ಮಡಿಕೇರಿ, ಸೆ. 22: ಶಾಸಕ ಕೆ.ಜಿ. ಬೋಪಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನರವಿ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಾಮು ಗೌಡ ಒಕ್ಕಲಿಗ ಎಂಬವರ ಹೆಸರಿನಲ್ಲಿ ಹಾಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ನವೀಕರಣ ಹೆಸರಿನಲ್ಲಿ ಕೋಟಿ ಕೋಟಿ ಗುಳುಂ ಮಾಡಿದ್ದಾರೆ ಎಂಬ ಸುಳ್ಳು ಆಪಾದನೆಯನ್ನು ಮಾಡುತ್ತಿದ್ದು, ಸುಳ್ಳು ಸುದ್ದಿಯನ್ನು ಹರಿಯಬಿಡಲಾಗಿದೆ. ಚುನಾವಣೆ ಹತ್ತಿರ ಸಮೀಪಿಸು ತ್ತಿರುವಂತೆ ಈ ರೀತಿಯ ಅಪಪ್ರಚಾರದಿಂದ ಕೂಡಿದ ಮತ್ತು ಬೋಪಯ್ಯ ಅವರ ಹೆಸರಿನಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿರುವದು ತಿಳಿಯುತ್ತದೆ. ಅಲ್ಲದೆ ಕೊಡಗಿನ ಕೆಲಮಂದಿಯೂ ಕೂಡ ಜಾಲತಾಣವನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಮಾನಸಿಕವಾಗಿ ನೊಂದಿದ್ದು, ಇವರನ್ನು ಉದ್ದೇಶ ಪೂರ್ವಕವಾಗಿ ಹಿಂಸಿಸುತ್ತಿದ್ದಾರೆ. ಅಲ್ಲದೆ, ಚುನಾವಣೆಯ ಸಂದರ್ಭದಲ್ಲಿ ಇವರನ್ನು ದೈಹಿಕವಾಗಿ ಹಿಂಸಿಸುವ ಉದ್ದೇಶವೂ ಆಗಿರುವದರಿಂದ ಈ ರೀತಿಯಾದಂತಹ ಸುಳ್ಳು ಅಪಪ್ರಚಾರವನ್ನು ಮಾಡುತ್ತಿರುವವರ ಬಗ್ಗೆ ಹಾಗೂ ಇದರ ಹಿಂದೆ ಇರುವವರ ಬಗ್ಗೆ ಸೂಕ್ತ ತನಿಖೆಯನ್ನು ಕೈಗೊಂಡು ಕೂಡಲೇ ಬಂಧಿ¸ Àಬೇಕೆಂದು, ಅಲ್ಲದೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲು ದುರುಪಯೋಗ ಮಾಡುತ್ತಿರುವವರ ಫೇಸ್‍ಬುಕ್ ಪೇಜುಗಳನ್ನು ಸೈಬರ್ ಕಾಯ್ದೆ ಅನ್ವಯ ಸ್ಥಗಿತಗೊಳಿಸಿ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.