ಕಾಶ್ಮೀರ ವಿವಾದದಲ್ಲಿ ಚೀನಾ ಮಧ್ಯಸ್ಥಿಕೆ ಇಲ್ಲ ಬೀಜಿಂಗ್, ಸೆ. 22: ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವದಿಲ್ಲ ಎಂದು ಚೀನಾ ವಿಶ್ವಸಂಸ್ಥೆಯಲ್ಲಿ ಸ್ಪಷ್ಟಪಡಿಸಿದ್ದು, ಪಾಕಿಸ್ತಾನ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ. ಚೀನಾದ ಈ ಹೇಳಿಕೆಯಿಂದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆಯುಂಟಾಗಿದೆ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ನಿರ್ಣಯವನ್ನು ಜಾರಿಗೊಳಿಸಬೇಕೆಂದು ಇತ್ತೀಚೆಗಷ್ಟೇ ಒಐಸಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿತ್ತು. ಐಒಸಿ ಕರೆಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಇಲಾಖೆ ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದೆ. ಕಾಶ್ಮೀರದ ವಿಷಯದಲ್ಲಿ ಚೀನಾ ನಿಲುವು ಸ್ಪಷ್ಟವಾಗಿದ್ದು ಭಾರತ-ಪಾಕಿಸ್ತಾನವೇ ದ್ವಿಪಕ್ಷೀಯವಾಗಿ ವಿವಾದವನ್ನು ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದು ಚೀನಾ ತಿಳಿಸಿದೆ.
ಐಟಿ ಇ-ಫೈಲಿಂಗ್ ಪೆÇೀರ್ಟಲ್‍ನಲ್ಲಿ ಸ್ವವಿವರ
ನವದೆಹಲಿ, ಸೆ. 22: ಐಟಿ ಇಲಾಖೆ ಹಾಗೂ ತೆರಿಗೆದಾರರ ನಡುವೆ ಪರಿಣಾಮಕಾರಿ ಸಂಪರ್ಕ ಇರುವಂತೆ ಮಾಡಲು ಇ-ಫೈಲಿಂಗ್ ಪೆÇೀರ್ಟಲ್‍ನಲ್ಲಿ ಸ್ವವಿವರ ಅಪ್ಡೇಟ್ ಮಾಡುವಂತೆ ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ ನೀಡಿದೆ. ವೈಯಕ್ತಿಕ ವಿವರ ಹಾಗೂ ಇ-ಮೇಲ್ ವಿವರಗಳು, ಮೊಬೈಲ್ ಫೆÇೀನ್ ನಂಬರ್, ವಿಳಾಸ, ಬ್ಯಾಂಕ್ ಖಾತೆ ವಿವರಗಳನ್ನು ಇ-ಫೈಲಿಂಗ್ ಪೆÇೀರ್ಟಲ್ ನಲ್ಲಿ ಸ್ವವಿವರ ಸಮೇತ ಇ-ಫೈಲಿಂಗ್ ಪೆÇೀರ್ಟಲ್ ನಲ್ಲಿ ಸಲ್ಲಿಸಲು ತೆರಿಗೆದಾರರಿಗೆ ಸಲಹೆ ನೀಡಲಾಗಿದೆ. ತೆರಿಗೆದಾರರಿಗೆ ಒಟಿಪಿ ಕಳಿಸಿದ ನಂತರ ವಿವರಗಳನ್ನು ಪರಿಶೀಲನೆ ನಡೆಸಲಾಗುವದು ಎಂದು ಐಟಿ ಇಲಾಖೆ ಹೇಳಿದೆ. ಈಗಿರುವ ಇ-ಫೈಲಿಂಗ್ ಬಳಕೆದಾರರು ತಮ್ಮ ಪೆÇ್ರಫೈಲ್‍ನ್ನು ಅಪ್ಡೇಟ್ ಮಾಡಬೇಕಿದೆ ಎಂದು ಇಲಾಖೆಯ ಸುತ್ತೋಲೆ ತಿಳಿಸಿದೆ.
ಗೋ ರಕ್ಷಕರಿಂದ ಹತ್ಯೆಯಾದರೆ ಪರಿಹಾರ
ನವದೆಹಲಿ, ಸೆ. 22: ಗೋ ರಕ್ಷಕರಿಂದ ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರಗಳು ಪರಿಹಾರ ನೀಡುವದು ಅನಿವಾರ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೋ ರಕ್ಷಕರ ತಂಡದಿಂದ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಮತ್ತು ಈ ಕುರಿತು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈಗಾಗಲೇ ಗುಜರಾತ್, ರಾಜಸ್ತಾನ, ಕರ್ನಾಟಕ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ವರದಿ ನೀಡಿದ್ದು, ಉಳಿದ ರಾಜ್ಯಗಳು ಸಹ ವರದಿ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠ ಹೇಳಿದೆ. ಗೋ ರಕ್ಷಕರಿಂದ ನಡೆದ ಹಿಂಸಾಚಾರಕ್ಕೆ ಬಲಿಯಾದ ಸಂತ್ರಸ್ಥರಿಗೆ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ರಾಜ್ಯ ಸರ್ಕಾರಗಳು ಅಪರಾಧ ಸಂತ್ರಸ್ಥರಿಗೆ ಪರಿಹಾರ ನೀಡವದು ಅನಿವಾರ್ಯ ಎಂದು ಹೇಳಿ ವಿಚಾರಣೆಯನ್ನು ಅಕ್ಟೋಬರ್ 31ಕ್ಕೆ ಮುಂದೂಡಿದೆ.
