ಗೋಣಿಕೊಪ್ಪಲು, ಸೆ. 23: ಗೋಣಿಕೊಪ್ಪಲು ದಸರಾ ಶೋಭಾಯಾತ್ರೆ ಹಾಗೂ ಜನದಟ್ಟಣಿಂiÀi ನಿಯಂತ್ರಣಕ್ಕೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮತ್ತು ವೀರಾಜಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ 39ನೇ ವರ್ಷದ ದಸರಾ ನಾಡಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಅಧ್ಯಕ್ಷತೆಯಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಶಾಂತಿ ಸಭೆ ಹಾಗೂ ಪೂರ್ವಭಾವಿ ವ್ಯವಸ್ಥೆ ಕುರಿತಂತೆ ಅಭಿಪ್ರಾಯ ಸಂಗ್ರಹಿಸಲಾಯಿತು.

ಗೋಣಿಕೊಪ್ಪಲು ದಶಮಂಟಪದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು, ಈ ಬಾರಿಯ ದಸರಾ ನಾಡಹಬ್ಬ ಶಾಂತಿ ಹಾಗೂ ಸುವ್ಯವಸ್ಥೆಯೊಂದಿಗೆ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲ ದಶಮಂಟಪಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಹಕರಿಸಲು ಕೋರಿದರು.

ಕಳೆದ ವರ್ಷದಂತೆ ಈ ಬಾರಿಯೂ ಗೋಣಿಕೊಪ್ಪಲು ನಾಲ್ಕು ದಿಕ್ಕಿನಲ್ಲಿಯೂ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಹೇಳಿದರು. ವೀರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಕಾವೇರಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಮೈಸೂರು ಕಡೆಯಿಂದ ಬರುವ ವಾಹನಗಳಿಗೆ ಎಪಿಎಂಸಿ ಯಾರ್ಡ್‍ನಲ್ಲಿ ಪಾರ್ಕಿಂಗ್ ವ್ಯವಸ್ಥೆ, ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ ಕೊಪ್ಪದ ರಸ್ತೆಯ ಒಂದು ಬದಿಯಲ್ಲಿ ಪಾರ್ಕಿಂಗ್ ಹಾಗೂ ಪೆÇನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ ಹಿಂದೂ ರುದ್ರಭೂಮಿಯ ಸಮೀಪದಿಂದ ರಸ್ತೆ ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವದು. ಇದೇ ಸಂದರ್ಭ ದಸರಾ ಅಭಿಮಾನಿಗಳನ್ನು ಗೋಣಿಕೊಪ್ಪಲು ಮುಖ್ಯರಸ್ತೆಗೆ ಕರೆತರಲು ಮಿನಿ ಬಸ್ ಸೌಲಭ್ಯವನ್ನು ಈ ಬಾರಿ ಕಲ್ಪಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಹೇಳಿದರು. ಅರುವತ್ತೊಕ್ಕಲು ಕಾಡ್ಲಯ್ಯಪ್ಪ ದಸರಾ ಸಮಿತಿ ಮತ್ತು ಕೈಕೇರಿ ಶ್ರೀ ಭಗವತಿ ಯುವ ದಸರಾ ಸಮಿತಿ ತೇರುಗಳು ಆದಷ್ಟು ಶೀಘ್ರ ಶೋಭಾಯಾತ್ರೆ ಮೆರವಣಿಗೆ ಆರಂಭಗೊಳ್ಳುವ ಉಮಾ ಮಹೇಶ್ವರಿ ದೇವಸ್ಥಾನದ ಸಮೀಪ ಬಂದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚು ಸಹಕಾರಿಯಾಗಲಿದೆ. ಅಮ್ಮತ್ತಿ-ಹೊಸೂರು ಭಾಗದ ವಾಹನಗಳಿಗೆ ಕಿತ್ತಳೆ ಬೆಳೆಗಾರರ ಸಂಘದ ಕಟ್ಟಡ ಸಮೀಪದಿಂದ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು. ಕಳೆದ ಬಾರಿಯಂತೆ ಈ ಬಾರಿಯೂ ಜಿಲ್ಲೆಯ ಪೆÇಲೀಸರಲ್ಲದೆ ಹೊರ ಜಿಲ್ಲೆಯ ಪೆÇಲೀಸರ ನಿಯೋಜನೆ, ಕೆಎಸ್‍ಆರ್‍ಪಿ, ಜಿಲ್ಲಾ ಪೆÇಲೀಸ್ ಸಶತ್ರ ಪೆÇಲೀಸ್ ತುಕ್ಕಡಿ, ಹೋಮ್‍ಗಾರ್ಡ್, ಎನ್‍ಸಿಸಿ ಮತ್ತು ಇದೇ ಪ್ರಥಮ ಬಾರಿಗೆ ರ್ಯಾಂಬೋ ತಂಡ ನಿಯೋಜಿಸಲಾಗುತ್ತಿದೆ ಎಂದು ಹೇಳಿದರು. ಅಲ್ಲಲ್ಲಿ ಗಲಾಟೆ, ಅಹಿತಕರ ಘಟನೆಯಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ರ್ಯಾಂಬೋ ತಂಡ ನೆರವಾಗಲಿದೆ ಎಂದು ಮಾಹಿತಿ ನೀಡಿದರು. ಸುಪ್ರೀಂಕೋರ್ಟ್ ಆದೇಶದಂತೆ ಡಿ.ಜೆ. ಸೌಂಡ್‍ಗೆ ಅವಕಾಶವಿಲ್ಲ. ಕೊಡವ ವಾಲಗ ಇತ್ಯಾದಿ ಸಣ್ಣ ಪ್ರಮಾಣದ ಧ್ವನಿವರ್ಧಕ ಸಂಗೀತಕ್ಕೆ ಅಭ್ಯಂತರವಿಲ್ಲ ಎಂದು ಹೇಳಿದರು.

