರ ಬಿ. ಅಯ್ಯಣ್ಣ, ಚೆನ್ನಂಗಿ, ಜಲ ಕಾಳಪ್ಪ, ಹಾನಗಲ್ಲು, ಆರ್. ಜಯನಾಯಕ್, ಮದೆ, ಡೀನ್ ಸಾಲ್ವೋ ಡಿಸೋಜ, ವಿರಾಜಪೇಟೆ, ಹರೀಶ್ ಸರಳಾಯ, ಮಡಿಕೇರಿ, ಕಡ್ಲೇರ ಜಯಲಕ್ಷ್ಮಿ ಮೋಹನ್ ಕುಮಾರ್, ಬೆಟ್ಟಗೇರಿ, ಬಿ.ಬಿ. ಕಿಶೋರ್ ಕುಮಾರ್, ಭಾಗಮಂಡಲ, ಎನ್. ಮಹೇಶ್, ಚೆಟ್ಟಳ್ಳಿ, ಹೇಮಲತಾ ಪೂರ್ಣ ಪ್ರಕಾಶ್, ಮಡಿಕೇರಿ, ಮಹೇಂದ್ರ ಎಂ.ಎಸ್., ಕುಶಾಲನಗರ, ವಿದ್ವಾನ್, ಬಿ.ಸಿ. ಶಂಕರಯ್ಯ, ಕುಶಾಲನಗರ, ಗಗನ್, ಕೀರ್ತನ, ಅರ್ಚನ, ತಿಮ್ಮಯ್ಯ, ಶಾಲಿನಿ, ಹೇಮಾವತಿ, ಸುನಿತಾ ಲೋಕೇಶ್ ಸಾಗರ್, ಕುಶಾಲನಗರ, ರೇಖಾ ಶ್ರೀಧರ್, ಪೊನ್ನಂಪೇಟೆ, ಆಶ್ವಿನಿ ಕೃಷ್ಣಕಾಂತ್, ಹಾತಿ ಜಯಪ್ರಕಾಶ್ ಹಾಗೂ ಕಾಂಚನ, ಸೋಮವಾರಪೇಟೆ ಕವನ ವಾಚಿಸಲಿದ್ದಾರೆ.