ಮಡಿಕೇರಿ, ಸೆ. 23: ಮಡಿಕೇರಿ ದಸರಾ ಸಮಿತಿ ಹಾಗೂ ಸಾಂಸ್ಕøತಿಕ ಸಮಿತಿ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಸ್ಥಳೀಯ ಕಲಾವಿದರು ಬಲಿಪಶುಗಳಾಗುತ್ತಿದ್ದಾರೆ.

ದಸರಾ ಉತ್ಸವಕ್ಕೆ ಅನುದಾನ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ಉಪ ಸಮಿತಿಗಳಿಗೂ ಅನುದಾನ ಹಂಚಿಕೆಯಲ್ಲಿ ಕಡಿತಗೊಳಿಸಲಾಗಿದ್ದು, ಈ ನಡುವೆ ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಸ್ಥಳೀಯ ಕಲಾವಿದರುಗಳಿಗೂ ಸಂಭಾವನೆ ನೀಡದಂತೆ ತೀರ್ಮಾನಕೈಗೊಳ್ಳಲಾಗಿದ್ದು, ನಿನ್ನೆ ಕಾರ್ಯಕ್ರಮ ನೀಡಿದ ಸ್ಥಳೀಯ ಕಲಾವಿದರು ಕೇವಲ ಪ್ರಶಂಸನಾ ಪತ್ರ ಪಡೆದು ಹಿಂತಿರುಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಅವರು ಸರಕಾರದ ರೂ. 50 ಲಕ್ಷ ಅನುದಾನದ ನಿರೀಕ್ಷೆಯಲ್ಲಿ ದಸರಾ ಉತ್ಸವ ಆಚರಣೆಗೆ ಮುಂದಾಗಿದ್ದೇವೆ. 50 ಲಕ್ಷದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ವೇದಿಕೆಗಾಗಿ ರೂ. 30.50 ಲಕ್ಷ ವ್ಯಯಿಸಲಾಗುತ್ತಿದೆ. ದಸರಾ ಸಾಂಸ್ಕøತಿಕ ಸಮಿತಿ ರೂ. 13 ಲಕ್ಷದ ಬಜೆಟ್ ಮುಂದಿಟ್ಟಿದ್ದು, ಪರಿಶೀಲಿಸಿ ಸ್ವಲ್ಪ ಕಡಿತಗೊಳಿಸಿ ಅನುದಾನ ನೀಡಲಾಗುವದು. ಯುವ ದಸರಾ ಆಚರಣೆಗೆ ರೂ. 1.50 ಲಕ್ಷ ಮೀಸಲಿಡಲಾಗಿದೆ.

ಒಟ್ಟು ಅನುದಾನದಲ್ಲಿ ಶೇ. 50 ರಷ್ಟನ್ನು ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿಯೇ ವಿನಿಯೋಗಿಸಲಾಗುತ್ತಿದೆ. ಸ್ಥಳೀಯ ಕಲಾವಿದರಿಗೆ ಸಂಭಾವನೆ ನೀಡುವದಿಲ್ಲ ಎಂದು ಹೇಳಿಲ್ಲ. ಸಾಂಸ್ಕøತಿಕ ಸಮಿತಿಗೆ ನೀಡಲಾಗುವ ಅನುದಾನದಲ್ಲಿ ಎಲ್ಲ ಕಲಾವಿದರಿಗೆ ಆ ಸಮಿತಿಯವರೇ ಹಣ ನೀಡಬೇಕಾಗಿದೆ. ಅಲ್ಲದೆ ಸಾಂಸ್ಕøತಿಕ ಸಮಿತಿಯವರು ತಮ್ಮ ಬಜೆಟ್ ಅನ್ನು ಮೊದಲೇ ತಿಳಿಯಪಡಿಸಿದ್ದಿದ್ದರೆ ಅನುಕೂಲವಾಗುತ್ತಿತ್ತು. ಇದೀಗ ಕಷ್ಟದಲ್ಲಿ ದಸರಾ ಆಚರಿಸುವಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ದಸರಾದಲ್ಲಿ ಕಾರ್ಯಕ್ರಮ ನೀಡಲು ಕಲಾವಿದರಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಸಮಿತಿಗೆ ನೀಡುವ ಅನುದಾನದಲ್ಲಿ ಕಲಾವಿದರಿಗೆ ಹಂಚಿಕೆ ಮಾಡಬೇಕೆಂದು ಹೇಳಿದರು.

ಹಣ ನೀಡಿಲ್ಲ: ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಅವರ ಪ್ರಕಾರ ತಾವು ನೀಡಿದ ಬಜೆಟ್ ಅನ್ನು ಕಡಿತಗೊಳಿಸಿ ಸಾಂಸ್ಕøತಿಕ ಸಮಿತಿಗೆ ರೂ. 8 ಲಕ್ಷ ನೀಡುವದಾಗಿ ಸಮಿತಿಯವರು ಹೇಳಿದ್ದು, ಅದರಲ್ಲಿ ಸ್ಥಳೀಯ ಕಲಾವಿದರಿಗೆ ಸಂಭಾವನೆ ನೀಡಬಾರದೆಂದು ಸೂಚಿಸಿದ್ದಾರೆ. ಹಾಗಾಗಿ ಕಷ್ಟವಾಗುತ್ತಿದೆ. ಅಲ್ಲದೆ ಸಮಿತಿಯಿಂದ ಸಂಭಾವನೆ ನೀಡಲು ಹಣ ಕೂಡ ಇನ್ನು ಬಿಡುಗಡೆಯಾಗಿಲ್ಲ. ದಸರಾ ಸಮಿತಿಯ ತೀರ್ಮಾನಕ್ಕೆ ಕಾಯುತ್ತಿರುವದಾಗಿ ಹೇಳಿದರು.

ಅಲ್ಪ ಅವಧಿಯಲ್ಲಿ ದಸರಾ ಸಮಿತಿ ವಿಜೃಂಭಣೆಯ ಆಚರಣೆಗೆ ಮುಂದಾಗಿದ್ದು, ಯಶಸ್ವಿಯಾಗಿ ದಸರಾ ಆಚರಣೆಗೆ ಪಣ ತೊಟ್ಟು ಶ್ರಮಿಸುತ್ತಿದೆ. ಆದರೆ, ಈ ಸಣ್ಣ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಇದಕ್ಕೆ ತೆರೆ ಎಳೆದು ಶಾಂತಿಯುತ, ಸೌಹಾರ್ದಯುತ, ಸ್ಮøತಿಪಟಲದಲ್ಲಿ ಅಚ್ಚಳಿಯದಂತೆ ಉಳಿಯುವ ದಸರಾ ಆಚರಿಸುವಂತಾಗಲಿ ಎಂಬ ಆಶಯ ನಮ್ಮದು...

-ಸಂತೋಷ್