ಗೋಣಿಕೊಪ್ಪಲು ಬೈಪಾಸ್ ರಸ್ತೆ ಗುಂಡಿಯನ್ನು ಜಿ.ಪಂ. ಇಂಜಿನಿಯರಿಂಗ್ ಅನುದಾನದ ಮೂಲಕ ತಾತ್ಕಾಲಿಕವಾಗಿ ಮುಚ್ಚಲಾಗುವದು. ಗೋಣಿಕೊಪ್ಪಲು ವಾಹನ ದಟ್ಟಣೆ ನಿಯಂತ್ರಣಕ್ಕೆ ಅಧಿಕ ಪೆÇಲೀಸ್ ಸಿಬ್ಬಂದಿ ನಿಯೋಜಿಸುವಂತೆ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮನವಿ ಮಾಡಿದರು. ಗೋಣಿಕೊಪ್ಪಲು ರಾಜ್ಯ ಹೆದ್ದಾರಿಯು ಲೋಕೋಪಯೋಗಿ ಇಲಾಖೆಯ ಸುಪರ್ದಿಗೆ ಈ ಬಾರಿ ಬರುತ್ತಿಲ್ಲ ಹೀಗಿದ್ದೂ ಮುಖ್ಯರಸ್ತೆಯ ಹೊಂಡ ಮುಚ್ಚುವ ಕೆಲಸ ಮಾಡಲಾಗುವದು ಎಂದು ಶ್ರೀ ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಮಾಹಿತಿ ನೀಡಿದರು.

ಗೋಣಿಕೊಪ್ಪಲು ಬೈಪಾಸ್ ರಸ್ತೆ ಗುಂಡಿ ಮುಚ್ಚಲು ರೂ. 2 ಲಕ್ಷ ಅನುದಾನವನ್ನು ಜಿ.ಪಂ. ಭರಿಸಲಿದೆ. ಉಳಿಕೆ ಅನುದಾನ ಗೋಣಿಕೊಪ್ಪಲು ಗ್ರಾ.ಪಂ.ಮೂಲಕ ಭರಿಸಬೇಕಾಗಿದೆ ಎಂದು ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪೂಣಚ್ಚ ಮಾಹಿತಿ ನೀಡಿದರು.

ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಮಾತನಾಡಿ, ಮೈಸೂರು ದಸರಾ ನಂತರ ಕೊಡಗಿನ ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಮನೆಮಾತಾಗಿದೆ. ವಿಜಯದಶಮಿ ದಿನ ಸಂಜೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಗೋಣಿಕೊಪ್ಪಲು ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಇದ್ದು ಸಾರ್ವಜನಿಕರ ಸಹಕಾರ ಅಗತ್ಯವಿದೆ. ಸುಮಾರು 500 ಮಂದಿ ಪೆÇಲೀಸರ ನಿಯೋಜನೆ ಇದ್ದರೂ, ದಶಮಂಟಪಗಳ ಉಸ್ತುವಾರಿ ಹೊತ್ತವರು ಸ್ವಯಂಸೇವಕರ ತಂಡದ ಮೂಲಕ ಕಾನೂನು ಸುವ್ಯವಸ್ಥೆಗೆ ಸಹಕರಿಸಬೇಕಾಗಿದೆ. ಯಾವದೇ ಅಹಿತಕರ ಘಟನೆ ನಡೆಯದಿರುಲು ಎಲ್ಲರ ಜವಾಬ್ದಾರಿಯೂ ಇದೆ. ಡಿಜೆ ಸಂಗೀತವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸ್ಥಳೀಯ ಸಾಂಪ್ರದಾಯಿಕ ಸಂಗೀತ ವ್ಯವಸ್ಥೆಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಗೋಣಿಕೊಪ್ಪಲು ದಸರಾ ಆಚರಣೆ ಶಾಂತಿ ಸುವ್ಯವಸ್ಥೆಯೊಂದಿಗೆ ಆಚರಿಸಲು ಎಲ್ಲರ ಸಹಕಾರಕ್ಕೆ ಮನವಿ ಮಾಡಿದರು.

ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ತಾಲೂಕು ಆಡಳಿತದಿಂದ ಶಾಂತಿಯುತ ದಸರಾ ಆಚರಣೆಗೆ ಎಲ್ಲ ಪೂರಕ ನೆರವು ನೀಡಲಾಗುವದು ಎಂದು ಹೇಳಿದರು. ಪೆÇನ್ನಂಪೇಟೆ ರಸ್ತೆ ತಿರುವಿನಲ್ಲಿ ಬಸ್ ನಿಲುಗಡೆಯಿಂದ ವಾಹನ ಸಂಚಾರಕ್ಕೆ ದಿನನಿತ್ಯ ಅಡಚಣೆ ಉಂಟಾಗುತ್ತಿರುವದಾಗಿ ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್ ಅಭಿಪ್ರಾಯಪಟ್ಟರು.

ಇದೇ ಸಂದರ್ಭ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ದಸರಾ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು. ಕೈಕೇರಿ ಭಗವತಿ ಯುವ ದಸರಾ ಸಮಿತಿ ಅಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ, ದಶಮಂಟಪ ಅಧ್ಯಕ್ಷ ಅರಸು ಅಪ್ಪಣ್ಣ, ಅರುವತ್ತೊಕ್ಕಲು ಶ್ರೀ ಕಾಡ್ಲಯ್ಯಪ್ಪ ದಸರಾ ಸಮಿತಿ ಅಧ್ಯಕ್ಷ ಸಜನ್ ಚಂಗಪ್ಪ, ಅಮ್ಮತ್ತೀರ ವಿಕ್ರಂ ಅವರು ರಾತ್ರಿ 9 ಗಂಟೆಯ ನಂತರವೇ ಈ ಭಾಗದಿಂದ ಉತ್ಸವ ಮೂರ್ತಿ ಹೊರಡಲು ಸಾಧ್ಯ. ಈ ನಿಟ್ಟಿನಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಹಕರಿಸಲು ಪೆÇಲೀಸರಿಗೆ ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷ ಕೆ. ರಾಜೇಶ್, ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪ, ಜಪ್ಪು ಅಚ್ಚಪ್ಪ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ವೀರಾಜಪೇಟೆ ತಾ.ಪಂ. ಇಓ ಪೆಡ್ನೇಕರ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಪೆÇನ್ನಂಪೇಟೆ ಪೆÇಲೀಸ್ ವೃತ್ತ ನಿರೀಕ್ಷಕ ಮಹೇಶ್ ಮುಂತಾದವರು ಉಪಸ್ಥಿತರಿದ್ದರು. ಗೋಣಿಕೊಪ್ಪಲು ಸೆಸ್ಕ್ ಅಧಿಕಾರಿಗಳು ಮುಖ್ಯರಸ್ತೆಯ ವಿದ್ಯುತ್ ಸಮರ್ಪಕ ವ್ಯವಸ್ಥೆಗೆ ಸಹಕರಿಸುವದಾಗಿ ಭರವಸೆ ನೀಡಿದರು.

ಸಭೆಯಲ್ಲಿ ದಶಮಂಟಪಗಳ ಅಧ್ಯಕ್ಷರು, ಗ್ರಾ.ಪಂ. ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆ ಮುಖ್ಯಸ್ಥರು ಉಪಸ್ಥಿತರಿದ್ದರು.

- ಟಿ.ಎಲ್. ಶ್ರೀನಿವಾಸ್