ಮಡಿಕೇರಿ, ಸೆ. 22: ಮಡಿಕೇರಿ ದಸರಾ ಇನ್ನೇನು ಬಂದೇಬಿಟ್ಟಿತು ಎನ್ನುವದಕ್ಕಿಂತ ನಿನ್ನೆಯಿಂದಲೇ ಚತುರ್ ಕರಗಗಳ ಮೂಲಕ ಶುಭಾರಂಭಗೊಂಡಿದೆ. ಆದರೆ, ಸರಕಾರದಿಂದ ನಿರೀಕ್ಷಿತ ಅನುದಾನ ಬಿಡುಗಡೆಯಾಗದುದರಿಂದ ದಸರಾ ಆಚರಣೆಯ ವಿವಿಧ ಉಪ ಸಮಿತಿಗಳಲ್ಲಿ ಆತÀಂಕ ಮನೆ ಮಾಡಿದ್ದು ಇಂದು ಕೆಲ ಕಾಲ ಅಸಮಾಧಾನ ಸ್ಫೋಟಗೊಂಡು ನಗರಸಭಾ ಆವರಣದ ದಸರಾ ಕಚೇರಿಯಲ್ಲಿ ಭುಗಿಲೆದ್ದ ವಾತಾವರಣ ಕಂಡು ಬಂದಿತು. ಸರಕಾರದಿಂದ ನಿರೀಕ್ಷಿತ ರೂ. 1 ಕೋಟಿ ಬದಲು ರೂ. 50 ಲಕ್ಷ ಮಾತ್ರ ಬಿಡುಗq Éಗೊಂಡಿದೆ. ಈ ಹಣದಲ್ಲಿ ಎಲ್ಲ ಉಪಸಮಿತಿಗಳಿಗೆ ಪೂರ್ವ ನಿರ್ಧರಿತ ಪೂರ್ಣ ಹಣವನ್ನು ನೀಡಲು ಅಸಾಧ್ಯ ಎಂದು ದಸರಾ ಸಮಿತಿ ಪದಾಧಿಕಾರಿಗಳು ಸ್ಪÀಷ್ಟಪಡಿಸಿದರು. ಇದರಿಂದ ಉಪಸಮಿತಿಗಳ ಪ್ರಮುಖರು ಮತ್ತು ದಸರಾ ಮುಖ್ಯ ಸಮಿತಿ ಪದಾಧಿಕಾರಿಗಳ ನಡುವೆ ಕೆಲ ಕಾಲ ವಾಗ್ವಾದ ಏರ್ಪಟ್ಟಿತು. ಅಷ್ಟರಲ್ಲಿ ಇತರ ಸಮಾರಂಭವೊಂದಕ್ಕೆ ನಗರಸಭಾ ಆವರಣಕ್ಕೆ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರವiಣಿ ಅವರು ದಸರಾದ

(ಮೊದಲ ಪುಟದಿಂದ) ಈ ಗೊಂದಲದ ಸಭೆಗೆ ಆಹ್ವಾನಿಸಲ್ಪಟ್ಟರು. ಗೊಂದಲ ಮನಗಂಡ ಅವರು ಜಿಲ್ಲ್ಲಾ ಉಸ್ತುವಾರಿ ಸಚಿವ ಸೀತಾರಾಂ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಈ ಹಿಂದೆ ಸಚಿವರು ಮಡಿಕೇರಿಗೆ ಬಂದಾಗ ನೀಡಿದ್ದ ಭರವಸೆಯಂತೆ ರೂ. 50 ಲಕ್ಷದೊಂದಿಗೆ ಹೆಚ್ಚಿಗೆ ರೂ. 10 ಲಕ್ಷ ಅನುದಾನವನ್ನು ಸರಕಾರದಿಂದ ದೊರಕಿಸಿಕೊಡುವಂತೆ ಕೋರಿದರು. ಸಚಿವರು ಇಂದೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಬಗ್ಗೆ ಪ್ರಯತ್ನಿಸುವ ಭರವಸೆಯಿತ್ತರು.

