ಸೋಮವಾರಪೇಟೆ, ಸೆ. 24: ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕೈಲ್‍ಮೂಹೂರ್ತ ಸಂತೋಷಕೂಟ ಸಮಾರಂಭದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಶಿರಂಗಳ್ಳಿ ತಂಡ ಪ್ರಥಮ ಸ್ಥಾನ ಪಡೆದರೆ, ಗರ್ವಾಲೆ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಸೋಮವಾರಪೇಟೆ ತಂಡ ಪ್ರಥಮ ಹಾಗೂ ಶಿರಂಗಳ್ಳಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಸಂಗೀತ ಕುರ್ಚಿ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕೊಚ್ಚೇರ ಪೂವಯ್ಯ ಪ್ರಥಮ, ಚಾಮೇರ ರಾಜಾ ಪಳಂಗಪ್ಪ ದ್ವಿತೀಯ ಸ್ಥಾನ ಪಡೆದರು. ಮಹಿಳೆಯ ವಿಭಾಗದಲ್ಲಿ ಮಣವಟ್ಟಿರ ರೋನಿಕ ಕಾವೇರಪ್ಪ ಪ್ರಥಮ, ಉಡುವೆರ ರೇಖಾ ಲೋಕೇಶ್ ದ್ವಿತೀಯ ಸ್ಥಾನ ಪಡೆದರು. ವಾಲಗತಾಟ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪಾಸುರ ಲೋಕೇಶ್ ನಂಜಪ್ಪ ಪ್ರಥಮ, ಉಡುವೆರ ಶಿವು ಬೋಪಯ್ಯ ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಅಜ್ಜಮಕ್ಕಡ ಅಶಿತಾ ಕಾರ್ಯಪ್ಪ ಪ್ರಥಮ, ಬಾಚಿನಾಡಂಡ ಲತಾ ಕಾವೇರಪ್ಪ ದ್ವಿತೀಯ ಸ್ಥಾನ ಪಡೆದರು.

ಮಕ್ಕಳ ವಿಭಾಗದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಪಾಳೆಯಂಡ ಪ್ರಜ್ಞ ಪ್ರಥಮ, ಪಾಳೆಯಂಡ ಅನುಷ್ಕ ದ್ವಿತೀಯ ಸ್ಥಾನ ಗಳಿಸಿದರೆ ತೃತೀಯ ಸ್ಥಾನವನ್ನು ಮಲ್ಲಜಿರ ರೋಹನ್ ತಮ್ಮಯ್ಯ ಮತ್ತು ಬಾಚಿನಾಡಂಡ ಭುವನ್ ಕುಟ್ಟಪ್ಪ ಹಂಚಿಕೊಂಡರು.

ಕಪ್ಪೆ ಕುಪ್ಪಳಿಸುವ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಸರ್ಕಂಡ ಬೃಂದಾ ಪ್ರಥಮ, ಅಜ್ಜಮಕ್ಕಡ ಭವ್ಯ ದ್ವಿತೀಯ, ಹಂಚೆಟ್ಟಿರ ದೇಚಮ್ಮ ತೃತೀಯ ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಮಲ್ಲಾಜಿರ ಅಮಿತ್ ಅಯ್ಯಪ್ಪ ಪ್ರಥಮ, ಪಂದ್ಯಂಡ ಪ್ರತೀಕ್ ಕುಶಾಲಪ್ಪ, ಸರ್ಕಂಡ ಸೋಮಣ್ಣ ತೃತೀಯ ಸ್ಥಾನ ಪಡೆದರು.

ವಿಜೇತರುಗಳಿಗೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಟ್ಟಚೆರವಂಡ ನಾಚಪ್ಪ, ಮಾಜಿ ಗೈಡ್ಸ್ ಆಯುಕ್ತೆ ಮಣವಟ್ಟಿರ ಶಾರದ ಮಂದಣ್ಣ, ಕಾಫಿ ಬೆಳೆಗಾರÀ ಮಣವಟ್ಟಿರ ಲೀಲಾ ಅಯ್ಯಣ್ಣ ಬಹುಮಾನ ವಿತರಿಸಿದರು.