ಮಡಿಕೇರಿ, ಸೆ. 23: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿದ ಆರೋಪವನ್ನು ಎದುರಿಸುತ್ತಿರುವ ಪೆÇನ್ನಂಪೇಟೆ ಪೆÀÇಲೀಸ್ ಠಾಣೆಯ ಸಿಬ್ಬಂದಿ ಸಮೀರ್ ಅವರನ್ನು ಅಮಾನತುಗೊಳಿಸಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಪೆÀÇಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದರೂ ಸಿಬ್ಬಂದಿ ಸಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಹುದ್ದೆಯಿಂದ ವಜಾಗೊಳಿಸ ದಿದ್ದಲ್ಲಿ ಪೆÀÇನ್ನಂಪೇಟೆ ಪೆÀÇಲೀಸ್ ಠಾಣೆಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದ ಅವರು, ಕೊಡಗು ಜಿಲ್ಲಾ ಪೆÀÇಲೀಸ್ ನಿಷ್ಕ್ರೀಯವಾಗಿದೆ ಎಂದು ಟೀಕಿಸಿದರು. ಕಕ್ಕಬೆಯ ಶ್ರೀ ಭಗವತಿ ದೇವಾಲಯದ ಗೇಟ್‍ನಲ್ಲಿ ಗೋವುಗಳ ಕಾಲುಗಳನ್ನಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಒಂದು ವಾರದ ಒಳಗೆ ಬಂಧಿಸದಿದ್ದಲ್ಲಿ ಕಕ್ಕಬೆಯಿಂದ ಮಡಿಕೆÉೀರಿಯ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಕಾಲ್ನಡಿಗೆ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿ, ಘಟನೆ ನಡೆದು ಇಷ್ಟು ದಿನಗಳೇ ಕಳೆದಿದ್ದರೂ ಪೆÀÇಲೀಸರು ಆರೋಪಿಗಳನ್ನು ಬಂಧಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕುಶಾಲನಗರದ ಪ್ರವೀಣ್ ಪÀÇಜಾರಿ ಹತ್ಯಾ ಪ್ರಕರಣ ಸೇರಿದಂತೆ ಇನ್ನಿತರ ಕೆಲವು ಕೊಲೆ ಪ್ರಕರಣಗಳಲ್ಲಿ ಪಾಲ್ಗೊಂಡಿರುವದು ಸಾಬೀತಾಗಿದೆ ಎಂದು ಆರೋಪಿಸಿದ ಅವರು, ಈ ಸಂಘಟನೆಯನ್ನು ತಕ್ಷಣ ನಿಷೇಧಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಯುವ ಮೋರ್ಚಾದ ಮಡಿಕೆÉೀರಿ ತಾಲೂಕು ಅಧ್ಯಕ್ಷ ಧನಂಜಯ ಅಗೋಳಿಕಜೆ, ಪ್ರಮುಖರಾದ ಸೂರಜ್ ತಿಮ್ಮಯ್ಯ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.