ಮಡಿಕೇರಿ, ಸೆ. 23: ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ತಾ. 24ರಂದು (ಇಂದು) 5ನೇ ವರ್ಷದ ಮಹಿಳಾ ದಸರಾ ಆಯೋಜಿತವಾಗಿದ್ದು, ಹಬ್ಬದ ಸಂಭ್ರಮ ಕಳೆಕಟ್ಟಿದೆ.
ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಮಹಿಳೆಯರಿಗಾಗಿ ಮಡಿಕೇರಿ ನಗರಸಭಾ ಸದಸ್ಯೆಯರು ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದೊಂದಿಗೆ ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಅಲಂಕಾರ ಮಾಡುವ ಸ್ಪರ್ಧೆ, ಭಾರತೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ವಾಲಗತಾಟ್, ಗೋಲಿ ಮತ್ತು ಲಗೋರಿ ಸ್ಪರ್ಧೆ, ಹೂವಿನ ಹಾರ ಮಾಡುವ ಸ್ಪರ್ಧೆ, ಜತೆಗೆ ಎರಡನೇ ವರ್ಷದ ಸಿರಿಧಾನ್ಯ ಮೇಳದಲ್ಲಿ ಗ್ರಾಮೀಣ ಖಾದ್ಯಗಳ ವೈವಿಧ್ಯ ಬಿಂಬಿಸುವ ಸ್ಪರ್ಧೆ ಮತ್ತು ಪ್ರದರ್ಶನ ಆಯೋಜಿತವಾಗಿದೆ.
ಮಹಿಳಾ ದಸರಾವನ್ನು ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಗಾಟಿಸಲಿದ್ದು, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೇಂದ್ರ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪೌರಾಯುಕ್ತೆ ಬಿ.ಶುಭಾ, ಕೂಡಿಗೆ ಕ್ರೀಡಾ ಶಾಲೆಯ ಪ್ರಾಂಶುಪಾಲೆ ಕುಂತಿಬೋಪಯ್ಯ, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ, ಕೆ.ಎಸ್.ಆರ್.ಟಿ.ಸಿ. ಮಡಿಕೇರಿ ವಿಭಾಗ ವ್ಯವಸ್ಥಾಪಕಿ ಗೀತಾ, ದಸರಾ ಸಮಿತಿ ಖಜಾಂಜಿ ಸಂಗೀತ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಮಮ್ತಾಜ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಅಧ್ಯಕ್ಷೆ ಮೇರಿ ಅಂಬುದಾಸ್ , ನಗರಸಭೆಯ ಎಲ್ಲಾ ಮಹಿಳಾ ಸದಸ್ಯೆಯರು ಪಾಲ್ಗೊಳ್ಳಲಿದ್ದಾರೆ.
ಸಂಜೆ 6. 30 ಗಂಟೆಗೆ ಆಯೋಜಿತ ಮಹಿಳಾ ದಸರಾ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಮಹಿಳಾ ದಸರಾ ಅಂಗವಾಗಿ ಭಾನುವಾರ ಸಂಜೆ 6.30 ಗಂಟೆಯಿಂದ ಮಹಿಳೆಯರಿಂದಲೇ ಸಾಂಸ್ಕೃತಿಕ ವೈವಿಧ್ಯ ಆಯೋಜಿಸಲ್ಪಟ್ಟಿದೆ. ರಾಜ್ಯದ ಹೆಸರಾಂತ ಹಿನ್ನಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ತಂಡದಿಂದ ಶಮಾ ಲೈವ್ ಇನ್ ಕನ್ಸರ್ಟ್ ಸಂಗೀತ ರಸಸಂಜೆ ಈ ಬಾರಿಯ ಮಹಿಳಾ ದಸರಾದ ವಿಶೇಷವಾಗಿದೆ. ಅಂತೆಯೇ ನಾಯರ್ಸ್ ಸರ್ವೀಸ್ ಸೊಸೈಟಿ ತಂಡದಿಂದ ತಿರುವಾದಿರ ನೃತ್ಯ, ಮಡಿಕೇರಿಯ ಸ್ಪಂದನಾ ಮಹಿಳಾ ತಂಡದಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಧನಶ್ರೀ ಮಹಿಳಾ ಸಂಘದಿಂದ ಸಮೂಹ ನೃತ್ಯ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ನೃತ್ಯ ವೈವಿಧ್ಯ, ಬಂಟರ ಮಹಿಳಾ ಸಂಘದಿಂದ ನೃತ್ಯ ವೈವಿಧ್ಯ ಹಾಗೂ ನೆಲ್ಲಕ್ಕಿ ಯುವತಿ ಮಂಡಳಿಯವರಿಂದ ಜನಪದ ವೈವಿಧ್ಯ ಆಯೋಜಿತವಾಗಿದೆ.