ಉಗ್ರರ ಶಸ್ತ್ರಾಸ್ತ್ರ ಗೋದಾಮು ಮೇಲೆ ಧಾಳಿ
ಡಮಾಸ್ಕಸ್, ಸೆ. 22: ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿದ್ದ ಲೆಬೆನಾನ್ ಉಗ್ರ ಸಂಘಟನೆ ಹೆಜ್ಬೋಲ್ಲಾದ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ಇಸ್ರೇಲ್ ವಾಯುಸೇನೆ ಶುಕ್ರವಾರ ರಾಕೆಟ್ ಧಾಳಿ ಮಾಡಿದೆ. ಸಿರಿಯಾ ಸರ್ಕಾರದ ಬೆಂಬಲವಿರುವ ಲೆಬೆನಾನ್ ಉಗ್ರ ಸಂಘಟನೆ ಹೆಜ್ಬೊಲ್ಲಾ, ಡಮಾಸ್ಕಸ್ ವಿಮಾನ ನಿಲ್ದಾಣದಲ್ಲೇ ತನ್ನ ಶಸ್ತ್ರಾಸ್ತ್ರ ಗೋದಾಮು ನಿರ್ಮಾಣ ಮಾಡಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ ಇಸ್ರೇಲ್ ವಾಯುಸೇನೆ ಗೋದಾಮಿನ ಮೇಲೆ ರಾಕೆಟ್ ಧಾಳಿ ಮಾಡಿ ಗೋದಾಮನ್ನು ನಾಶಪಡಿಸಿದೆ. ಈ ಬಗ್ಗೆ ಸಿರಿಯಾದಲ್ಲಿರುವ ಮಾನವ ಹಕ್ಕುಗಳ ವೀಕ್ಷಕ ರಾಮಿ ಅಬ್ದೆಲ್ ರಹಮಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿದ್ದ ಹೆಜ್ಬೋಲ್ಲಾ ಉಗ್ರ ಸಂಘಟನೆಯ ಗೋದಾಮನ್ನು ಇಸ್ರೇಲ್ ಸೇನೆ ನಾಶಪಡಿಸಿದೆ ಎಂದು ಹೇಳಿದ್ದಾರೆ.
ಸುಕ್ರಿ ಬೊಮ್ಮಗೌಡಗೆ ಚುಂಚಶ್ರೀ ಪ್ರಶಸ್ತಿ
ಮಂಡ್ಯ, ಸೆ. 22: ಆದಿಚುಂಚನಗಿರಿ ಮಠದ ವತಿಯಿಂದ ನೀಡಲಾಗುವ 2017ನೇ ಸಾಲಿನ ಚುಂಚಶ್ರೀ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತರಾದ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಸೇರಿ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಪದ್ಮಶ್ರೀ ಡಾ. ಮಾಲತಿ ಹೊಳ್ಳ, ಸಾಹಿತ್ಯ ಕ್ಷೇತ್ರದಿಂದ ತುಮಕೂರಿನ ಡಾ. ಡಿ.ಕೆ. ರಾಜೇಂದ್ರ, ಬೆಂಗಳೂರಿನ ಪೆÇ್ರ. ಶಿವರಾಮ್ ಅಗ್ನಿಹೋತ್ರಿಯವರನ್ನು ಚುಂಚಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಭಾನುವಾರ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮಿಗಳು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ನ್ಯೂಟನ್ ಆಯ್ಕೆ
ಮುಂಬೈ, ಸೆ. 22: 2018ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಅಮಿತ್ ವಿ. ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆ ನ್ಯೂಟನ್ ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಆಸ್ಕರ್ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಸಂಬಂಧ ನಡೆದ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಭೆಯಲ್ಲಿ ಸದಸ್ಯರು ನ್ಯೂಟನ್ ಚಿತ್ರವನ್ನು ಅವಿರೋಧವಾಗಿ ಆಯ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಿತ್ ವಿ. ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆ ನ್ಯೂಟನ್ ಹಿಂದಿ ಚಿತ್ರವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ ಎಂದು ಫೆಡರೇಷನ್‍ನ ಅಧ್ಯಕ್ಷ ಹಾಗೂ ಖ್ಯಾತ ತೆಲುಗು ಚಿತ್ರ ನಿರ್ಮಾಪಕ ಸಿ.ವಿ. ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನ್ಯೂಟನ್ ಚಿತ್ರ ಅಧಿಕೃತವಾಗಿ ಭಾರತದಲ್ಲಿ ಇಂದು ತೆರೆಕಂಡಿದ್ದು, ಚಿತ್ರವು ಸಾಮಾಜಿಕ ಜಾಗೃತಿಯ ಉದ್ದೇಶವಿರುವ ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದೆ.
