ಸುಂಟಿಕೊಪ್ಪ, ಸೆ. 24: ಇಂದೋ-ನಾಳೆಯೋ ಮುರಿದು ರಸ್ತೆ ಮೇಲೆ ಬೀಳಲಿರುವ ಈ ಅವಳಿ ಮರದಿಂದ ಶಾಲಾ ಮಕ್ಕಳಿಗೆ, ವಾಹನ ಚಾಲಕರಿಗೆ, ಪಾದಾಚಾರಿಗಳ ಪ್ರಾಣಕ್ಕೆ ಕುತ್ತು ತರುವ ಸಂಭವಿದೆ. ಅನಾಹುತ ಸಂಭವಿಸುವ ಮುನ್ನ ರಾಜ್ಯ ಹೆದ್ದಾರಿಯ ಐಗೂರಿನ ಜಂಕ್ಷನ್ನ ಟಾಟಾ ಎಸ್ಟೇಟ್ನಲ್ಲಿರುವ ಅರ್ಧದಲ್ಲೇ ಮುರಿದು ಬಿದ್ದು ಬೇಲಿಯಲ್ಲಿರುವ ಇನ್ನೊಂದು ಮರಕ್ಕೆ ತಾಗಿ ನಿಂತ ಮೇಫ್ಲವರ್ ಮರವನ್ನು ಟಾಟಾ ಎಸ್ಟೇಟ್ನವರು, ಚೆಸ್ಕಾಂ ಗಮನಹರಿಸಿ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೆಲದಿನಗಳ ಹಿಂದೆ ಕಿಟ್ಟಿ ಟಾಟಾ ಎಸ್ಟೇಟ್ನಲ್ಲಿದ್ದ ಬೃಹಾದಾಕಾರದ ಮೇಫ್ಲವರ್ ಮರ ಗಾಳಿ-ಮಳೆಗೆ ಬುಡದಿಂದ 5 ಅಡಿ ಮೇಲ್ಭಾಗದಿಂದ ಮುರಿದು ಬಿದ್ದು ಆ ಮರದ ಸಮೀಪದಲ್ಲೇ ಟಾಟಾ ಕಾಫಿ ಎಸ್ಟೇಟ್ನವರು, ರಸ್ತೆಗೆ ಬಾಗಿ ನಿಂತಿದ್ದ ಮರದ ರಂಬೆಗಳನ್ನು ಕತ್ತರಿಸಿ ಕೈ ತೊಳೆದು ಕೊಂಡರು.
ಈಗ ಮಳೆಯ ಆರ್ಭಟ ಹೆಚ್ಚಾಗಿದ್ದು ಬೃಹಾದಾಕಾರದ ಮರದ ಭಾರವನ್ನು ತಡೆಯಲಾಗದ ಇನ್ನೊಂದು ಮರದ ಬೇರುಗಳು ಸಡಿಲಗೊಳ್ಳುತ್ತಿದೆ. ದಿನನಿತ್ಯ ಬಸ್, ವಾಹನ, ರಿಕ್ಷಾ, ಲಾರಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಶಾಲಾ ಮಕ್ಕಳು ಈ ರಸ್ತೆಗಾಗಿ ತೆರಳಬೇಕಾಗಿದೆ. ಈ ಮರದ ಸುತ್ತ ಮುತ್ತಲು ವಿದ್ಯುತ್ ಕಂಬವು ಇದೆ ರಸ್ತೆ ಬದಿ ಮನೆ ಅಂಗಡಿಗಳು ಇದೆ ಮರ ಯಾವಾಗ ಬೇಕಾದರೂ ರಸ್ತೆಗೆ ಉರಳಬಹುದು.
ಚೆಸ್ಕಾಂ ಹಾಗೂ ಟಾಟಾ ಕಂಪೆನಿ ಮುಖ್ಯಸ್ಥರು ಮರವನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.