ಮಡಿಕೇರಿ, ಸೆ. 22 : ವಿಯೆಟ್ನಾಂನಿಂದ ಕೊಡಗನ್ನು ಪ್ರವೇಶಿಸಿದೆ ಎಂದು ಹೇಳಲಾಗುತ್ತಿರುವ ಕಾಳು ಮೆಣಸು ಪ್ರಕರಣ ಅಂತರಾಷ್ಟ್ರೀಯ ಮಟ್ಟದ ಕಳ್ಳಸಾಗಾಣಿಕೆ ದಂಧೆಯಾಗಿದೆ ಎಂದು ಗಂಭೀರ ಆರೋಪ ಮಾಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಿ.ಎಸ್.ಅರುಣ್ ಮಾಚಯ್ಯ, ಪ್ರಕರಣವನ್ನು ಸಿಐಡಿ ತನಿಖೆÉಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಳು ಮೆಣಸು ಆಮದು ಪ್ರಕರಣ ಅಂತರಾಷ್ಟ್ರೀಯ ಮಟ್ಟದ ದಂಧೆಯಾಗಿರುವದರಿಂದ ಕೇಂದ್ರ ಸರ್ಕಾರ ಸಿಬಿಐ ತನಿಖೆಗೂ ಚಿಂತನೆ ಹರಿಸಬೇಕೆಂದರು. ರೈತರ ಹಿತ ಕಾಯುವದಕ್ಕಾಗಿ ಅಸ್ತಿತ್ವದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ವಿಯೆಟ್ನಾಂ ಕಾಳು ಮೆಣಸು ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟ ಗೋಣಿಕೊಪ್ಪಲು ಎಪಿಎಂಸಿ ಆಡಳಿತ ಮಂಡಳಿ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಜೀನಾಮೆ ನೀಡದಿದ್ದಲ್ಲಿ ಅ. 3 ರಿಂದ ಗೋಣಿಕೊಪ್ಪಲು ಎಪಿಎಂಸಿ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸುವದಾಗಿ ಎಚ್ಚರಿಕೆ ನೀಡಿದರು. ಕಳ್ಳ ಸಾಗಾಣಿಕೆಯ ಮೂಲಕವೆ ಕೊಡಗಿಗೆ ವಿಯೆಟ್ನಾಂ ಕಾಳು ಮೆಣಸು ಬಂದಿದೆ ಎಂದು ಅಭಿಪ್ರಾಯಪಟ್ಟ ಅವರು, ಎಪಿಎಂಸಿ ಆಡಳಿತ ಮಂಡಳಿ ರೈತರಿಗೆ ವಿಶ್ವಾಸ ದ್ರೋಹ ಮಾಡಿದೆ ಎಂದು ಆರೋಪಿಸಿದರು.
ವಿಯೆಟ್ನಾಂನಿಂದ ನೇರವಾಗಿ ಭಾರತಕ್ಕೆ ಕಾಳು ಮೆಣಸನ್ನು ಆಮದು ಮಾಡಿಕೊಳ್ಳುವದು ವ್ಯವಹಾರಿಕ ದೃಷ್ಟಿಯಿಂದ ಲಾಭದಾಯಕವಲ್ಲ. ಈ ಕಾರಣದಿಂದ ದಂಧೆಕೋರರು ಕಾಳು ಮೆಣಸನ್ನು ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಭಾರತಕ್ಕೆ ಆಮದು ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದರು.
(ಮೊದಲ ಪುಟದಿಂದ) ಪ್ರತಿಯೊಂದು ಬೆಳೆಯನ್ನು ಆಮದು ಮಾಡಿಕೊಳ್ಳುವಾಗ ಆ ಬೆಳೆಯ ಬಗ್ಗೆ ಸಂಬಂಧಿಸಿದ ದೇಶ ‘ಫ್ಯೂಮಿಗೇಷನ್ ಸರ್ಟಿಫಿಕೇಟ್’ ಅಂದರೆ ಆ ಬೆಳೆಗೆ ಕ್ರಿಮಿ ಕೀಟಗಳ ಬಾಧೆ ಇದೆಯೇ ನ್ಯಾಷನಲ್ ಪ್ಲಾಂಟ್ ಪ್ರೊಟೆಕ್ಷನ್ ಅಥಾರಿಟಿ ಮೂಲಕ ಬೆಳೆಯನ್ನು ಎಲ್ಲಿ ಬೆಳೆಯಲಾಗಿದೆ ಮೊದಲಾದ ವಿವರಗಳ ಅಗತ್ಯ ದಾಖಲಾತಿಗಳನ್ನು ನೀಡ ಬೇಕಾಗುತ್ತದೆ. ಆದರೆ ಇಲ್ಲಿ ಆಮದು ನೀತಿಯನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಬಗ್ಗೆ ಸಂಶಯ ವ್ಯಕ್ತವಾಗುತ್ತಿದ್ದು, ಎಪಿಎಂಸಿಯಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿರುವ ಕಾಳು ಮೆಣಸಿನಲ್ಲಿ ವಿಯೆಟ್ನಾಂ ಪ್ಯಾಕಿಂಗ್ ಎಂದು ನಮೂದಿಸಲಾಗಿದೆ. 1045 ಚೀಲ ಕಾಳು ಮೆಣಸು ದೊರೆತಿದ್ದು, ಫÀÅಡ್ ಸೇಫ್ಟಿ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾದಿಂದ ಅಧಿಕೃತವಾದ ದಾಖಲೆಗಳು ಇಲ್ಲದಿರುವದು ಗಮನಕ್ಕೆ ಬಂದಿದೆ. ಸಾರ್ಕ್ ನೇಷನ್ ದೇಶಗಳ ಒಳಗಿನ ಒಪ್ಪಂದಗಳನ್ನು ಕಾಳುಮೆಣಸು ಆಮದು ಸಂದರ್ಭ ಸಂಪÀÇರ್ಣವಾಗಿ ಉಲ್ಲಂಘಿಸಿರುವದು ಕಂಡು ಬಂದಿದೆ ಎಂದು ತಿಳಿಸಿದರು.