ಬಳಿಕ ಮಾತನಾಡಿದ ಸುನಿಲ್ ಸುಬ್ರಮಣಿಯವರು ತಾನು ಮತ್ತು ವೀಣಾ ಅಚ್ಚಯ್ಯ ಅವರು ಈ ಸಂಬಂಧ ಮತ್ತೆ ಬೆಂಗಳೂರಿನಲ್ಲಿ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಪ್ರಯತ್ನಿಸುವ ಭರವಸೆಯಿತ್ತರು. ದಸರಾ ಸಂದರ್ಭ ಎಲ್ಲ ಪದಾಧಿಕಾರಿಗಳು ರಾಜಕೀಯ ಮರೆತು ಏಕ ಮನಸ್ಸಿನಿಂದ ದಸರಾ ಉತ್ಸವದ ಯಶಸ್ಸಿಗೆ ಶ್ರಮಿಸೋಣ. ಈ ಸಂದರ್ಭ ಯಾರನ್ನೂ ದೂಷಿಸಬಾರದು ಎಂದು ಕಿವಿ ಮಾತು ಹೇಳಿದರು. ಈಗಾಗಲೇ ಸರಕಾರದಿಂದ ಮಂಜೂರಾಗಿರುವ ರೂ. 50 ಲಕ್ಷ, ಮತ್ತೆ ಮಂಜೂರಾಗುವ ನಿರೀಕ್ಷೆಯಲ್ಲಿರುವ ರೂ. 10 ಲಕ್ಷ ಹಾಗೂ ನಗರ ದಸರಾ ಸಮಿತಿ ಜವಾಬ್ದಾರಿಕೆ ತೆಗೆದುಕೊಂಡು ರೂ. 3 ಲಕ್ಷ ಸಂಗ್ರಹಿಸಿದರೆ ಈಗಾಗಲೇ ಸಂಗ್ರಹಿತÀ ರೂ. 7 ಲಕ್ಷ ಸೇರಿದಂತೆ ರೂ. 10 ಲಕ್ಷವಾಗುತ್ತದೆ. ಒಟ್ಟು ರೂ. 70 ಲಕ್ಷಕ್ಕೆ ಸೀಮಿತಗೊಂಡು ದಸರಾ ಆಚರಿಸುವಂತೆ ಸಲಹೆಯಿತ್ತರು.

ಸಭೆಯಲ್ಲಿ ನಗರಸಭಾ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಕಾವೇರÀಮ್ಮ ಸೋಮಣ್ಣ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರು ಸಭೆಗೆ ರೂ. 70 ಲಕ್ಷದ ಬಜೆಟ್ ಕುರಿತು ಮಾಹಿತಿಯಿತ್ತು ಎಲ್ಲ ಉಪಸಮಿತಿಗಳಿಗೂ ಹಣದ ಪ್ರಮಾಣವನ್ನು ಕಡಿಮೆಗೊಳಿಸಿರುವ ಬಗ್ಗೆ ವಿವರಿಸಿದರು.

10 ಮಂಟಪಗಳಿಗೆ ತಲಾ ರೂ. 2 ಲಕ್ಷದಂತೆ ಒಟ್ಟು ರೂ. 20 ಲಕ್ಷ, ಕರಗಗಳಿಗೆ ರೂ. 1 ಲಕ್ಷದಂತೆ ಒಟ್ಟು ರೂ. 4 ಲಕ್ಷ ನಿಗದಿಪಡಿಸಲಾಗಿದೆ.

ಈ ಮೊತ್ತಗಳ ನೀಡಿಕೆಯಲ್ಲಿ ಯಾವದೇ ಬದಲಾವಣೆಯಿಲ್ಲ. ಶಾಮಿಯಾನ ಹಾಗೂ ಸ್ಟೇಜ್‍ಗೆÉ ಟೆಂಡರ್ ಮೂಲಕ ರೂ. 30.50 ಲಕ್ಷ ನಿಗದಿಯಾಗಿದ್ದು ಈ ಪೈಕಿ ಗ್ಯಾಲರಿ ನಿರ್ಮಾಣವನ್ನು ಕೈ ಬಿಟ್ಟು ಆ ಮೊತ್ತದಲ್ಲಿ ರೂ. 2.50 ಲಕ್ಷ ಕಡಿತಗೊಳಿಸಲಾಗುವದು. ಸಾಂಸ್ಕøತಿಕ ಸಮಿತಿಗೆ ರೂ. 10 ಲಕ್ಷ ನಿಗದಿ ಯಾಗಿದೆ. ಅಗತ್ಯ ಬಿದ್ದರೆ ಸಮಾ ಲೋಚನೆ ಬಳಿಕ ಅದರಲ್ಲಿಯೂ ಕಡಿತಗೊಳಿಸಲಾಗುವದು. ಮಂಟಪ ಗಳಿಗೆ ಚಿನ್ನದ ಬಹುಮಾನ ಸೇರಿದಂತೆ ದಸರಾ ರಾತ್ರಿಯ ಆರ್ಕೆಸ್ಟ್ರಾ ಕಾರ್ಯಕ್ರಮವೂ ಸೇರಿ ಒಟ್ಟು ರೂ. 5.50 ಲಕ್ಷ ನಿಗದಿಗೊಳಿಸಲಾಗಿದ್ದು ಇದರಲ್ಲಿ ಬದಲಾವಣೆಯಿಲ್ಲ. ಕ್ರೀಡಾ ಸಮಿತಿಗೆ ರೂ. 1.50 ಲಕ್ಷ ಹಾಗೂ ಕವಿಗೋಷ್ಠಿಗೆ ಬದಲಾಯಿತ ಮೊತ್ತದ ಅನ್ವಯ ರೂ. 60 ಸಾವಿರ ನಿಗದಿಪಡಿಸಿರುವದಾಗಿ ಮಹೇಶ್ ಜೈನಿ ತಿಳಿಸಿದರು.