ಡಿನೋಟಿಫಿಕೇಷನ್ ತನಿಖೆಗೆ ಕೋರ್ಟ್ ತಡೆ
ಬೆಂಗಳೂರು, ಸೆ. 22: ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎಸಿಬಿ ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಲು ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಾತ್ಕಾಲಿಕ ತಡೆ ಆದೇಶ ನೀಡಿದ್ದು, ಇದಕ್ಕೆ ಮುನ್ನ ಪ್ರಕರಣದ ವಿಚಾರಣೆಯ ಸಂಬಂಧ ಏಳು ಗಂಟೆಯ ಸುದೀರ್ಘ ಡಿಕ್ಟೇಷನ್ ನಡೆದಿತ್ತು. ಅಂತಿಮವಾಗಿ ಎಸಿಬಿಯ ಎಲ್ಲ ವಾದಗಳನ್ನು ಹೈಕೋರ್ಟ್ ತಿರಸ್ಕರಿಸಿ ಮಧ್ಯಂತರ ತಡೆ ಆದೇಶ ಪ್ರಕಟಿಸಿದೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ನಿನ್ನೆ ಇಡೀ ದಿನ ಪ್ರಕರಣದ ಮಧ್ಯಾಂತರ ಆದೇಶದ ಕುರಿತು ಡಿಕ್ಟೇಷನ್ ನೀಡಿತ್ತು. ಆದೇಶದಲ್ಲಿ ಅರ್ಜಿದಾರರ ವಾದ ಮತ್ತು ಎಸಿಬಿಯ ಪ್ರತಿವಾದ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳನ್ನು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ.
ಅಯೋಧ್ಯೆ ವಿವಾದಿತ ಸ್ಥಳಕ್ಕೆ ಇಬ್ಬರು ವೀಕ್ಷಕರು
ಅಯೋಧ್ಯೆ, ಸೆ. 22: ಅಯೋಧ್ಯೆ ವಿವಾದಿತ ಸ್ಥಳಕ್ಕೆ ಇಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಅಲಹಾಬಾದ್ ಹೈಕೋರ್ಟ್ ಈ ನೇಮಕ ಮಾಡಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಸ್ತಿಯ ಇರ್ಫಾನ್ ಅಹ್ಮದ್ ಮತ್ತು ಫೈಜಾಬಾದ್ನ ಅಮರಜೀತ್ ತ್ರಿಪಾಠಿ ಅವರನ್ನು ವೀಕ್ಷಕರಾಗಿ ನೇಮಿಸಿದ್ದು, 15 ದಿನಗಳಿಗೊಮ್ಮೆ ವಿವಾದಿತ ಸ್ಥಳದ ಕುರಿತು ವರದಿ ಸಲ್ಲಿಸಿದ್ದಾರೆ. ಸೆ. 11 ರಂದು ಸುಪ್ರೀಂಕೋರ್ಟ್‍ನ ಮೂವರು ನ್ಯಾಯಮೂರ್ತಿಗಳನ್ನೊಂಡ ವಿಶೇಷ ಪೀಠವು, ನ್ಯಾಯಾಧೀಶರಾದ ಟಿ.ಎಂ. ಖಾನ್ ಮತ್ತು ಎಸ್.ಕೆ. ಸಿಂಗ್ ಅವರನ್ನು ಬದಲಾಯಿಸುವಂತೆ ಆದೇಶ ನೀಡಿತ್ತು. ಈ ಇಬ್ಬರನ್ನು 2003ರಲ್ಲಿ ವೀಕ್ಷಕರನ್ನಾಗಿ ನೇಮಿಸಲಾಗಿತ್ತು. ಇವರಲ್ಲಿ ಒಬ್ಬರು ವೀಕ್ಷಕರು ನಿವೃತ್ತಿಯಾಗಿದ್ದು, ಇನ್ನೊಬ್ಬರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದಾರೆ ಎಂದು ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರು. ಆ ಬಳಿಕ ನ್ಯಾಯಾಲಯ ವೀಕ್ಷಕರ ಬದಲಾವಣೆಗೆ ಆದೇಶ ಹೊರಡಿಸಿತ್ತು.