ಗೋಣಿಕೊಪ್ಪಲು ಎಪಿಎಂಸಿ ಆವರಣದಲ್ಲಿ ನಡೆದಿರುವ ಕಾಳು ಮೆಣಸು ವ್ಯವಹಾರದ ಬಗ್ಗೆ ಈಗಾಗಲೆ ಎಸಿಬಿಗೆ ದೂರು ನೀಡಲಾಗಿದೆ. ತನಿಖೆ ಮುಗಿಯುವಲ್ಲಿಯವರೆಗೆ ಆಡಳಿತ ಮಂಡಳಿ ರಾಜೀನಾಮೆ ನೀಡಬೇಕು ಮತ್ತು ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಅರುಣ್ ಮಾಚಯ್ಯ ಒತ್ತಾಯಿಸಿದರು. ವಿಯೆಟ್ನಾಂನಿಂದ ಕಾಳು ಮೆಣಸು ಆಮದು ಮಾಡಿಕೊಳ್ಳುವದನ್ನು ಕೇಂದ್ರ ಸರ್ಕಾರ ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದ ಅವರು, ಪ್ರಕಣದ ಬಗ್ಗೆ ಕೇಂದ್ರ ವಾಣಿಜ್ಯ ಇಲಾಖೆಗೂ ದೂರು ನೀಡಲಾಗುವದೆಂದರು.
ಕಾಳು ಮೆಣಸು ಆಮದು ದಂಧೆಯಲ್ಲಿ ರಾಜಕಾರಣಿಗಳು ಹಾಗೂ ಪ್ರಭಾವಿಗಳು ಶಾಮೀಲಾಗಿರುವ ಬಗ್ಗೆ ಶಂಕೆ ಇದೆ ಎಂದು ಆರೋಪಿಸಿದರು. ಕೊಡಗಿನ ರೈತರ ಪರವಾಗಿ ಪಕ್ಷ ಯಾವದೇ ಹೋರಾಟಕ್ಕೆ ಸಿದ್ಧವೆಂದು ಅರುಣ್ ಮಾಚಯ್ಯ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಮಾತನಾಡಿ, ಎಪಿಎಂಸಿ ಗೋದಾಮಿನಲ್ಲಿ ಸಂಶಯಕ್ಕೀಡು ಮಾಡುವ ಕಪ್ಪು ಹುಡಿ ಮತ್ತು ಯಂತ್ರಗಳು ಪತ್ತೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ರೈತರ ನಂಬಿಕೆಗೆ ದ್ರೋಹ ಮಾಡಲಾಗಿದ್ದು, ಕರಿಮೆಣಸಿನ ಬೆಲೆ 700 ರೂ. ಗಳಿಂದ 300-350 ರೂ.ಗಳಿಗೆ ಕುಸಿದಿದೆ. ಎಪಿಎಂಸಿ ಆಡಳಿತ ಮಂಡಳಿ ರೈತರ ಕ್ಷಮೆ ಕೇಳುವದರೊಂದಿಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ, ಬಿಜೆಪಿ ತನ್ನ ಪಕ್ಷದವರಿಂದ ಆಗಿರುವ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಲೇ ಬರುತ್ತಿದೆ ಯೆಂದು ಉಮೇಶ್ ಟೀಕಿಸಿದರು. ಕಾಂಗ್ರೆಸ್ ರೈತರ ಪರವಾದ ಹೋರಾಟ ನಡೆಸುತ್ತಿದೆಯೇ ಹೊರತು ರಾಜಕೀಯ ಹೋರಾಟ ಅಲ್ಲವೆಂದು ಉಮೇಶ್ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಮಾತನಾಡಿ, “ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ” ಅಭಿಯಾನಕ್ಕೆ ತಾ.23 ರಂದು ರಾಜ್ಯ ಮಟ್ಟದಲ್ಲಿ ಚಾಲನೆ ದೊರೆಯುತ್ತಿದ್ದು, ಕೊಡಗು ಜಿಲ್ಲೆಯಲ್ಲೂ ಬೆಳಗ್ಗೆ 11.30ಕ್ಕೆ ಸೋಮವಾರಪೇಟೆಯಲ್ಲಿ ಅಭಿಯಾ&divound; Àವನ್ನು ಉದ್ಘಾಟಿಸ ಲಾಗುವದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟು ಮೊಣ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲಾಂ ಹಾಗೂ ಪೆÀÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಉಪಸ್ಥಿತರಿದ್ದರು.