ಗೋಣಿಕೊಪ್ಪಲಿನಲ್ಲಿಂದು ‘ಮಿಸೆಸ್ ಕೂರ್ಗ್’ ಆಕರ್ಷಣೆ
ಗೋಣಿಕೊಪ್ಪಲು : ಜಿಲ್ಲಾ ಮಟ್ಟದ ನಾಲ್ಕನೇ ವರ್ಷದ ಮಹಿಳಾ ದಸರಾ ತಾ. 24ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಕಾವೇರಿ ಕಲಾ ವೇದಿಕೆಯಲ್ಲಿ ಜರುಗಲಿದೆ. ಸಂಜೆ 6.30 ಗಂಟೆಗೆ ದೀಪಿಕಾ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಗ್ರಾ.ಪಂ. ಮಾಜೀ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ, ಮಂಜುಳಾ ಹಾಗೂ ಪ್ರಭಾವತಿ ಒಳಗೊಂಡಂತೆ ಹಲವು ಮಹಿಳೆಯರ ಶ್ರಮದೊಂದಿಗೆ ಈ ಬಾರಿ ಮತ್ತಷ್ಟು ಅದ್ಧೂರಿತನಕ್ಕೆ ಒತ್ತು ನೀಡಲಾಗಿದೆ. ಮಹಿಳಾ ದಸರೆಯ ವಿಶೇಷ ಆಕರ್ಷಣೆ ‘ಮಿಸೆಸ್ ಗೋಣಿಕೊಪ್ಪಲು ಸ್ಪರ್ಧೆ’. ಈ ಬಾರಿಯೂ ‘ಮಿಸೆಸ್ ಕೂರ್ಗ್’ ಎಂದು ಜಿಲ್ಲಾ ಮಟ್ಟಕ್ಕೆ ಬದಲಾವಣೆಗೊಂಡಿದೆ. ಸೌಂದರ್ಯ ರಾಣಿಯ ಕಿರೀಟ ಧರಿಸಲು ಹಲವು ಮಹಿಳಾ ಮಣಿಗಳು ಇದೀಗ ಪೈಪೆÇೀಟಿಯಲ್ಲಿದ್ದಾರೆ.
ಆಹಾರ ತಯಾರಿ ಸ್ಪರ್ಧೆ, ತಿಂಡಿ ತಯಾರಿ ಸ್ಪರ್ಧೆ, ತರಕಾರಿ ಬಳಸಿ ಹಲ್ವ ತಯಾರಿ, ಹೂವಿನ ಅಲಂಕಾರ, ಪಿಕ್ ಅಂಡ್ ಆಕ್ಟ್, ಸಾಮೂಹಿಕ ಜಾನಪದ ಗೀತೆ ಸ್ಪರ್ಧೆ, ಸಮೂಹ ನೃತ್ಯ, ಅದೃಷ್ಟ ಮಹಿಳೆ, ಛದ್ಮವೇಷ, ಬಾಂಬ್ ಇನ್ದ ಸಿಟಿ, ಹಗ್ಗ-ಜಗ್ಗಾಟ, ವಾಲಗತ್ತಾಟ್, ‘ಸ್ಟ್ರಾ’ ದಿಂದ ಕೂದಲು ಅಲಂಕಾರ, ಸೀರೆಯ ನಿಖರ ಬೆಲೆ ಹೇಳುವದು, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ವೇಗದ ನಡೆ ಸ್ಪರ್ಧೆ, ಮೊಬೈಲ್ ಬಳಕೆ ಒಳಿತು-ಕೆಡಕು ಕುರಿತು ಚರ್ಚಾ ಸ್ಪರ್ಧೆ ಇತ್ಯಾದಿ ಪೈಪೆÇೀಟಿಗಳು ಮೂಡಿ ಬರಲಿದೆ.
ಅತಿಥಿಗಳು: 4ನೇ ವರ್ಷದ ಮಹಿಳಾ ದಸರಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷೆ ಪ್ರಮಿ ಮೊಣ್ಣಪ್ಪ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೆÇನ್ನಪ್ಪ, ತಾ.ಪಂ.ಅಧ್ಯಕ್ಷೆ ಸ್ಮಿತಾ ಬೊಳ್ಳಮ್ಮ, ಗ್ರಾ.ಪಂ.ಅಧ್ಯಕ್ಷೆ ಸೆಲ್ವಿ, ಮಾಜಿ ಎಂಎಲ್ಸಿ ಅರುಣ್ಮಾಚಯ್ಯ, ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ಗಣಪತಿ, ಕಾರ್ಯಾಧ್ಯಕ್ಷ ಬಿ.ಎನ್.ಪ್ರಕಾಶ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಎ.ಪಿ.ಲೀಲಾವತಿ( ಸಿಡಿಪಿಓ), ಕೊಡಗು ಜಿಲ್ಲಾ ಜನತಾ ದಳ ಅಧ್ಯಕ್ಷ ಸಂಕೇತ್ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ , ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಲತಾ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕಡೇಮಾಡ ಕುಸುಮಾ ಜೋಯಪ್ಪ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಕೆ.ಡಿ. ರತಿ, ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ ಮುಂತಾದವರು ಪಾಲ್ಗೊಳ್ಳಲಿದ್ದಾರೆ.